ಒಟಿಟಿಗೆ ಲಗ್ಗೆ ಇಡಲು ಸಜ್ಜಾದ 777 ಚಾರ್ಲಿ

Charlie 777 2
  • ಚಿತ್ರದ ಸ್ಯಾಟಲೈಟ್‌, ಡಿಜಿಟಲ್‌ ಹಕ್ಕು ಕಲರ್ಸ್‌ ಕನ್ನಡದ ಪಾಲು
  • ಜುಲೈ ಅಂತ್ಯಕ್ಕೆ ಒಟಿಟಿಗೆ ಬರಲಿದೆ ರಕ್ಷಿತ್‌ ಶೆಟ್ಟಿ ಸಿನಿಮಾ 

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅಭಿನಯದ ʼ777 ಚಾರ್ಲಿʼ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದ್ದು, ಇದೀಗ ಒಟಿಟಿ ವೇದಿಕೆಗೆ ಲಗ್ಗೆ ಇಡಲು ಸಜ್ಜಾಗಿದೆ.

'777 ಚಾರ್ಲಿ'ಯ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕನ್ನು ಕಲರ್ಸ್‌ ಕನ್ನಡ ವಾಹಿನಿ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್‌ ವಾಹಿನಿಯ ಅಂಗಸಂಸ್ಥೆಯಾದ ವೂಟ್‌ ಸೆಲೆಕ್ಟ್‌ ಒಟಿಟಿ ವೇದಿಕೆಯಲ್ಲಿ '777 ಚಾರ್ಲಿ' ಬಿಡುಗಡೆಯಾಗುವುದು ಖಚಿತವಾಗಿದೆ. 

ಜುಲೈ ತಿಂಗಳ ಅಂತ್ಯದ ವೇಳೆಗೆ '777 ಚಾರ್ಲಿ' 50 ದಿನ ಪೂರೈಸಲಿದ್ದು, ಇದೇ ಸಂದರ್ಭದಲ್ಲಿ ಅಂದರೆ ಜುಲೈ 29ರಂದು ವೂಟ್‌ ಸೆಲೆಕ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕಿರಣ್‌ ರಾಜ್‌ ನಿರ್ದೇಶನದಲ್ಲಿ ಮೂಡಿಬಂದ '777 ಚಾರ್ಲಿ' ಜೂನ್‌ 10ರಂದು ಕನ್ನಡ, ತಮಿಳು, ತೆಲುಗು ಸೇರಿ 5 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿತ್ತು. ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿರುವ ಈ ಚಿತ್ರ, 25 ದಿನಗಳಲ್ಲಿ ₹150 ಕೋಟಿಗಳನ್ನು ಕಲೆ ಹಾಕುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್‌ ನಂತರ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಈ ಸುದ್ದಿ ಓದಿದ್ದೀರಾ? ತಮಿಳು ನಟ ವಿಕ್ರಮ್‌ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಇತ್ತೀಚೆಗೆ '777 ಚಾರ್ಲಿ' ಯಶಸ್ಸಿನ ಅದ್ದೂರಿ ಸಂಭ್ರಮಾಚರಣೆ ನಡೆಸಿದ್ದ ನಟ, ನಿರ್ಮಾಪಕ ರಕ್ಷಿತ್‌ ಶೆಟ್ಟಿ, '777 ಚಾರ್ಲಿ'ಗಾಗಿ ತೆರೆಯ ಹಿಂದೆ ಶ್ರಮಿಸಿದ ತಂತ್ರಜ್ಞರಿಗೆ ಚಿತ್ರದ ಲಾಭಾಂಶದ ಹಣದಲ್ಲಿ ಶೇ. 10 (₹7-10 ಕೋಟಿ) ಯಷ್ಟು ಪಾಲನ್ನು ನೀಡಲಾಗುವುದು ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಚಾರ್ಲಿ ಹೆಸರಲ್ಲಿ ಶೇ.5 (₹5 ಕೋಟಿ)ಯಷ್ಟು ಹಣವನ್ನು ದೇಶಿಯ ತಳಿ ನಾಯಿಗಳ ಪಾಲನೆ, ಪೋಷಣೆಗೆ ಬಳಸಲಾಗುವುದು ಎಂದು ಘೋಷಿಸಿದ್ದರು. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗಳಿಸಿದ ₹150 ಕೋಟಿ ಜೊತೆಗೆ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳನ್ನು ಮಾರಾಟ ಮಾಡಿದ್ದ ಹಣವೂ ಸೇರಿಕೊಂಡಿದ್ದು, ತೆರೆಕಂಡ ತಿಂಗಳ ಒಳಗಾಗಿ '777 ಚಾರ್ಲಿ' ₹200 ಕೋಟಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗುತ್ತಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್