ಕರಡಿ ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ನಟ ರಣವೀರ್‌ ಸಿಂಗ್‌

Ranveer-Singh
  • ಜುಲೈ 8ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ʼರಣವೀರ್‌ ವರ್ಸಸ್‌ ವೈಲ್ಡ್‌ʼ
  • ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್‌ ಭಾಗವಹಿಸಿದ್ದ ಜನಪ್ರಿಯ ಶೋ

ಬಾಲಿವುಡ್‌ನ ಖ್ಯಾತ ನಟ ರಣವೀರ್‌ ಸಿಂಗ್‌ ಕರಡಿ ದಾಳಿಯಿಂದ ಸ್ವಲ್ಪದರಲ್ಲಿ ಬಚಾವ್‌ ಆಗಿದ್ದಾರೆ. ತಾವು ದಟ್ಟಾರಣ್ಯದಲ್ಲಿ ಅಲೆದಾಡುವಾಗ ಕರಡಿಯೊಂದು ತಮ್ಮನ್ನು ಬೆನ್ನಟ್ಟಿ ಬಂದ ವಿಡಿಯೋವನ್ನು ಸ್ವತಃ ರಣವೀರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಣವೀರ್‌ ಸಿಂಗ್‌ ಅವರನ್ನು ಕರಡಿ ಬೆನ್ನತ್ತಿದ ವಿಡಿಯೋ ನೋಡಿ ನೀವು ಗಾಬರಿಗೊಳ್ಳಬೇಡಿ. ಬ್ರಿಟನ್‌ ಮೂಲದ ಸಾಹಸಿ ಬೇರ್‌ ಗ್ರಿಲ್ಸ್‌ ನಡೆಸಿಕೊಡುವ ʼಮ್ಯಾನ್‌ ವರ್ಸಸ್‌ ವೈಲ್ಡ್‌ʼ ಜನಪ್ರಿಯ ಶೋನಲ್ಲಿ ಈ ಬಾರಿ ರಣವೀರ್‌ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ.

Eedina App

ಈ ಸುದ್ದಿ ಓದಿದ್ದೀರಾ? ಗಾಂಧಿನಗರದಲ್ಲಿ ಚಾರ್ಲಿ ದರ್ಬಾರ್‌ ಶುರು; ಈ ವಾರ ಎರಡು ಸಿನಿಮಾ ತೆರೆಗೆ

ಎಂದಿನಂತೆ ʼಬೇರ್‌ ಗ್ರಿಲ್ಸ್‌ʼ ಸಾಹಸಮಯ ನಿರೂಪಣೆಯಲ್ಲಿ ಮೂಡಿ ಬಂದಿರುವ ʼಮ್ಯಾನ್‌ ವರ್ಸಸ್‌ ವೈಲ್ಡ್‌ʼ ಕಾರ್ಯಕ್ರಮದ ಶೀರ್ಷಿಕೆಯನ್ನು ʼರಣವೀರ್‌ ವರ್ಸಸ್‌ ವೈಲ್ಡ್‌ʼ ಎಂದು ಇಡಲಾಗಿದ್ದು, ಸಿನಿಮಾದಲ್ಲಿ ಸಾಹಸಮಯ ದೃಶ್ಯಗಳಿಗೆ ಹೆಸರಾಗಿರುವ ರಣವೀರ್‌, ಬೇರ್‌ ಗ್ರಿಲ್ಸ್‌ ಜೊತೆಗೆ ದಟ್ಟಾರಣ್ಯದಲ್ಲಿ ಅಲೆದಾಡಿ, ಕಡಿದಾದ ಕಣಿವೆಗಳನ್ನು ಏರಿ ಸಾಹಸ ಪ್ರದರ್ಶಿಸಿದ್ದಾರೆ. ಅದೇ ಕಾಡಿನಲ್ಲಿ ಸುತ್ತಾಡುವ ವೇಳೆ ನಟ ಕರಡಿ ದಾಳಿಗೂ ಒಳಗಾಗಿ ಸ್ವಲ್ಪದರಲ್ಲೇ ಬಚಾವ್‌ ಆಗಿದ್ದಾರೆ. ರಣವೀರ್‌ ನಿಜವಾಗಿಯೂ ಕರಡಿ ದಾಳಿಗೆ ಒಳಗಾಗಿದ್ದಾರೆಯೇ ಎಂಬುದು ವಿಶೇಷ ಸಂಚಿಕೆ ಬಿಡುಗಡೆಯಾದ ಬಳಿಕವೇ ತಿಳಿಯಲಿದೆ.

AV Eye Hospital ad

ತಾವು ದಟ್ಟಾರಣ್ಯದೊಳಗೆ ಸುತ್ತಿರುವ ʼರಣವೀರ್‌ ವರ್ಸಸ್‌ ವೈಲ್ಡ್‌ʼ ಸಂಚಿಕೆಯ ʼಪ್ರೋಮೋʼ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಣವೀರ್‌ ʼಜಂಗಲ್‌ ಮೇ ಮಂಗಲ್‌ʼ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

ʼರಣವೀರ್‌ ವರ್ಸಸ್‌ ವೈಲ್ಡ್‌ʼ ವಿಶೇಷ ಸಂಚಿಕೆ ಜುಲೈ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಬೇರ್‌ ಗ್ರಿಲ್‌ ನಡೆಸಿಕೊಡುವ ʼಮ್ಯಾನ್‌ ವರ್ಸಸ್‌ ವೈಲ್ಡ್‌ ಶೋʼನಲ್ಲಿ ಕೇವಲ ರಣವೀರ್‌ ಮಾತ್ರವಲ್ಲ, ಸೂಪರ್‌ ಸ್ಟಾರ್‌ ರಜನಿಕಾಂತ್‌, ಪ್ರಧಾನಿ ಮೋದಿ ಸೇರಿದಂತೆ ಹಲವು ಖ್ಯಾತನಾಮರು ಭಾಗಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app