'ವರಾಹ ರೂಪಂ' ಹಾಡಿಗೆ ಹೊಸ ಟ್ಯೂನ್; 'ಸಾಂಬಾರಿಗೆ‌ ಉಪ್ಪಿಲ್ಲದ ಅನುಭವ' ಎಂದ ನೆಟ್ಟಿಗರು!

kantara
  • 'ಚಿತ್ರಕ್ಕೆ ಈಗ ಆತ್ಮವೇ ಇಲ್ಲ' ಎಂದ ಸಿನಿಮಾ ಪ್ರಿಯರು
  • 'ಕಾಂತಾರ' ಚಿತ್ರತಂಡಕ್ಕೆ ದುರಹಂಕಾರ ಎಂದ ನೆಟ್ಟಿಗರು

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರʼ ಸಿನಿಮಾ ನ.24ರ ಗುರುವಾರ ʼಅಮೆಜಾನ್‌ ಪ್ರೈಂʼ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಟ್ಯೂನ್ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದ ಪ್ರಮುಖ ಹಾಡುಗಳಲ್ಲಿ ಒಂದಾದ ʼವರಾಹ ರೂಪಂʼ ಹಾಡಿನ ಪ್ರಸಾರಕ್ಕೆ ಕೇರಳ ಹೈಕೋರ್ಟ್‌ ತಡೆ ನೀಡಿರುವ ಹಿನ್ನೆಲೆಯಲ್ಲಿ ಚಿತ್ರತಂಡ ವಿವಾದಿತ ಹಾಡಿನ ಟ್ಯೂನ್‌ ಬದಲಿಸಿ ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. 

'ವರಾಹ ರೂಪಂ' ಹಾಡಿನ ಬದಲಾದ ಆವೃತ್ತಿ ಸದ್ಯ ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ 'ಕಾಂತಾರ' ಚಿತ್ರದಲ್ಲಿ ಲಭ್ಯವಿದೆ. ವಿವಾದಿತ ಹಾಡಿನ ಹೊಸ ಆವೃತ್ತಿಯನ್ನು ಗಮನಿಸಿದ ನೆಟ್ಟಿಗರು, ಚಿತ್ರತಂಡದ ನಡೆಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಹೊಸ ಟ್ಯೂನ್ ಇರುವ ಹಾಡನ್ನು ಕೇಳಿದ ಬಳಿಕ ಆಕ್ರೋಶಗೊಂಡಿರುವ ನೆಟ್ಟಿಗರು, "ಹಾಡು ಕೇಳಿದ ಬಳಿಕ ಸಾಂಬಾರಿಗೆ‌ ಉಪ್ಪಿಲ್ಲದ ಅನುಭವ" ಆಯ್ತು ಎಂದು ಜರೆಯುತ್ತಿದ್ದಾರೆ.

ಕನ್ನಡ ಚಿತ್ರರಂಗದ ದಿನನಿತ್ಯದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವ ʼಕರ್ನಾಟಕ ಬಾಕ್ಸ್‌ ಆಫೀಸ್‌ʼ ಟ್ವಿಟರ್‌ ಖಾತೆ ʼವರಾಹ ರೂಪಂʼ ಟ್ಯೂನ್‌ ಬದಲಿಸಿದ ಬಗ್ಗೆ ಟ್ವೀಟ್ ಮಾಡಿದ್ದು, "ಎಲ್ಲರಿಗೂ ಈ ಹಾಡು ನಕಲಿ ಅಂತ ಗೊತ್ತು. ಮೂಲ ಹಾಡಿಗೆ ಕ್ರೆಡಿಟ್ ಕೊಟ್ಟು ದೊಡ್ಡವರು ಆಗುವುದನ್ನ ಬಿಟ್ಟು ಸಿನಿಮಾದಲ್ಲಿ ಹಾಡನ್ನು ತೆಗೆದು ಹಾಕಿ ಸಣ್ಣವರಾಗಿದ್ದಾರೆ. ಅಹಂಕಾರಕ್ಕೆ ತಲೆಬಾಗಿ ಸಿನಿಮಾ ಅದಕ್ಕಿಂತ ದೊಡ್ಡದು ಎಂಬುದನ್ನ ಮರೆತಿದ್ದಾರೆ. ಕಲೆಗೆ ಗೌರವ ಕೊಡುವುದನ್ನು ಮರೆತಿದ್ದಾರೆ" ಎಂದು ಚಿತ್ರತಂಡದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.

ವೇಣು ಶೆಟ್ಟಿ ಎಂಬುವವರು ಟ್ವೀಟ್‌ ಮಾಡಿ, "ಕಾಂತಾರದ ʼವರಾಹ ರೂಪಂʼ ಹಾಡಿನ ಹೊಸ ಟ್ಯೂನ್ ಕೇಳಿದೆ. ಸಾಂಬಾರಿಗೆ‌ ಉಪ್ಪಿಲ್ಲದ ಅನುಭವ ಆಯ್ತು. ಅಲ್ಲ ಮಾರೆ, ನಿಮಗೆ ಒಂದು ಕೃಪೆ ಅಂತ 'ಥೈಕ್ಕುಡಂ' ಹೆಸರು ಹಾಕಿದ್ದಿದ್ರೆ ಸಿಂಪಲ್ ಆಗಿ ಮುಗಿದು ಹೋಗ್ತಿಗ್ತು. ಕೃತಿ ಚೌರ್ಯದ ಪ್ರಶ್ನೆಯೇ ಇರುತ್ತಿರಲಿಲ್ಲ. ಅಜನೀಶ್‌ ಮತ್ತು ರಿಷಬ್‌ ಶೆಟ್ಟಿಯವರೇ ʼಥೈಕ್ಕುಡಂ ಬ್ರಿಡ್ಜ್‌ʼ ಹೆಸರು ಹಾಕಿ ಹಳೆಯ ಹಾಡನ್ನೇ ಉಳಿಸಿಕೊಳ್ಳಿ" ಎಂದು ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ.

'ಚಿತ್ರಕ್ಕೆ ಈಗ ಆತ್ಮವೇ ಇಲ್ಲ' ಎಂದ ಸಿನಿಮಾ ಪ್ರಿಯರು

ಕೆಲವು ಸಿನಿಮಾ ಅಭಿಮಾನಿಗಳು ಥಿಯೇಟರ್‌ನಲ್ಲಿ ಕಾಂತಾರ ವೀಕ್ಷಿಸಿದ್ದರೂ, ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾದ ಸಿನಿಮಾವನ್ನು ವೀಕ್ಷಿಸಿದ್ದಾರೆ. ಆ ಬಳಿಕ ಕಮೆಂಟ್ ಮಾಡಿ,  'ಕಾಂತಾರ ಚಿತ್ರಕ್ಕೆ ಈಗ ಆತ್ಮವೇ ಇಲ್ಲ' ಟೀಕಿಸುವುದರೊಂದಿಗೆ, ಬೇಸರ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180