ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಮೂಸೆವಾಲಾ ಹಂತಕ ಬಿಷ್ಣೋಯ್

  • ಸಲ್ಮಾನ್ ಖಾನ್ ಕೊಲೆಗೆ ನಾಲ್ಕು ಲಕ್ಷ ಪಿಸ್ತೂಲು ಖರೀದಿ
  • ಖಾನ್ ಕೊಲೆ ಮಾಡಲು ಸಂಪತ್ ನೇಹ್ರಾ ಮುಂಬೈಗೆ 

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆಯ ವೇಳೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಯೋಜನೆಯಿತ್ತು ಎಂದು ಹೇಳಿಕೊಂಡಿದ್ದಾರೆ.

1998ರ ಕೃಷ್ಣಮೃಗ ಬೇಟೆ ಪ್ರಕರಣದ ಬಗ್ಗೆ ಪಾಠ ಕಲಿಸಲು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು 2018ರಲ್ಲಿ ಕೊಲ್ಲಲು ಬಯಸಿದ್ದರು ಎನ್ನುವುದು ವಿಚಾರಣೆಯ ಸಮಯದಲ್ಲಿ ಬಹಿರಂಗವಾಗಿದೆ.

ಮೂಲಗಳ ಪ್ರಕಾರ, ಪಂಜಾಬ್ ಪೊಲೀಸರು ವಿಚಾರಣೆ ನಡೆಸಿದಾಗ, ಲಾರೆನ್ಸ್‌ ಬಿಷ್ಣೋಯ್ ಕೊಲೆಯ ಸಂಚು ಬಹಿರಂಗಪಡಿಸಿದ್ದಾರೆ.

ಕೊಲೆಯನ್ನು ಕಾರ್ಯಗತಗೊಳಿಸಲು ಸಂಪತ್ ನೆಹ್ರಾನನ್ನು ಮುಂಬೈಗೆ ಕಳುಹಿಸಲಾಗಿತ್ತು. ನೆಹ್ರಾ ಸಲ್ಮಾನ್ ಖಾನ್ ಅವರ  ಮನೆಯ ಸುತ್ತಲೂ ಓಡಾಟ ನಡೆಸಿದ್ದ, ನೆಹ್ರಾ ಬಳಿ ದೂರದಿಂದ ಗುಂಡು ಹಾರಿಸುವ ಆಯುಧವಿರಲಿಲ್ಲ. ಕೇವಲ ಪಿಸ್ತೂಲ್ ಇತ್ತು. ದೂರದಿಂದ ಮಾತ್ರ ಸಲ್ಮಾನ್ ಖಾನ್ ಮೇಲೆ ದಾಳಿ ಮಾಡಬಹುದು ಎಂದು ಬಿಷ್ಣೋಯ್ ಪೊಲೀಸರಿಗೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಈ ಸುದ್ದಿ ಓದಿದ್ದೀರಾ? ಸಿಧು ಮೂಸೆವಾಲಾ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ

ಒಮ್ಮೆ ಪ್ರಯತ್ನ ಕೈಬಿಟ್ಟ ಕಾರಣ, ನಂತರ ಕೊಲೆ ಮಾಡಲು 4 ಲಕ್ಷ ರೂಪಾಯಿ ಮೌಲ್ಯದ ವಿಶೇಷ ರೈಫಲ್ ಖರೀದಿಸಿದ್ದ ಎಂದು ತಿಳಿದುಬಂದಿದೆ.

2018ರಲ್ಲಿ, ಪೊಲೀಸರು ದಿನೇಶ್ ದಾಗರ್ ಅವರಿಂದ ಸ್ಪ್ರಿಂಗ್ ರೈಫಲ್ ವಶಪಡಿಸಿಕೊಂಡರು. ಆದ್ದರಿಂದ ಕೊಲೆಯ ಸಂಚು ವಿಫಲವಾಯಿತು ಎಂದು ಲಾರೆನ್ಸ್‌ ಬಿಷ್ಣೋಯ್ ಹೇಳಿದ್ದಾರೆ.

ಜುಲೈ 6ರಂದು, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಪ್ರತಿನಿಧಿಸುವ ವಕೀಲರಾದ ಹಸ್ತಿಮಲ್ ಸಾರಸ್ವತ್ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರು ರಾಜಸ್ಥಾನದ ಕಂಕಣಿಯಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣಕ್ಕಾಗಿ ರಾಜ್ಯದಲ್ಲಿದ್ದಾಗ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದ ಆರೋಪ ಹೊತ್ತಿದ್ದರು. ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972ರ ಸೆಕ್ಷನ್ 9/51ರ ಅಡಿಯಲ್ಲಿ ಬಾಲಿವುಡ್ ನಟನ ಮೇಲೆ ಆರೋಪ ಹೊರಿಸಲಾಯಿತು. ಅವಧಿ ಮೀರಿದ ಬಂದೂಕುಗಳನ್ನು ಇಟ್ಟುಕೊಂಡು ಬಳಸಿದ್ದಕ್ಕಾಗಿ ಸಲ್ಮಾನ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3/25 ಮತ್ತು 3/27 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2018ರಲ್ಲಿ, ಜೋಧ್‌ಪುರದ ನ್ಯಾಯಾಲಯವು ಎರಡು ಕೃಷ್ಣಮೃಗಗಳನ್ನು ಕೊಂದ ಆರೋಪದ ನಂತರ ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಈ ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್