ಹಿಂದಿಗೆ ರೀಮೇಕ್‌ ಆಗಲಿದೆ ಕನ್ನಡದ ರಂಗಿತರಂಗ

Rangitaranga Anoop Bhandari
  • ತೆರೆಕಂಡ 7 ವರ್ಷಗಳ ಬಳಿಕ ರಂಗಿತರಂಗ ರೀಮೇಕ್‌
  • ಅಕ್ಷಯ್‌ ಕುಮಾರ್‌, ಶಾಹಿದ್‌ ಕಪೂರ್‌ ನಟಿಸುವ ಸಾಧ್ಯತೆ

ಕನ್ನಡದ ಸೂಪರ್ ಹಿಟ್ ಸಿನಿಮಾ ʼರಂಗಿತರಂಗʼ ಇದೀಗ ಹಿಂದಿಗೆ ರೀಮೇಕ್‌ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಕಳೆದ 7 ವರ್ಷಗಳ ಹಿಂದೆ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪತ್ತೆದಾರಿ ಕಥಾಹಂದರದ 'ರಂಗಿತರಂಗ' ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತ್ತು. ಈ ಚಿತ್ರ ಹಿಂದಿಗೆ ರೀಮೇಕ್ ಆಗಲಿದೆ ಎಂಬ ಮಾತುಗಳು ಹಲವು ವರ್ಷಗಳಿಂದ ಕೇಳಿ ಬಂದಿದ್ದವು. ಆದರೆ, ಅದು ಸಾಧ್ಯವಾಗಿರಲಿಲ್ಲ.

ಇದೀಗ 'ರಂಗಿತರಂಗ' ಬಾಲಿವುಡ್‌ನಲ್ಲಿ ರೀಮೇಕ್ ಆಗುತ್ತಿರುವುದು ಬಹುತೇಕ ಖಚಿತವಾಗಿದ್ದು, ಹಿಂದಿಯ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯೊಂದು ಚಿತ್ರದ ರೀಮೇಕ್ ಹಕ್ಕು ಕೊಂಡುಕೊಳ್ಳುತ್ತಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟರಾದ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸುವ ಸಾಧ್ಯತೆಗಳಿವೆ.

ಈ ಸುದ್ದಿ ಓದಿದ್ದೀರಾ? ಪವಿತ್ರಾ ಲೋಕೇಶ್‌ ಪ್ರಕರಣ | ಮಾಧ್ಯಮಗಳು ಸಮಾಜಕ್ಕೆ ಪೂರಕವಾಗದೆ ಮಾರಕವಾಗಿವೆ

ಅನೂಪ್‌ ಭಂಡಾರಿ ಚೊಚ್ಚಲ ನಿರ್ದೇಶನದ 'ರಂಗಿತರಂಗ' ಚಿತ್ರದಲ್ಲಿ ಅವರ ಸಹೋದರ, ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ನಟಿಯರಾದ ರಾಧಿಕಾ ನಾರಾಯಣ್‌ ಮತ್ತು ಆವಂತಿಕಾ ಶೆಟ್ಟಿ ಚಿತ್ರದಲ್ಲಿ ನಾಯಕಿಯರ ಪಾತ್ರ ನಿಭಾಯಿಸಿದ್ದರು. ಹಿರಿಯ ನಟ ಸಾಯಿ ಕುಮಾರ್‌ ಈ ಚಿತ್ರದಲ್ಲಿ ಖಳನ ಪಾತ್ರದಲ್ಲಿ ಮಿಂಚಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್