ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದ ರಜನಿಕಾಂತ್‌; ಗೌರವಿಸಿದ ತೆರಿಗೆ ಇಲಾಖೆ

aishwarya-rajinikanth
  • ರಜನಿಕಾಂತ್‌ ಪರವಾಗಿ ಪ್ರಮಾಣ ಪತ್ರ ಸ್ವೀಕರಿಸಿದ ಮಗಳು ಐಶ್ವರ್ಯಾ
  • ಬಾಲಿವುಡ್‌ ನಟರ ಪೈಕಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಅಕ್ಷಯ್‌ ಕುಮಾರ್‌

ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಕಾರಣಕ್ಕೆ ರಜನಿಕಾಂತ್ ಅವರನ್ನು ಆದಾಯ ತೆರಿಗೆ ಇಲಾಖೆ ಗೌರವಿಸಿದೆ. ಜುಲೈ 24ರಂದು ದೇಶಾದ್ಯಂತ ಆದಾಯ ತೆರಿಗೆ ದಿನ ಆಚರಿಸಲಾಗಿದೆ. ಚೆನ್ನೈನಲ್ಲೂ ಆದಾಯ ತೆರಿಗೆ ದಿನದ ಸಂಭ್ರಮಾಚರಣೆ ನಡೆದಿದ್ದು, ಆಚರಣೆಯ ಅಂಗವಾಗಿ ಈ ಬಾರಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ವ್ಯಕ್ತಿ ರಜನಿಕಾಂತ್‌ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ. ಜೊತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ಆದಾಯ ತೆರಿಗೆ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸುಂದರ್‌ರಾಜನ್‌, ರಜನಿಕಾಂತ್ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ತಂದೆಯ ಬದಲಿಗೆ ತಾವು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

ಆದಾಯ ತೆರಿಗೆ ದಿನಾಚರಣೆಯಲ್ಲಿ ಭಾಗಿಯಾಗಿ ತಂದೆಯ ಪರವಾಗಿ ಪ್ರಮಾಣಪತ್ರ ಸ್ವೀಕರಿಸಿದ ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಐಶ್ವರ್ಯಾ, "ಪ್ರಾಮಾಣಿಕವಾಗಿ, ಅತಿ ಹೆಚ್ಚು  ಆದಾಯ ತೆರಿಗೆಯನ್ನು ಪಾವತಿಸುವ ವ್ಯಕ್ತಿಯ ಮಗಳೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜನುಮ ದಿನ | ಹಾಸ್ಯಕ್ಕೊಂದು ಅಪೂರ್ವ ಭಾಷ್ಯ ಬರೆದ ನಟ ನರಸಿಂಹರಾಜು

ರಜನಿಕಾಂತ್‌ ಮಾತ್ರವಲ್ಲ, ಬಾಲಿವುಡ್‌ನ ಖ್ಯಾತನಟ ಅಕ್ಷಯ್‌ ಕುಮಾರ್‌ ಕೂಡ ಈ ಬಾರಿ ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದ ಬಾಲಿವುಡ್‌ ನಟ ಎನ್ನಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅವರಿಗೂ ಪ್ರಮಾಣಪತ್ರ ನೀಡಿ ಗೌರವಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್