'ಸಲಾರ್‌' ಬಿಡುಗಡೆ ದಿನಾಂಕ ಘೋಷಣೆ: ಎದುರಾಳಿಯಾಗಿ ಬರಲು ಸಜ್ಜಾದ 'ಫೈಟರ್‌'

salaar
  • 2023ರ ಸೆಪ್ಟೆಂಬರ್‌ 28ಕ್ಕೆ ತೆರೆಗೆ ಬರಲಿವೆ ಎರಡು ಸ್ಟಾರ್‌ ಸಿನಿಮಾಗಳು
  • ಪ್ರಭಾಸ್‌-ಹೃತಿಕ್‌ ರೋಷನ್‌ ನಡುವೆ ಏರ್ಪಡಲಿದೆ ತೀವ್ರ ಪೈಪೋಟಿ

ʼಕೆಜಿಎಫ್ʼ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ʼಕಾಂಬಿನೇಷನ್‌ʼನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ʼಸಲಾರ್ʼ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.

ಚಿತ್ರಕ್ಕೆ ಬಂಡವಾಳ ಹೂಡಿರುವ ವಿಜಯ್ ಕಿರಗಂದೂರು ಒಡೆತನದ ʼಹೊಂಬಾಳೆ ಫಿಲಂಸ್ʼ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. 2023ರ ಸೆಪ್ಟೆಂಬರ್ 28ರಂದು ʼಸಲಾರ್‌ʼ ವಿಶ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ʼಹೊಂಬಾಳೆ ಫಿಲಂಸ್ʼ ಟ್ವೀಟ್ ಮೂಲಕ ತಿಳಿಸಿದೆ.

ತೆಲುಗು, ತಮಿಳು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ʼಸಲಾರ್‌ʼ ಚಿತ್ರದಲ್ಲಿ ಬಹುಭಾಷಾ ನಟಿ ಶೃತಿ ಹಾಸನ್ ಪ್ರಭಾಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಲಾರ್‌ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಷಯಾದ ಬೆನ್ನಲ್ಲೇ ಬಾಲಿವುಡ್‌ನ ಸ್ಟಾರ್‌ ನಟ ಹೃತಿಕ್‌ ರೋಷನ್‌ ಕೂಡ ತಮ್ಮ ಬಹುನಿರೀಕ್ಷಿತ ʼಫೈಟರ್‌ʼ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಫೈಟರ್‌ʼ ಕೂಡ 2023ರ ಸೆಪ್ಟೆಂಬರ್‌ 28ರಂದೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇಬ್ಬರೂ ಸ್ಟಾರ್‌ ನಟರ ಬಹುಕೋಟಿ ವೆಚ್ಚದ ಸಿನಿಮಾಗಳು ಒಂದೇ ದಿನ ತೆರೆಗೆ ಬರುವುದರಿಂದ ತೀವ್ರ ಪೈಪೋಟಿ ಏರ್ಪಡಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಈ ಸುದ್ದಿ ಓದಿದ್ದೀರಾ? ಬಾಲಿವುಡ್‌ನ ಖ್ಯಾತ ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಹೃತಿಕ್‌ ಮುಖ್ಯಭೂಮಿಕೆಯ ʼಫೈಟರ್‌ʼ ಸಿನಿಮಾದಲ್ಲಿ ಖ್ಯಾತ ನಟಿ ದೀಪಿಕಾ ಪಡುಕೊಣೆ ಮತ್ತು ಹಿರಿಯ ನಟ ಅನಿಲ್‌ ಕಪೂರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್