ಸಂಚಲನ ಸೃಷ್ಟಿಸಿದ ಪೊನ್ನಿನ್ ಸೆಲ್ವನ್ ಟೀಸರ್

Ponniyin selvan
  • ಪೊನ್ನಿನ್ ಸೆಲ್ವನ್‌ನಲ್ಲಿ ಕನ್ನಡದ ನಟರು
  • ಸೆಪ್ಟೆಂಬರ್ 30ಕ್ಕೆ ಮಣಿರತ್ನಂ ದೃಶ್ಯಕಾವ್ಯ

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಪೊನ್ನಿನ್ ಸೆಲ್ವನ್ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ. ಒಂದೂವರೆ ನಿಮಿಷಗಳ ಅದ್ದೂರಿ ಟೀಸರ್‌‌ನಲ್ಲಿ ಚೋಳ ಸಾಮ್ರಾಜ್ಯದ ವೈಭವ ಮತ್ತು ಯುದ್ಧದ ಸನ್ನಿವೇಶಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಎ ಆರ್ ರೆಹಮಾನ್ ಅವರ ಸಂಗೀತ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ.

ಚಿತ್ರದಲ್ಲಿ ಚೋಳರ ರಾಜ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ನಟ ಚಿಯಾನ್ ವಿಕ್ರಮ್ ಮಿಂಚಿದ್ದು, ಪಳುವೂರ್ ರಾಜಕುಮಾರಿ ನಂದಿನಿಯ ಪಾತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟಿ ತ್ರಿಶಾ, ಕುಂದವೈ ಸಾಮ್ರಾಜ್ಯದ ರಾಣಿಯ ಪಾತ್ರದಲ್ಲಿ ನಟಿಸಿದ್ದಾರೆ.

ತಮಿಳಿನ ಖ್ಯಾತ ನಟರಾದ ಕಾರ್ತಿ, ಶರತ್ ಕುಮಾರ್, ಜಯಮ್ ರವಿ, ವಿಕ್ರಮ್ ಪ್ರಭು, ಕನ್ನಡದ ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚೋಳ ಸಾಮ್ರಾಜ್ಯದ ಕತೆಯನ್ನಾಧರಿಸಿದ ಪೊನ್ನಿನ್ ಸೆಲ್ವನ್ ಚಿತ್ರದಲ್ಲಿ ರಾಜ ಆದಿತ್ಯ ಕರಿಕಾಳನ್ ಕಾಲಮಾನದ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಣಿರತ್ನಂ.

ಟೀಸರ್‌‌ನ ಕೊನೆಯಲ್ಲಿ ನಟ ವಿಕ್ರಮ್ ಯುದ್ಧಭೂಮಿಯಲ್ಲಿ ನಿಂತು "ಈ ಯುದ್ಧ, ರಕ್ತಪಾತ ಎಲ್ಲವೂ ಅವಳನ್ನು ಮರೆಯುವುದಕ್ಕಾಗಿಯೇ" ಎನ್ನುವ ಮಾತುಗಳು ರಾಜ ಆದಿತ್ಯ ಕಾಳನ್ ಅವರ ಪ್ರೇಮಕತೆಯ ಸುತ್ತ ಮಣಿರತ್ನಂ ಪೊನ್ನಿನ್ ಸೆಲ್ವನ್ ಚಿತ್ರದ ಕಥಹಂದರವನ್ನು ಹೆಣೆದಿಬರಹುದು ಎಂಬ ಕುತೂಹಲ ಹುಟ್ಟಿಸುತ್ತದೆ.

ಮದ್ರಾಸ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಬಹುನಿರೀಕ್ಷಿತ ಚಿತ್ರ ತಮಿಳು, ಕನ್ನಡ ಸೇರಿ 5 ಭಾಷೆಗಳಲ್ಲಿ ಸಿದ್ಧವಾಗಿದ್ದು, ಸೆಪ್ಟೆಂಬರ್ 30ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್