ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸಮಂತಾ ಅಭಿನಯದ ‘ಯಶೋದಾ’

  • ನವೆಂಬರ್ 11ರಂದು ದೇಶಾದ್ಯಂತ ಬಿಡುಗಡೆಯಾಗಿರುವ 'ಯಶೋದಾ'
  • ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ನಟಿಯ ಮೊದಲ ಸಿನಿಮಾ

ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಯಶೋದಾ’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಮೂರು ದಿನಗಳು ಕಳೆದಿದ್ದು, ಬಾಕ್ಸ್ ಆಫೀಸ್‌ನ ಗಳಿಕೆಯಲ್ಲಿ ಸುದ್ದಿಯಾಗುತ್ತಿದೆ. 

ನವೆಂಬರ್ 11ರಂದು ‘ಯಶೋದಾ’ ಚಿತ್ರ ಬಿಡುಗಡೆಯಾಗಿದ್ದು, ನಾಯಕ ನಟರೇ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ನಾಯಕಿ ಪ್ರಧಾನ ಸಿನಿಮಾ 'ಯಶೋದಾ' ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. 

'ಯಶೋದಾ' ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐದು ಭಾಷೆಯಲ್ಲಿ ಬಿಡುಗಡೆಯಾದ ನಟಿಯ ಮೊದಲ ಸಿನಿಮಾ ಇದಾಗಿದೆ.

‘ಯಶೋದಾ’ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೂಲಗಳ ಪ್ರಕಾರ ವಾರಾಂತ್ಯದಲ್ಲಿ ಈ ಚಿತ್ರ ಕೋಟ್ಯಂತರ ರೂಪಾಯಿ ಗಳಿಸಿದೆ. ಭಾನುವಾರ (ನ. 13) ಭಾರತದಲ್ಲಿ ₹3.50 ಕೋಟಿ ಗಳಿಸಿದೆ. ಅಮೆರಿಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಒಟ್ಟಾರೆ ಮೂರು ದಿನಕ್ಕೆ ₹10 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ? ಕಾಶಿಯಲ್ಲಿ ಕನ್ನಡ ಹಬ್ಬ | ನಟಿ ಪ್ರೇಮಾಗೆ 'ಗಂಧದಗುಡಿ ಪ್ರಶಸ್ತಿ' ; ಶಿಲ್ಪಾ ಶೆಟ್ಟಿ, ತಾರಾ ಭಾಗಿ

ಈ ಚಿತ್ರದಲ್ಲಿ ಸಮಂತಾ ಅವರು ಎರಡು ರೀತಿಯ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಗರ್ಭಿಣಿಯಾಗಿ ಕಾಣಿಸಿಕೊಂಡಿರುವ ಸಮಂತಾ ಅವರು ಸಾಹಸ ದೃಶ್ಯಗಳು ಮೂಲಕ ಗಮನ ಸೆಳೆದಿದ್ದಾರೆ. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ವಿಮರ್ಶಕರಿಂದ 'ಯಶೋದಾ' ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

'ಯಶೋದಾ' ಚಿತ್ರವು ಕ್ರೈಂ ಥ್ರಿಲ್ಲರ್ ಸಿನಿಮಾ. ಹರೀಶ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ಕುಮಾರ್, ಮುರಳಿ ಶರ್ಮಾ ಕೂಡ ಇದ್ದಾರೆ. ಸಂಪತ್ ಮತ್ತು ದಿವ್ಯಾ ಶ್ರೀಪ್ರದಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಛಾಯಾಗ್ರಾಹಕ ಎಂ ಸುಕುಮಾರ್, ಸಂಕಲನಕಾರ ಮಾರ್ತಾಂಡ್ ವೆಂಕಟೇಶ್ ಮತ್ತು ಸಂಗೀತ ಸಂಯೋಜಕ ಮಣಿ ಶರ್ಮಾ ತಾಂತ್ರಿಕ ತಂಡದಲ್ಲಿ ಕೆಲಸ ಮಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app