ಹಿರಿಯ ನಟ ಶಿವರಂಜನ್‌ ಮೇಲೆ ಗುಂಡಿನ ದಾಳಿ

shivaranjan
  • ಸೋದರ ಸಂಬಂಧಿಯಿಂದಲೇ ದಾಳಿಯ ಶಂಕೆ
  • ಆಸ್ತಿ ವಿಚಾರಕ್ಕೆ ಶಿವರಂಜನ್‌ ಹತ್ಯೆ ಯತ್ನ

ಉದ್ಯಮಿ, ಕನ್ನಡದ ಹಿರಿಯ ನಟ ಶಿವರಂಜನ್‌ ಮೇಲೆ ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಶಿವರಂಜನ್‌ ಅವರ ಮನೆಯ ಬಳಿ ಈ ಘಟನೆ ನಡೆದಿದೆ.

ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಶಿವರಂಜನ್‌ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್‌ ಶಿವರಂಜನ್‌ ಅವರಿಗೆ ಯಾವುದೇ ಗುಂಡು ತಗುಲಿಲ್ಲ. 

ಈ ಸುದ್ದಿ ಓದಿದ್ದೀರಾ? ಸುದೀಪ್ ಅವಹೇಳನ; ಅಹೋರಾತ್ರ, ಚರಣ್‌ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಆಸ್ತಿ ವಿಚಾರದ ಸಂಬಂಧ ಶಿವರಂಜನ್‌ ಅವರ ಸೋದರ ಸಂಬಂಧಿಯೇ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬೈಲಹೊಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,‌ ಬೆಳಗಾವಿ ಎಸ್‌ಪಿ ಡಾ. ಸಂಜೀವ್‌ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ʼಅಮೃತ ಸಿಂಧುʼ, ʼರಾಜಾ ರಾಣಿʼ, ʼಆಟ ಹುಡುಗಾಟʼ, ʼಬನ್ನಿ ಒಂದ್ಸಲ ನೋಡಿʼ, ʼಸತ್ಯ ಸಂದೇಶʼ, ʼಬಿಸಿ ರಕ್ತʼ, ʼಕನಸೆಂಬ ಕುದುರೆಯನೇರಿʼ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಶಿವರಂಜನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್