ಗಮನ ಸೆಳೆಯುತ್ತಿದೆ ʻದೂರದರ್ಶನʼದ ಫಸ್ಟ್‌ಲುಕ್‌ ಪೋಸ್ಟರ್‌

dooradarshana
  • ಹಳ್ಳಿ ಹುಡುಗನ ಪಾತ್ರದಲ್ಲಿ ಮಿಂಚಿದ ಪೃಥ್ವಿ ಅಂಬರ್‌
  • ಕಪ್ಪು- ಬಿಳುಪಿನ ಕಥೆ ಹೇಳಲು ಸಜ್ಜಾದ ಸುಕೇಶ್‌ ಶೆಟ್ಟಿ

ವಿಭಿನ್ನ ಕಥಾಹಂದರದ ಮೂಲಕ ಸದ್ದು ಮಾಡುತ್ತಿರುವ ಪೃಥ್ವಿ ಅಂಬರ್‌ ನಟನೆಯ ʼದೂರದರ್ಶನʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. 

ಹಳ್ಳಿ ʼಬ್ಯಾಕ್‌ ಡ್ರಾಪ್‌ʼನಲ್ಲಿ ಮೂಡಿ ಬಂದಿರುವ ಪೋಸ್ಟರ್‌ನಲ್ಲಿ ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಅಯಾನ ಕಾಣಿಸಿಕೊಂಡಿದ್ದು, ಕಪ್ಪು-ಬಿಳುಪಿನ ಟಿವಿಯ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

 

ಜುಲೈ 21ರಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಸುಕೇಶ್‌ ಶೆಟ್ಟಿ, "ದೂರದರ್ಶನದಲ್ಲಿ 80ರ ದಶಕದ ಕಥೆಯನ್ನು ಹೇಳುವ ಒಂದು ಟಿವಿಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಪೃಥ್ವಿ, ಉಗ್ರಂ ಮಂಜು ಹೀಗೆ ಪ್ರತಿಯೊಬ್ಬರನ್ನು ಈ ಚಿತ್ರದಲ್ಲಿ ಎಂದಿಗಿಂತ ಭಿನ್ನವಾಗಿ ಕಾಣಬಹುದು ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧನುಷ್‌ ಮೊದಲ ಹಾಲಿವುಡ್‌ ಸಿನಿಮಾ ಬಿಡುಗಡೆಗೆ ಕ್ಷಣಗಣನೆ

ನಂತರ ಮಾತನಾಡಿರುವ ನಾಯಕ ಪೃಥ್ವಿ ಅಂಬರ್, ಈ ಸಿನಿಮಾ ನನಗೆ ಬಹಳ ಆಪ್ತವಾಗಿದೆ. ನಾನು ಹುಟ್ಟಿದ್ದು 1988ರಲ್ಲಿ. ನನ್ನ ಪೀಳಿಗೆಯಲ್ಲಿ ʼಪ್ರೀ-ಟೆಕ್ನಾಲಜಿʼ ಮತ್ತು ʼಟೆಕ್ನಾಲಜಿʼ ಎರಡನ್ನೂ ನೋಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಟಿವಿ ನೋಡುವ ಸಲುವಾಗಿ ಬೇರೆಯವರ ಮನೆಗೆ ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಅವರು ʼದೂರದರ್ಶನʼದ ಕಥೆ ಹೇಳಿದಾಗ ನನಗೆ ನಮ್ಮೂರ ಕಥೆ ಕೇಳಿದ ಹಾಗಾಯ್ತು. ಆದ್ದರಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಚಿತ್ರದಲ್ಲಿ 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್