ದಕ್ಷಿಣ ಭಾರತದ ಖ್ಯಾತ ಸಿನಿಮಾ ವಿಶ್ಲೇಷಕ ಕೌಶಿಕ್ ಇನ್ನಿಲ್ಲ

kaushik lm
  • ಸಿನಿಮಾ ರಂಗದ ಜೊತೆಗೆ ಒಡನಾಟ ಹೊಂದಿದ್ದ ಕೌಶಿಕ್‌
  • ಕೌಶಿಕ್ ಅಗಲುವಿಕೆಗೆ ಕಂಬನಿ ಮಿಡಿದ ತಾರೆಯರು 

ದಕ್ಷಿಣ ಭಾರತದ ಖ್ಯಾತ ಸಿನಿಮಾ ವಿಶ್ಲೇಷಕ ಕೌಶಿಕ್ ಎಲ್‌ ಎಂ ಹೃದಯಾಘಾದಿಂದ ನಿಧನರಾಗಿದ್ದಾರೆ. 36 ವರ್ಷದ ಅವರು ಹೃದಯಾಘಾತದಿಂದ ಸೋಮವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳ ಗಳಿಕೆಯ ಲೆಕ್ಕಾಚಾರದಿಂದ ಹಿಡಿದು ಚಿತ್ರ ವಿಮರ್ಶೆ, ಚಿತ್ರರಂಗದ ದಿನನಿತ್ಯದ ವಿದ್ಯಮಾನಗಳನ್ನು ಟ್ವಿಟರ್‌ ಮೂಲಕ ಹಂಚಿಕೊಳ್ಳುತ್ತಿದ್ದ ಕೌಶಿಕ್‌ ದಕ್ಷಿಣದ ಸಿನಿ ತಾರೆಯರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದರು. ಪ್ರಾಮಾಣಿಕ ಸಿನಿ ವಿಮರ್ಶೆಯ ಮೂಲಕ ಚಿಕ್ಕ ವಯಸ್ಸಿಗೆ ಜನಪ್ರಿಯತೆ ಗಳಿಸಿದ್ದ ಕೌಶಿಕ್‌, ಟ್ವಿಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.

ಈ ಸುದ್ದಿ ಓದಿದ್ದೀರಾ? ಕುತೂಹಲ ಸೃಷ್ಟಿಸಿದ ನಿರ್ದೇಶಕ ಮನ್ಸೂರೆಯವರ ‘19 20 21’ ಚಿತ್ರದ ಪೋಸ್ಟರ್

ಕೌಶಿಕ್ 36ನೇ ವರ್ಷಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದು ಸಿನಿ ಮಂದಿಯನ್ನು ಆಘಾತಕ್ಕೆ ಒಳಗಾಗುವಂತೆ ಮಾಡಿದೆ. ದುಲ್ಕರ್ ಸಲ್ಮಾನ್, ಕೀರ್ತಿ ಸುರೇಶ್, ಮೃನಾಲ್ ಠಾಕೂರ್, ವಿಜಯ್ ದೇವರಕೊಂಡ, ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ತಾರೆಯರು ಕೌಶಿಕ್ ಸಾವಿಗೆ ಕಂಬನಿ ಮಿಡಿದಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್