ಖ್ಯಾತ ಗಾಯಕ ದಲೇರ್‌ ಮೆಹಂದಿ ಬಂಧನ

daler mehndi
  • ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ದಲೇರ್‌ ಮೆಹಂದಿ ದೋಷಿ
  • ಖ್ಯಾತ ಪಂಜಾಬಿ ಗಾಯಕನಿಗೆ 2 ವರ್ಷ ಜೈಲು ಶಿಕ್ಷೆ

ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಪಂಜಾಬಿ ಗಾಯಕ ದಲೇರ್‌ ಮೆಹಂದಿ ಅವರನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.

ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ದಲೇರ್‌ ಮೆಹಂದಿ ಅಕ್ರಮವಾಗಿ ಅಮೆರಿಕಾ ಮತ್ತು ಕೆನಡಾ ದೇಶಗಳಿಗೆ ಸಾಗಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದುಕೊಂಡಿದ್ದರು ಎಂದು ಆರೋಪಿಸಿ 2003ರಲ್ಲಿ ಪಂಜಾಬ್‌ನ ಪಟಿಯಾಲಾದಲ್ಲಿ ಅವರ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

Image
Daler-Mehndi

ದೀರ್ಘ ಕಾಲದ ವರೆಗೆ ಈ ಪ್ರಕರಣಗಳ ವಿಚಾರಣೆ ನಡೆಸಿದ್ದ ಪಂಜಾಬ್‌ನ ಪಟಿಯಾಲ ಕೋರ್ಟ್‌, 2018ರಲ್ಲಿ ದಲೇರ್‌ ಮೆಹಂದಿ ದೋಷಿ ಎಂದು ತೀರ್ಪು ನೀಡಿ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದಾದ ಬಳಿಕ ದಲೇರ್‌ ಮೆಹಂದಿಗೆ ಜಾಮೀನು ದೊರಕಿತ್ತು.

ಈ ಸುದ್ದಿ ಓದಿದ್ದೀರಾ? ತೆರೆಗೆ ಸಜ್ಜಾದ ಅಪ್ಪು ಕೊನೆಯ ಚಿತ್ರ ʻಲಕ್ಕಿಮ್ಯಾನ್‌ʼ

ಜಾಮೀನಿನ ಮೇಲೆ ದಿನ ಕಳೆಯುತ್ತಿದ್ದ ದಲೇರ್‌ ಮೆಹಂದಿ ತೀರ್ಪನ್ನು ಮರು ಪರಿಶೀಲಿಸುವಂತೆ ಪಟಿಯಾಲ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸತತ 4 ವರ್ಷಗಳ ಕಾಲ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಹಳೆಯ ತೀರ್ಪನ್ನೇ ಎತ್ತಿ ಹಿಡಿದು ಗಾಯಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಶಿಕ್ಷೆ ಪ್ರಕಟಿಸಿ ಕೂಡಲೇ ದಲೇರ್‌ ಮೆಹಂದಿ ಅವರನ್ನು ಬಂಧಿಸುವಂತೆ ಕೋರ್ಟ್‌ ಸೂಚಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಿರುವ ಪೊಲೀಸರು ತಕ್ಷಣವೇ ಗಾಯಕನನ್ನು ಬಂಧನಕ್ಕೊಳಪಡಿಸಿದ್ದಾರೆ.

ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ದಲೇರ್‌ ಮೆಹಂದಿ ಮತ್ತವರ ಸಹೋದರ ಶಂಶೇರ್‌ ಸಿಂಗ್‌ ಹಾಗೂ ಇತರ ಇಬ್ಬರ ಮೇಲೆ ಪಾಸ್‌ಪೋರ್ಟ್‌ ಕಾಯ್ದೆ ಸೇರಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಸರ್ದಾರ್‌ ಪಟಿಯಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್