ಮರುಬಿಡುಗಡೆಯಾಗಿ ಅಮೆರಿಕದ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದ ಆರ್‌ಆರ್‌ಆರ್‌ ಚಿತ್ರ

  • ಬಿಡುಗಡೆಯಾದ ಮೊದಲ ವಾರದಲ್ಲೆ ಆರ್‌ಆರ್‌ಆರ್‌ 6.5 ಕೋಟಿ ಡಾಲರ್ ಗಳಿಕೆ
  • ಆರ್‌ಆರ್‌ಆರ್‌ ಅಮೆರಿಕದಲ್ಲಿ ಅತೀ ಹೆಚ್ಚು ವಿಕ್ಷಣೆ ಪಡೆದುಕೊಂಡ ಸಿನಿಮಾ

ಇದೇ ಮಾರ್ಚ್ 22ರಂದು ಬಿಡುಗಡೆಯಾಗಿದ್ದ, ಎಸ್ ಎಸ್ ಚಂದ್ರಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ವಿಭಿನ್ನ ಮೇಕಿಂಗ್, ಕಥೆ ಹಾಗೂ ಹಾಡುಗಳಿಂದ ಸಾಕಷ್ಟು ಹೆಸರು ಮಾಡಿತ್ತು. ಆದರೆ, ಅಮೆರಿಕದಲ್ಲಿ ಮರುಬಿಡುಗಡೆಯಾಗುವ ಮೂಲಕ ಮತ್ತೆ ಸುದ್ದಿಯಾಗಿದೆ.

'ರೈಸ್, ರೋರ್, ರಿವೋಲ್ಟ್' ಎಂಬ ತೆಲುಗು ಭಾಷೆಯ ಭಾರತೀಯ ಆ್ಯಕ್ಷನ್ ಚಿತ್ರ, ಮೊದಲ ಬಾರಿಗೆ ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಗೆದ್ದು, 6.5 ಕೋಟಿ ಡಾಲರ್‌ (ಸುಮಾರು ₹516 ಕೋಟಿ) ಗಳಿಸಿತ್ತು. ಈ ನಡುವೆ ರಾಜಮೌಳಿಯವರು ಅಮೆರಿಕದಾದ್ಯಂತ ಎರಡನೇ ಬಾರಿಗೆ ಬಿಡುಗಡೆ ಮಾಡಲು ನಿರ್ಧರಿಸಿದರು.

ಅಭಿಮಾನಿಗಳ ಮನಸ್ಸು ಗೆದ್ದ ಚಿತ್ರ, ಬಿಡುಗಡೆಯಾದ ಹತ್ತು ವಾರಗಳ ನಂತರ ಅಮೆರಿಕ ಅಭಿಮಾನಿಗಳನ್ನು ತಲುಪಿದೆ. ಚಲನಚಿತ್ರವು ಈಗಾಗಲೇ ಭಾರತದಾದ್ಯಂತ 1,200 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಮೇಲೆ ಅಮೆರಿಕದಲ್ಲಿ ಮರುಬಿಡುಗಡೆಯಾಗಿ ಹಿಟ್ ಎನಿಸಿದೆ. 

1920ರ ದಶಕದ ಆರಂಭದ ಕತೆಯಿರುವ ದೇಶಭಕ್ತಿ ಆಧಾರಿತ ಚಿತ್ರ 'ಆರ್‌ಆರ್‌ಆರ್‌'. ಆದರೆ, ದೇಶಭಕ್ತಿ ವಿಚಾರದಲ್ಲಿ ಹೆಚ್ಚು ಆಸಕ್ತಿ ಇಲ್ಲದ ನಾಯಕರಾದ ರಾಮ್ ಚರಣ್ ಮತ್ತು ಎನ್ ಟಿ ರಾಮ್‌ರಾವ್ ಅಪಹರಣಕ್ಕೊಳಗಾದ ಹುಡುಗಿಯನ್ನು ರಕ್ಷಿಸಲು ಒಂದು ತಂಡ ಕಟ್ಟಿ, ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಹೋರಾಡುತ್ತಾರೆ. 

ಈ ಸುದ್ದಿ ಓದಿದ್ದೀರಾ? ಈ ಸಿನಿಮಾ | ಸೀತಾ ರಾಮಂ: ಕಣ್ಣಾಲಿಗಳನ್ನು ತುಂಬಿಸುವ ವಿರಳ ಪ್ರೇಮ ಕಥನ

ಈ ಹಿನ್ನೆಲೆಯ ಕಥೆಯನ್ನು ಹೊಂದಿರುವ 'ಆರ್‌ಆರ್‌ಆರ್‌' ಬಾಲಿವುಡ್ ಮಾರುಕಟ್ಟೆಗಾಗಿ ಹಿಂದಿ ಭಾಷೆಯಲ್ಲಿ ಮೇ ತಿಂಗಳಿನಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿತ್ತು. ಈ ನಡುವೆ ಸತತ ಒಂಬತ್ತು ವಾರಗಳವರೆಗೆ ಅಮೆರಿಕದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರವಾಗಿದ್ದು, ಮೊದಲ ಹತ್ತು ಸ್ಥಾನ ಪಡೆದುಕೊಂಡಿದೆ. 

'ಆರ್‌ಆರ್‌ಆರ್‌' ಚಿತ್ರ ಸದ್ಯ ಅಮೆರಿಕದ ಬಾಕ್ಸ್ ಆಫೀಸ್‌ನಲ್ಲಿ 1.4 ಕೋಟಿ ಡಾಲರ್‌ (ಸುಮಾರು ₹111 ಕೋಟಿ) ಹಣ ಗಳಿಸಿದೆ. ಅಮೆರಿಕದ 34 ರಾಜ್ಯಗಳಲ್ಲಿ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದೆ. ತೆಲುಗಿನ 'ಪುಷ್ಪ ಭಾಗ-1' ಚಿತ್ರ ಕಳೆದ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರವಾಗಿತ್ತು. ಆ ಸಿನಿಮಾ ಅಮೆರಿಕದಲ್ಲಿ 1.32 ಲಕ್ಷ ಡಾಲರ್ ಆದಾಯ ಗಳಿಸಿದೆ.

ಮರುಬಿಡುಗಡೆಯ ಸಂದರ್ಭದಲ್ಲಿ #encoRRRe ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಪಡೆದ 'ಆರ್‌ಆರ್‌ಆರ್‌' ಅಮೆರಿಕದಾದ್ಯಂತ ಲಕ್ಷಾಂತರ ಪ್ರೇಕ್ಷಕರ ಗಮನ ಸೆಳೆದಿತ್ತು. "ಇದೇ ಮೊದಲ ಬಾರಿಗೆ ಟಾಲಿವುಡ್‌ ಸಿನಿಮಾವೊಂದರ ಟಿಕೆಟ್ ಇಷ್ಟೊಂದು ಪ್ರಮಾಣದಲ್ಲಿ ಖರೀದಿಯಾಗಿದೆ" ಎಂದು ವಿತರಕ ವೇರಿಯನ್ಸ್ ಫಿಲ್ಮ್ಸ್‌ನ ಅಧ್ಯಕ್ಷ ಡೈಲನ್ ಮಾರ್ಚೆಟ್ಟಿ ಅವರು ಹೇಳೀರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸರಿಗಮ ಸಿನಿಮಾಸ್ ಜೊತೆಗಿನ ಹಲವು ಸುತ್ತಿನ ಮಾತುಕತೆಗಳ ನಂತರ, ಹರ್ತಾಡೋ ಮತ್ತು ಮರ್ಚೆಟ್ಟಿ ಅವರು ಮರುಬಿಡುಗಡೆ ಬಗ್ಗೆ ಚಿಂತಿಸಿ, ಅಮೆರಿಕದಲ್ಲಿ ಬಿಡುಗಡೆ ಮಾಡಿದ್ದಾರೆ. ಜೂನ್ ಒಂದರಂದು ಸಿಯಾಟಲ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್