ದಸರಾ ಚಲನಚಿತ್ರೋತ್ಸವ | ಒಂದು ದಿನಪೂರ್ತಿ ನಟ ಪುನೀತ್ ರಾಜ್‌ಕುಮಾರ್ ಸಿನಿಮಾ ಪ್ರದರ್ಶನ

  • ಸೆಪ್ಟಂಬರ್ 27ರಿಂದ ದಸರಾ ಚಲನಚಿತ್ರೋತ್ಸವ ಆರಂಭ
  • ಅಕ್ಟೋಬರ್ 3 ರವರೆಗೆ ನಡೆಯಲಿರುವ ಚಲನಚಿತ್ರೋತ್ಸವ

2022ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಸೆಪ್ಟಂಬರ್ 27 ರಿಂದ  ಚಿತ್ರೋತ್ಸವ ನಡೆಯಲಿದ್ದು, ಒಂದು ದಿನಪೂರ್ತಿ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಪ್ರದರ್ಶನ ನಡೆಯಲಿದೆ.

2022ರ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಪಟ್ಟಿಯನ್ನು ದಸರಾ ಉಪ ಸಮಿತಿ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಚಲನಚಿತ್ರ ಚಿತ್ರೋತ್ಸವ ನಡೆಯಲಿದ್ದು ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಸೇರಿದಂತೆ ಭಾರತೀಯ ನಾನಾ ಭಾಷೆಗಳ ಚಿತ್ರಗಳು ಮೈಸೂರಿನ ಪ್ರಮುಖ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಈ ಸುದ್ದಿ ಓದಿದ್ದೀರಾ? ವ್ಯಕ್ತಿಗತವಾದ ಪ್ರತಿಭೆಯನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ: ನಾಗತಿಹಳ್ಳಿ ಚಂದ್ರಶೇಖರ್

ಇನ್ನು ಕಳೆದ ವರ್ಷ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಚಲನಚಿತ್ರೋತ್ಸವದ ಮೊದಲ ದಿನ ನಟ ಪುನೀತ್ ರಾಜ್‌ಕುಮಾರ್‍‌ ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಟ್ಟದ ಹೂವು, ಯುವರತ್ನ, ಆಂಜನೀಪುತ್ರ ಹಾಗೂ ರಾಜಕುಮಾರ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಪಟ್ಟಿ ಹೀಗಿದೆ.

Image
Image
Image

 

ನಿಮಗೆ ಏನು ಅನ್ನಿಸ್ತು?
0 ವೋಟ್