777 ಚಾರ್ಲಿ ಭರ್ಜರಿ ಯಶಸ್ಸು; ಸಂಭ್ರಮಾಚರಣೆಗೆ ಥಾಯ್ಲಾಂಡ್‌ಗೆ ಹಾರಿದ ಚಿತ್ರತಂಡ 

777 charlie
  • ನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿಯೂ ಜನಮನ ಗೆದ್ದ ರಕ್ಷಿತ್‌ ಶೆಟ್ಟಿ
  • 777 ಚಾರ್ಲಿ ಯಶಸ್ಸನ್ನು ಚಿತ್ರತಂಡದ ಜೊತೆ ಸಂಭ್ರಮಿಸಿದ ಸಿಂಪಲ್‌ ಸ್ಟಾರ್‌ 

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ '777 ಚಾರ್ಲಿ' ತಂಡದ ಸದಸ್ಯರ ಜೊತೆಗೆ ಥೈಲ್ಯಾಂಡ್‌ಗೆ ಹಾರಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಜುಲೈ 29ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ ಈ ಚಿತ್ರ ಬರೋಬ್ಬರಿ ₹105 ಕೋಟಿಗಳನ್ನು ಕಲೆ ಹಾಕಿತ್ತು. ಚಿತ್ರದ ಒಟಿಟಿ ಬಿಡುಗಡೆಗೆ ಸಂಬಂಧಿಸಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ರಕ್ಷಿತ್, '777 ಚಾರ್ಲಿ' ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದ್ದು, ಚಿತ್ರಕ್ಕಾಗಿ ಶ್ರಮಿಸಿದ ಚಿತ್ರತಂಡದ ಸದಸ್ಯರೊಂದಿಗೆ ಥೈಲ್ಯಾಂಡ್ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದರು.

Image
rakshit shetty

ಅದರಂತೆ ಇಡೀ ಚಿತ್ರತಂಡ ಥೈಲ್ಯಾಂಡ್‌ಗೆ ತೆರಳಿದ್ದು, ಕಡಲ ತೀರದಲ್ಲಿ ಮೋಜು, ಮಸ್ತಿ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್, ನಟಿ ಸಂಗೀತಾ ಶೃಂಗೇರಿ ಮುಂತಾದವರು ಫೋಟೋಗಳಿಗೆ ಪೋಸ್ ನೀಡಿದ್ದಾರೆ.

Image
777 charlie

'777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಕೇವಲ ನಟನೆ ಮಾತ್ರವಲ್ಲದೆ, ನಿರ್ಮಾಪಕನ ಹೊಣೆ ಹೊತ್ತುಕೊಂಡಿದ್ದರು. ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್‌ ಸೇರಿದಾಗ ಕೂಡ ಸುದ್ದಿಗೋಷ್ಠಿ ನಡೆಸಿದ್ದ ರಕ್ಷಿತ್, "ಚಿತ್ರದ ಲಾಭಾಂಶದ ಹಣದಲ್ಲಿ ₹4 ರಿಂದ ₹5 ಕೋಟಿಗಳನ್ನು ಚಾರ್ಲಿ ಪಾತ್ರ ನಿರ್ವಹಿಸಿದ್ದ ಶ್ವಾನದ ಹೆಸರಲ್ಲಿ ದೇಶಿಯ ತಳಿಯ ಶ್ವಾನಗಳ ರಕ್ಷಣೆ ಮತ್ತು ಪೋಷಣೆಗೆ ಮೀಸಲಿಡುವುದಾಗಿ ಘೋಷಿಸಿದ್ದರು. ಇದೀಗ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಇಡೀ ಚಿತ್ರತಂಡವನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ದು ಎಲ್ಲರ ಜೊತೆಗೂಡಿ ಯಶಸ್ಸನ್ನು ಸಂಭ್ರಮಿಸಿದ ರಕ್ಷಿತ್‌ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್