ಸಿದ್ದರಾಮಯ್ಯ75 | ಸಿನಿಮಾ ರೂಪ ಪಡೆಯಲಿದೆ ಸಿದ್ದರಾಮಯ್ಯ ಬದುಕಿನ ಕತೆ

siddaramaiah
  • ಸಿದ್ದರಾಮಯ್ಯ ʼಬಯೋಪಿಕ್‌ʼ ನಿರ್ಮಾಣಕ್ಕೆ ಮುಂದಾದ ಉದ್ಯಮಿ 
  • ಸಿನಿಮಾದ ಚಿತ್ರಕಥೆ ಸಿದ್ಧವಾಗುತ್ತಿದೆ ಎಂದ ಶ್ರೀಧರ್‌ ರಾವ್‌

ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು 75ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಅವರ ಈ ಬಾರಿಯ ಹುಟ್ಟುಹಬ್ಬವನ್ನು ಸಿದ್ದರಾಮೋತ್ಸವವನ್ನಾಗಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕೂಡ ಅದ್ದೂರಿಯಾಗಿ ಜರುಗಿದೆ. ಈ ಸಂಭ್ರಮದ ವೇಳೆ ಸಿದ್ದರಾಮಯ್ಯ ಕುರಿತಾದ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದ್ದು, ಸಿದ್ದರಾಮಯ್ಯ ಅವರ ಬಯೋಪಿಕ್ ನಿರ್ಮಿಸುವುದಾಗಿ ತೆಲಂಗಾಣ ಮೂಲದ ಉದ್ಯಮಿ ಶ್ರೀಧರ್ ರಾವ್‌ ಘೋಷಿಸಿದ್ದಾರೆ.

ಈ ಬಗ್ಗೆ ಮಂಗಳವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಶ್ರೀಧರ್, "ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ಮಾಡಲು ತಯಾರಿ ನಡೆಸಿದ್ದೇವೆ. ಅವರು ನಡೆದು ಬಂದ ಹಾದಿ, ರಾಜಕೀಯ ಜೀವನ, ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳು ಮುಂತಾದ ವಿಚಾರಗಳನ್ನು ಆಧರಿಸಿ ಸಿದ್ದರಾಮಯ್ಯ ಅವರ ʼಬಯೋಪಿಕ್‌ʼ ಸಿದ್ಧಗೊಳ್ಳಲಿದೆ. ಅವರ ಸ್ನೇಹಿತರು, ಅಭಿಮಾನಿಗಳ ಜೊತೆ ಚರ್ಚಿಸಿ ಸಿನಿಮಾ ಮಾಡಲಾಗುವುದು. ಪ್ಯಾನ್‌ ಇಂಡಿಯಾ ಶೈಲಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುವುದು. ಮೊದಲು ಚಿತ್ರಕಥೆ ಸಿದ್ಧಪಡಿಸಿ ಅದನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿ ಅವರ ಒಪ್ಪಿಗೆ ಪಡೆದ ಬಳಿಕವೇ ಚಿತ್ರ ನಿರ್ಮಿಸುತ್ತೇವೆ. ದೊಡ್ಡ ಬಜೆಟ್‌ನಲ್ಲೇ ಚಿತ್ರ ನಿರ್ಮಾಣ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಿರೀಕ್ಷೆ ಹುಸಿಗೊಳಿಸಿದರೂ ಬಾಲಿವುಡ್‌ ಚಿತ್ರಗಳಿಗೆ ಪೈಪೋಟಿ ನೀಡುತ್ತಿರುವ ವಿಕ್ರಾಂತ್‌ ರೋಣ

ಸಿದ್ದರಾಮಯ್ಯ ಜೀವನಾಧಾರಿತ ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ. ಅವರ ಪಾತ್ರ ನಿರ್ವಹಿಸುವ ಕನ್ನಡದ ಕಲಾವಿದರು ಯಾರು ಎಂಬುದು ಕೂಡ ಇನ್ನೂ ಗೌಪ್ಯವಾಗಿ ಉಳಿದಿದೆ. ಚಿತ್ರಕಥೆ ಓದಿ ಸಿದ್ದರಾಮಯ್ಯನವರು ಸಮ್ಮತಿ ಸೂಚಿಸಿದರೆ ಮಾತ್ರ ಈ ಚಿತ್ರ ಸೆಟ್ಟೇರಲಿದೆ. 

ನಿಮಗೆ ಏನು ಅನ್ನಿಸ್ತು?
2 ವೋಟ್