ಮೊದಲ ದಿನವೇ ₹35 ಕೋಟಿ ಗಳಿಸಿದ 'ಬ್ರಹ್ಮಾಸ್ತ್ರ'

brahmastra
  • ವಾರಾಂತ್ಯಕ್ಕೆ ₹100 ಕೋಟಿ ಕ್ಲಬ್ ಸೇರುವ ನಿರೀಕ್ಷೆ
  • ₹410 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ

ಬಾಲಿವುಡ್‌‌ನ ಸ್ಟಾರ್ ನಟ ರಣಬೀರ್ ಕಪೂರ್ ಮುಖ್ಯಭೂಮಿಕೆಯ 'ಬ್ರಹ್ಮಾಸ್ತ್ರ' ಸಿನಿಮಾ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದೆ ಎಂದು ಸಿನಿ ವಿಶ್ಲೇಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ಅಂದಾಜು ₹410 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿರುವ 'ಬ್ರಹ್ಮಾಸ್ತ್ರ', ಮೊದಲ ದಿನ ಜಗತ್ತಿನಾದ್ಯಂತ ಬರೋಬ್ಬರಿ ₹35 ಕೋಟಿಗಳನ್ನು ಕಲೆ ಹಾಕಿದೆ ಎಂದು ಖ್ಯಾತ ಸಿನಿಮಾ ವಿಶ್ಲೇಷಕ ಸುಮಿತ್ ಕಾಡೆಲ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Eedina App

ಆಯಾನ್ ಮುಖರ್ಜಿ ನಿರ್ದೇಶನವಿರುವ ಫ್ಯಾಂಟಸಿ ಕಥಾಹಂದರದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಕಥೆ ಮತ್ತು ನಿರೂಪಣೆಯಲ್ಲಿ 'ಬ್ರಹ್ಮಾಸ್ತ್ರ' ಸೋತಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಚಿತ್ರದ ವಿಎಫ್‌‌ಕ್ಸ್‌‌ ಅದ್ಭುತವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಮೊದಲ ದಿನ ₹35 ಕೋಟಿ ಕಲೆ ಹಾಕಿರುವ 'ಬ್ರಹ್ಮಾಸ್ತ್ರ' ಈ ವಾರಾಂತ್ಯದಲ್ಲಿ ನೂರು ಕೋಟಿ ಕ್ಲಬ್ ಸೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

AV Eye Hospital ad

ರಣಬೀರ್‌‌ ಕಪೂರ್ ಮತ್ತು ಆಲಿಯಾ ಭಟ್ ಜೊತೆಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್‌‌ನ ಹಿರಿಯ ನಟ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಟಾಲಿವುಡ್‌‌ನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app