ಬನರಾಸ್ ಚಿತ್ರದ ಒಟ್ಟಾರೆ ಚಿತ್ರಣ ಮಾಯಾಗಂಗೆ ಹಾಡು ಕಟ್ಟಿಕೊಡಲಿದೆ: ನಿರ್ದೇಶಕ ಜಯತೀರ್ಥ

  • ಕಾಶಿಯ ಕಾವ್ಯಾತ್ಮಕ ಮುಖ ಮಾಯಾಗಂಗೆ ಹಾಡಿನಲ್ಲಿದೆ
  • ಶಾಸಕ ಜಮೀರ್ ಅಹಮದ್ ಮಗ ಝೈದ್ ಖಾನ್‌ರ ಚೊಚ್ಚಲ ಚಿತ್ರ

ಜಯತೀರ್ಥ ಅವರ ನಿರ್ದೇಶನದ 'ಬನರಾಸ್‌' ಚಿತ್ರದ 'ಮಾಯಾ ಗಂಗೆ' ಎಂಬ ಮೊದಲ ಹಾಡನ್ನು ಸೋಮವಾರ ಅಭಿಷೇಕ್‌ ಅಂಬರೀಷ್‌, ವಿನೋದ್ ಪ್ರಭಾಕರ್ ಹಾಗೂ ಶಿಲಾಜಾನಾಗ್ ಅವರು ಬಿಡುಗಡೆ ಮಾಡಿದ್ದಾರೆ.

ಹಾಡಿನ ಬಗ್ಗೆ 'ಬನರಾಸ್' ಚಲನಚಿತ್ರದ ನಿರ್ದೇಶಕರಾದ ಜಯತೀರ್ಥ ಅವರು ಈದಿನ.ಕಾಮ್‌ ಜೊತೆ ಮಾತನಾಡಿ, “ಇಡೀ ಬನರಾಸ್‌ ಚಿತ್ರದ ಭಾವನೆಯನ್ನು ಮಾಯಾ ಗಂಗೆ ಹಾಡು ಪ್ರತಿನಿಧಿಸುತ್ತದೆ. ಈ ಹಾಡಿನಲ್ಲಿ ಇರುವ ಭಾವನೆ ಇಡೀ ಚಿತ್ರದಲ್ಲಿ ವ್ಯಾಪಿಸಿದೆ. 'ಬನರಾಸ್‌' ಚಲನಚಿತ್ರವು ಪ್ರೀತಿ ಮತ್ತು ದೈವಿಕ ಭಾವನೆ ಹೊಂದಿರುವ ಚಿತ್ರವಾಗಿದೆ.

ಕಾಶಿಯಲ್ಲಿ ಚಿತ್ರೀಕರಣ

ಕಾಶಿಯನ್ನು ಭಿನ್ನವಾಗಿ ಮತ್ತು ವಿಸ್ತೃತವಾಗಿ ತೋರಿಸಲಾಗಿದೆ. ಯಾರು ಈ ರೀತಿ ತೋರಿಸಲಾರರು. ‘ನಾನ್‌ ಕಡವುಳ್‌’ ಎಂಬ ಚಿತ್ರದಲ್ಲಿ ಕಾಶಿಯನ್ನು 'ಡಾರ್ಕ್ ಶೇಡ್‌'ನಲ್ಲಿ ತೋರಿಸಲಾಗಿದೆ. ಆದರೆ, ನಾವು 'ಬನರಾಸ್‌' ಚಿತ್ರದಲ್ಲಿ ಕಾಶಿಯ ಕಾವ್ಯಾತ್ಮಕ ಮುಖವನ್ನು ಈ ಹಾಡಿನಲ್ಲಿ ತೋರಿಸಿದ್ದೀವಿ. ಕಾಶಿಯ ಎಲ್ಲ 88 ಘಾಟಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಯಾರು ಕಾಶಿಯ ಬಗ್ಗೆ ಇಷ್ಟು ವಿಸ್ತೃತವಾಗಿ ತೋರಿಸಲಾರರು. ಕಾಶಿ ಬಗೆಗಿನ ಸಾಕ್ಷ್ಯಚಿತ್ರ ಎಂಬಂತೆ ಬಾಸವಾಗುತ್ತದೆ. ಆದರೆ, ಈ ಮಧ್ಯೆ ಕಾಶಿಯಲ್ಲಿ ನಡೆಯುವ ಭಾವನಾತ್ಮಕ ಬೆಸುಗೆ, ಪ್ರೀತಿ ಹಾಗೂ ರೋಮಂಚಾನಕಾರಿ  ಚಿತ್ರವಾಗಿದೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಸಂದರ್ಶನ | ಹೋಪ್‌ನೊಂದಿಗೆ ಬೆಳ್ಳಿತೆರೆಗೆ ಮರಳಿದ ಶ್ವೇತಾ ಶ್ರೀವಾತ್ಸವ್‌

“ಹಾಡಿನ ಬಗ್ಗೆ ಮುಖ್ಯವಾಗಿ ಹೇಳುವುದಾದರೆ, ಕಾಶಿಗೆ ಹೋಗಿದ್ದವರಿಗೆ ತಿಳಿಯುತ್ತದೆ. ಅಲ್ಲಿ ಒಂದು ಕಂಪನ ಇದೆ. ಆ ಭಾವನೆ ಈ ಹಾಡಿನಲ್ಲಿ ಸಿಗುತ್ತದೆ. ಹಾಡಿಗಾಗಿ ಒಂದು ಕಥೆ ಬರೆದಿದ್ದೆ. ಹಾಡಿನ ಬಗ್ಗೆ ಸಂಗೀತ ನಿರ್ದೇಶಕರಿಗೆ ತಿಳಿಸಿದಾಗ ಅಜನೀಶ್ ಲೋಕನಾಥ್ ಅವರು 'ಮಾಯಾ ಗಂಗೆ' ಹಾಡಿಗೆ ಸಂಗೀತ ಮಾಡಿದರು. ಕಾಶಿಯಲ್ಲಿನ ನೋಟ ಮತ್ತು ಪ್ರೀತಿ ಎಲ್ಲವು ಈ ಹಾಡಿನಲ್ಲಿ ಸಿಗಬೇಕು ಎಂದು ಕೇಳಿಕೊಂಡಾಗ ನಾಗೇಂದ್ರ ಪ್ರಸಾದ್‌ ಅವರು ಈ ಹಾಡನ್ನು ಬರೆದಿದ್ದಾರೆ. 'ಮಾಯ ಗಂಗೆ' ಹಾಡಿನ ಚಿತ್ರೀಕರಣ ಕಾಶಿಯಲ್ಲೇ ಮಾಡಲಾಗಿದೆ. ಹಾಡಿನಲ್ಲಿ ಕಾಶಿಯಲ್ಲಿರುವ ವೈಶಿಷ್ಟ್ಯತೆ ಮತ್ತು ಗಂಗೆಯ ಪ್ರೀತಿ ಎಲ್ಲವೂ ವ್ಯಕ್ತವಾಗುತ್ತದೆ. ಕೇವಲ ಪ್ರೀತಿಯ ಹಾಡಾಗಬಾರದು ಎಂಬ ಪ್ರಯತ್ನ ಮಾಡಿದ್ದೀವಿ. ಹಾಡು ಹೇಗಿದೆ ಎಂದು ನೀವೇ ನೋಡಿ ಹೇಳಿ” ಎಂದು ಹೇಳಿದರು.

'ಬನಾರಸ್‌'ನ 'ಮಾಯಾ ಗಂಗೆ' ಮೊದಲ ವಿಡಿಯೋ ಹಾಡನ್ನು ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ ಪ್ರಸ್ತುತಪಡಿಸುತ್ತಿದ್ದು, ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ. ಝೈದ್ ಖಾನ್ ಮತ್ತು ಸಯೋನ್‌ರೋನ್ ಅವರು ಚಿತ್ರದ ನಾಯಕ ಮತ್ತು ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ತಿಲಕರಾಜ್ ಬಲ್ಲಾಳ್ ಅವರು ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್ ಹಾಗೂ ಬರ್ಕತ್ ಅಲಿ ಇರಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್