ಬಾಲಿವುಡ್‌ನ ಖ್ಯಾತ ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Rahul jain
  • ಪ್ರಕರಣ ದಾಖಲಾದರೂ ರಾಹುಲ್‌ನನ್ನು ಬಂಧಿಸದ ಪೊಲೀಸರು
  • ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ ಖ್ಯಾತ ಗಾಯಕ

ಬಾಲಿವುಡ್‌ನ ಖ್ಯಾತ ಗಾಯಕ ರಾಹುಲ್ ಜೈನ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ರಾಹುಲ್ ತಮಗೆ ಕೆಲಸ ನೀಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ್ದಲ್ಲದೇ, ಹಲ್ಲೆ ಕೂಡ ಮಾಡಿದ್ದಾರೆ ಎಂದು ವಸ್ತ್ರ ವಿನ್ಯಾಸಕಿಯೊಬ್ಬರು ಆರೋಪಿಸಿದ್ದಾರೆ.

"ಇನ್ಸ್ಟಾಗ್ರಾಂ ಮೂಲಕ ಸಂಪರ್ಕಕ್ಕೆ ಬಂದಿದ್ದ ರಾಹುಲ್ ನನ್ನ ವಸ್ತ್ರ ವಿನ್ಯಾಸದ ಬಗ್ಗೆ ಅಭಿಮಾನದಿಂದ ಮಾತನಾಡಿದ್ದರು. ಅದಾದ ಬಳಿಕ ಕೆಲಸ ನೀಡುವುದಾಗಿ ನಂಬಿಸಿ ಆಗಸ್ಟ್ 11ರಂದು ಮುಂಬೈನ ಅಂಧೇರಿಯಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಕರೆಸಿಕೊಂಡರು. ತಮ್ಮಲ್ಲಿರುವ ಬಟ್ಟೆಗಳ ಸಂಗ್ರಹವನ್ನು ತೋರಿಸುವುದಾಗಿ ನನ್ನನ್ನು ತಮ್ಮ ಕೊಠಡಿಗೆ ಕರೆದೊಯ್ದ ರಾಹುಲ್‌ ಬಲವಂತವಾಗಿ ನನ್ನ ಮೇಲೆ ಎರಗಿದರು. ನಾನು ಪ್ರತಿರೋಧಿಸಿದಾಗ ಹಲ್ಲೆಯನ್ನೂ ನಡೆಸಿದರು. ನಂತರ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ದೂರಿನನ್ವಯ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಈವರೆಗೆ ರಾಹುಲ್ ಬಂಧನವಾಗಿಲ್ಲ.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಭಾರತದ ಖ್ಯಾತ ಸಿನಿಮಾ ವಿಶ್ಲೇಷಕ ಕೌಶಿಕ್ ಇನ್ನಿಲ್ಲ

ತಮ್ಮ  ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾಹುಲ್‌ ಮಹಿಳೆಯ ಆರೋಪಗಳನ್ನು ತಳ್ಳಿ ಹಾಕಿದ್ದು, ನನಗೆ ಆ ಮಹಿಳೆಯ ಪರಿಚಯವೇ ಇಲ್ಲ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ನನ್ನ ಮೇಲೆ ಇಂತಹದ್ದೇ ಆರೋಪ ಮಾಡಿದ್ದರು. ಕೊನೆಗೆ ಆ ಪ್ರಕರಣದಲ್ಲಿ ನನಗೆ ಜಯ ಸಿಕ್ಕಿತು. ಈ ಮಹಿಳೆಯೂ ಆಧಾರ ರಹಿತವಾಗಿ ನನ್ನ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಹಳೆಯ ಪ್ರಕರಣದ ಮಹಿಳೆಗೂ ಈಗ ಹೊಸದಾಗಿ ದೂರು ದಾಖಲಿಸಿರುವ ಮಹಿಳೆಗೂ ಸಂಬಂಧ ಇರುವ ಹಾಗಿದೆ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್