100 ದಿನಗಳಲ್ಲಿ 2 ಲಕ್ಷ ಗ್ರಾಹಕರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್‌

  • ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ 221.6 ಲಕ್ಷ ಚಂದಾದಾರರು
  • ಅದೇ ಅವಧಿಯಲ್ಲಿ 1.7 ಶತಕೋಟಿ ಡಾಲರ್ ಆದಾಯ ಹೊಂದಿತ್ತು

ಕಳೆದ 100 ದಿನಗಳಲ್ಲಿ ನೆಟ್‌ಫ್ಲಿಕ್ಸ್‌ ಕನಿಷ್ಠ 2 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಹಣದುಬ್ಬರ ಮತ್ತು ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮದಿಂದಾಗಿ ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿಕೊಂಡಿದೆ.

ಓಟಿಟಿ ವೇದಿಕೆಗಳಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ನೆಟ್‌ಫ್ಲಿಕ್ಸ್‌, ಕೊರೊನಾ ಸಮಯದಲ್ಲಿ ಭಾರೀ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಿತ್ತು. ಆದರೆ, ನಂತರದ ದಿನಗಳಲ್ಲಿ ಹೆಚ್ಚಾದ ಸ್ಪರ್ಧೆಯಿಂದಾಗಿ ಚಂದಾದಾರರ ಸಂಖ್ಯೆ ಇಳಿಯುತ್ತಿದೆ. 

Eedina App

2022ರ ಮೊದಲಾರ್ಧದಲ್ಲಿ ತನ್ನ ನೆಟ್‌ಫ್ಲಿಕ್ಸ್‌ 2.5 ಲಕ್ಷ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಗುರಿ ಹಾಕಿಕೊಂಡಿತ್ತು. ಆದರೆ, ಇದೀಗ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.

ಹೀಗಾಗಿ, ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯ ಯೋಜನೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಪಾಸ್ವರ್ಡ್ ಹಂಚಿಕೆಗೆ ಕಡಿವಾಣ ಹಾಕಲು ಹೊಸ ಮಾರ್ಗಗಳನ್ನು ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.

AV Eye Hospital ad

ನೆಟ್‌ಫ್ಲಿಕ್ಸ್‌ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 221.6 ಲಕ್ಷ ಚಂದಾದಾರರನ್ನು ಹೊಂದಿತ್ತು. ಇದು ಕಳೆದ ವರ್ಷದ ದಾಖಲೆಗಿಂತ ಕಡಿಮೆಯಾಗಿದೆ.

ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ 1.7 ಶತಕೋಟಿ ಡಾಲರ್ ಇದ್ದ ಆದಾಯವು, ಈ ವರ್ಷದ 1.6 ಶತಕೋಟಿ ಡಾಲರ್ ನಿವ್ವಳ ಆದಾಯವನ್ನು ಹೊಂದಿದೆ. ಹೀಗಾಗಿ, ನೆಟ್‌ಫ್ಲಿಕ್ಸ್‌ ಆದಾಯವು ಕಳೆದ ಬಾರಿಗಿಂತ ಕುಸಿತ ಕಂಡಿದೆ ಎಂದು ಸಿಲಿಕಾನ್ ವ್ಯಾಲಿ ಟೆಕ್ ಸಂಸ್ಥೆ ವರದಿ ಮಾಡಿದೆ.

ವರದಿಯು ಬಿಡುಗಡೆಯಾಗುತ್ತಿದ್ದಂತೆ ಸುಮಾರು ಶೇ.25 ರಷ್ಟು ನೆಟ್‌ಫ್ಲಿಕ್ಸ್‌ ಷೇರುಗಳು ಕುಸಿತ ಕಂಡಿವೆ.

ನಾವು ಅಂದುಕೊಂಡಷ್ಟು ವೇಗದಲ್ಲಿ ಆದಾಯ ಏರಿಕೆಯಾಗುತ್ತಿಲ್ಲ. 2020ರಲ್ಲಿ ಕೊರೊನಾದಿಂದಾಗಿ ನಮ್ಮ ಸಂಸ್ಥೆಯ ಆದಾಯದಲ್ಲಿ ಗಣನೀಯ ಏರಿಕೆ ಕಂಡಿತ್ತು. 2021ರಲ್ಲಿ ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತಿದ್ದಂತೆ ನೆಟ್‌ಫ್ಲಿಕ್ಸ್‌ ಬಳಕೆದಾರರು ಮತ್ತು ಆದಾಯದಲ್ಲಿ ಇಳಿಮುಖವಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app