ದಿ ಕಾಶ್ಮೀರಿ ಫೈಲ್ಸ್ | 'ಅಶ್ಲೀಲ, ದುಷ್ಪ್ರಚಾರ'ದ ಸಿನಿಮಾ ಎಂದ ಐಎಫ್‌ಎಫ್‌ಐ ತೀರ್ಪುಗಾರರ ಮುಖ್ಯಸ್ಥ!

'Propaganda, Vulgar Movie' IFFI Jury Head Criticises 'The Kashmir Files'
  • ಗೋವಾದಲ್ಲಿ ಮುಕ್ತಾಯಗೊಂಡ  53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
  • ಬಿಜೆಪಿಯ ಸರ್ಕಾರವಿರುವ ಹೆಚ್ಚಿನ ರಾಜ್ಯಗಳಲ್ಲಿ ತೆರಿಗೆ ಮುಕ್ತವಾಗಿದ್ದ 'ಕಾಶ್ಮೀರಿ ಫೈಲ್ಸ್'   

"ವಿವೇಕ್ ಅಗ್ನಿ ಹೋತ್ರಿ ನಿರ್ದೇಶನದ 'ದಿ ಕಾಶ್ಮೀರಿ ಫೈಲ್ಸ್‌' ಸಿನಿಮಾವು ಅಶ್ಲೀಲ ಮತ್ತು ದುಷ್ಪ್ರಚಾರದ ಚಿತ್ರ" ಎಂದು ಇಸ್ರೇಲಿ ಚಲನಚಿತ್ರ ನಿರ್ಮಾಪಕ, ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥ ನಾದವ್ ಲ್ಯಾಪಿಡ್ ಹೇಳಿಕೆ ನೀಡಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ.

ಗೋವಾದಲ್ಲಿ ನಡೆಯುತ್ತಿದ್ದ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸೋಮವಾರ ಮುಕ್ತಾಯ ಕಂಡಿದ್ದು, ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ನಾದವ್ ಲ್ಯಾಪಿಡ್ ಈ ಹೇಳಿಕೆ ನೀಡಿದ್ದಾರೆ.

Eedina App

'ದಿ ಕಾಶ್ಮೀರ್ ಫೈಲ್ಸ್' ಟೀಕಿಸಿದ ಅವರು," 15ನೇ ಚಿತ್ರವಾಗಿ ಪ್ರಶಸ್ತಿ ಪಟ್ಟಿಗೆ ಬಂದಿದ್ದ ದಿ ಕಾಶ್ಮೀರ್ ಫೈಲ್ಸ್ ದುರುದ್ದೇಶಪೂರಿತ, ಅಶ್ಲೀಲ ಚಿತ್ರವಾಗಿದೆ. ಅದು ಪಟ್ಟಿಯಲ್ಲಿ ಇದ್ದುದನ್ನು ನೋಡಿ ನಾವೆಲ್ಲರೂ(ತೀರ್ಪುಗಾರರು) ವಿಚಲಿತರಾಗಿದೆವು ಮತ್ತು ಆಘಾತಕ್ಕೊಳಗಾದೆವು. ಅಸಭ್ಯ ಚಲನಚಿತ್ರವೊಂದು ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಬಹಿರಂಗವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಹೇಳಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಈ ದಿನ ಎಕ್ಸ್‌ಕ್ಲೂಸಿವ್ । ಅಲ್ಪಸಂಖ್ಯಾತರಿಗೆ ಮತ್ತೊಂದು ಶಾಕ್: ಇನ್ನು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಿಲ್ಲ ಕೇಂದ್ರದ ಸ್ಕಾಲರ್‌ಶಿಪ್!

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ. ಇದು ಆಡಳಿತಾರೂಢ ಬಿಜೆಪಿಯಿಂದ ಶ್ಲಾಘಿಸಲ್ಪಟ್ಟಿದ್ದವು. ಮತ್ತು ಹೆಚ್ಚಿನ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ಮುಕ್ತ ಚಿತ್ರ ಎಂದು ಘೋಷಿಸಲ್ಪಟ್ಟಿತ್ತು.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app