ಡೊಳ್ಳು ಚಿತ್ರಕ್ಕೆ ಅತ್ಯುತ್ತಮ ಸೌಂಡ್‌ ಸಿಂಕ್‌ ಪ್ರಶಸ್ತಿ; ಎಡವಟ್ಟು ಮಾಡಿದ ಆಯ್ಕೆ ಸಮಿತಿ

dollu
  • ಡಬ್‌ ಮಾಡಲಾದ ಚಿತ್ರಕ್ಕೆ ಅತ್ಯುತ್ತಮ ಸೌಂಡ್‌ ಸಿಂಕ್‌ ಪ್ರಶಸ್ತಿ 
  • ಆಯ್ಕೆ ಸಮಿತಿ ಎಡವಟ್ಟಿಗೆ ಸೌಂಡ್‌ ಡಿಸೈನರ್‌ಗಳ ಅಸಮಾಧಾನ

ಶುಕ್ರವಾರ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಈ ಬಾರಿಯ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ 'ಡೊಳ್ಳು' ಚಿತ್ರಕ್ಕೆ ಲಭಿಸಿದೆ. ಚಿತ್ರದಲ್ಲಿನ ಆಡಿಯೋಗ್ರಫಿಗಾಗಿ ಜೋಬಿನ್‌ ಜಯನ್‌ ಅವರಿಗೆ ಅತ್ಯುತ್ತಮ ಆಡಿಯೋಗ್ರಫರ್‌ ಪ್ರಶಸ್ತಿ ದೊರೆತಿದೆ. ಆದರೆ, ಜೋಬಿನ್‌ ಅವರಿಗೆ ನೀಡಲಾಗಿರುವ ಪ್ರಶಸ್ತಿ ತಪ್ಪಾಗಿದೆ ಎಂದು ಖ್ಯಾತ ʼಸೌಂಡ್‌ ಡಿಸೈನರ್‌ʼ ನಿತಿನ್‌ ಲುಕೊಸೆ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಡೊಳ್ಳು' ಚಿತ್ರಕ್ಕೆ ಪ್ರಶಸ್ತಿ ಪ್ರಕಟವಾಗುತ್ತಲೇ ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, "ರಾಷ್ಟ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿಚಾರದಲ್ಲಿ ಪರದೆಯ ಹಿಂದೆ ಏನು ನಡೆದಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಡಬ್‌ ಮಾಡಲಾದ ಚಿತ್ರ ಯಾವುದು ಮತ್ತು ʼಸೌಂಡ್‌ ಸಿಂಕ್‌ʼ (ಚಿತ್ರೀಕರಣದ ಸ್ಥಳದಲ್ಲಿಯೇ ದೃಶ್ಯಗಳ ಜೊತೆಗೆ ಆ ಸನ್ನಿವೇಶಗಳ ಶಬ್ದವನ್ನು ನೈಜವಾಗಿ ಸೆರೆ ಹಿಡಿಯುವ ಪ್ರಕ್ರಿಯೆ) ಮಾಡಲಾದ ಚಿತ್ರ ಯಾವುದು ಎಂಬುದರ ವ್ಯತ್ಯಾಸ ತಿಳಿಯದವರೆಲ್ಲ ಪರಿಣಿತರು ಎಂದು ಹೇಳಿಕೊಂಡು ಡಬ್‌ ಮಾಡಿದ ಸಿನಿಮಾಗೆ ಅತ್ಯುತ್ತಮ ʼಸೌಂಡ್‌ ಸಿಂಕ್‌ʼ ಪ್ರಶಸ್ತಿ ನೀಡುತ್ತಿರುವುದನ್ನು ಕಂಡರೆ ನನಗೆ ಅಯ್ಯೋ ಪಾಪ ಎನ್ನಿಸುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Eedina App

ನಿತಿನ್‌ ಲುಕೊಸೆ ಅವರ ಟ್ವೀಟ್‌ ಅನ್ನು ಹಂಚಿಕೊಂಡಿರುವ ಆಸ್ಕರ್‌ ವಿಜೇತ ಸೌಂಡ್‌ ಡಿಸೈನರ್‌ ರೆಸುಲ್‌ ಪೂಕುಟ್ಟಿ, "ಡೊಳ್ಳು ಚಿತ್ರ ಸೌಂಡ್‌ ಸಿಂಕ್‌ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಡಬ್‌ ಮಾಡಲಾಗಿರುವ ಸಿನಿಮಾ. ಡಬ್‌ ಮಾಡಲಾದ ಚಿತ್ರಕ್ಕೆ ಅತ್ಯುತ್ತಮ ಸೌಂಡ್‌ ಸಿಂಕ್‌ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

AV Eye Hospital ad

ನಿತಿನ್‌ ಲುಕೊಸೆ ಅವರೇ ಡೊಳ್ಳು ಚಿತ್ರಕ್ಕೆ ಸೌಂಡ್‌ ಡಿಸೈನ್‌ ಮಾಡಿದ್ದಾರೆ. ಈ ಚಿತ್ರದ ಯಾವ ದೃಶ್ಯವನ್ನು ಸೌಂಡ್‌ ಸಿಂಕ್‌ ಮಾಡಲಾಗಿಲ್ಲ. ಡಬ್‌ ಮಾಡಲಾದ ಚಿತ್ರವನ್ನು ಅತ್ಯುತ್ತಮ ಸೌಂಡ್‌ ಸಿಂಕ್‌ ಚಿತ್ರ ಎಂದು ಪರಿಗಣಿಸಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಆಯ್ಕೆ ಸಮಿತಿ ೆಡವಟ್ಟು ಮಾಡಿಕೊ೦ಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app