
- ಭಾರತದಲ್ಲಿ ಮಾತ್ರವಲ್ಲದೇ ಜಪಾನ್ನಲ್ಲೂ ಮೋಡಿ ಮಾಡಿರುವ 'ಆರ್ಆರ್ಆರ್'
- ಜೂನಿಯರ್ ಎನ್ಟಿಆರ್, ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ
ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹಾಗೂ ಆಲಿಯಾ ಭಟ್ ಅಭಿನಯದ 'ಆರ್ಆರ್ಆರ್' ಪ್ರಪಂಚಾದ್ಯಂತ ಗಮನ ಸೆಳೆದಿದ್ದು, ಈಗ ಅದರ ಎರಡನೇ ಭಾಗ 'ಆರ್ಆರ್ಆರ್2' ಬಗ್ಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಖಚಿತಪಡಿಸಿದ್ದಾರೆ.
“ತಂದೆ ವಿಜಯೇಂದ್ರ ಪ್ರಸಾದ್ ಅವರೊಂದಿಗೆ 'ಆರ್ಆರ್ಆರ್2' ಚಿತ್ರದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದೇನೆ” ಎಂದು ನಿರ್ಮಾಪಕರು ಹೇಳಿದ್ದಾರೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಬ್ಲಾಕ್ಬಾಸ್ಟರ್ ಆಗಿದ್ದು, ಭಾರತದಲ್ಲಿ ಮಾತ್ರವಲ್ಲದೇ, ಜಪಾನ್ ಬಾಕ್ಸ್ ಆಫೀಸ್ನಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. 'ಆರ್ಆರ್ಆರ್' ದೊಡ್ಡ ಮಟ್ಟದ ಯಶಸ್ಸಿನ ನಂತರ, ರಾಜಮೌಳಿ ಅವರು ಅಂತಿಮವಾಗಿ ಚಿತ್ರದ ಎರಡನೇ ಭಾಗವನ್ನು ಖಚಿತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಸಮಾರಂಭವೊಂದರಲ್ಲಿ ಚಲನಚಿತ್ರ ನಿರ್ಮಾಪಕರು ಈ ಬಗ್ಗೆ ಮಾತನಾಡಿದ್ದಾರೆ. ಎಸ್ಎಸ್ ರಾಜಮೌಳಿಯ 'ಆರ್ಆರ್ಆರ್' ಚಿತ್ರದ ಯಶಸ್ಸಿಗೆ ಕೊನೆಯೇ ಇಲ್ಲದಂತಾಗಿದೆ. ದಕ್ಷಿಣ ಭಾರತದ ಚಿತ್ರ ಬಿಡುಗಡೆಯಾಗಿ ಬಾಲಿವುಡ್ ಜೊತೆ ಪೈಪೋಟಿ ನಡೆಸಿ ಗೆದ್ದ ನಂತರ, 'ಆರ್ಆರ್ಆರ್' ಇತ್ತೀಚೆಗೆ ಜಪಾನ್ನಲ್ಲಿಯೂ ಬಿಡುಗಡೆಯಾಯಿತು. ಅಂದಿನಿಂದ, ಚಲನಚಿತ್ರ ನಿರ್ಮಾಪಕರು 'ಆರ್ಆರ್ಆರ್2' ಬರುವ ಬಗ್ಗೆ ಚರ್ಚೆ ಆರಂಭಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕನ್ನಡ ಮಾಸದಲ್ಲಿ ನೋಡಲೇಬೇಕಾದ ಕನ್ನಡ ಸಿನಿಮಾ | ಹೊಸ ಜಗತ್ತೊಂದನ್ನು ಕಟ್ಟಿಕೊಡುವ 'ಉಳಿದವರು ಕಂಡಂತೆ'
ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಜಮೌಳಿ 'ಆರ್ಆರ್ಆರ್2' ಬಗ್ಗೆ ದೃಢಪಡಿಸಿದ್ದು, "ನನ್ನ ಎಲ್ಲ ಚಿತ್ರಗಳಿಗೆ ನನ್ನ ತಂದೆ ಕಥೆ ಬರೆಯುತ್ತಾರೆ. ನಾವು 'ಆರ್ಆರ್ಆರ್2' ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ. ಅವರು ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
'ಆರ್ಆರ್ಆರ್'ನಲ್ಲಿಲ್ಲಿ ಜೂನಿಯರ್ ಎನ್ಟಿಆರ್ ಅವರು ಬುಡಕಟ್ಟು ನಾಯಕ ಕೊಮರಂ ಭೀಮ್ ಮತ್ತು ರಾಮ್ ಚರಣ್ ಧೈರ್ಯಶಾಲಿ ಅಲ್ಲೂರಿ ಸೀತಾ ರಾಮರಾಜು ಪಾತ್ರದಲ್ಲಿ ನಟಿಸಿದ್ದಾರೆ. ಕಾಲ್ಪನಿಕ ಕಥೆಯು ಅವರ ಸ್ನೇಹ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಟವನ್ನು ಎತ್ತಿ ತೋರಿಸುತ್ತದೆ.
ಪಾತ್ರವರ್ಗದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಸಮುದ್ರಕನಿ ಮತ್ತು ರೇ ಸ್ಟೀವನ್ಸನ್ ಸೇರಿದಂತೆ ಇತರರು ಇದ್ದಾರೆ. ಇದರ ಸಂಗೀತವನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದು, 'ಆರ್ಆರ್ಆರ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಸುಮಾರು ₹1,200 ಕೋಟಿ ಗಳಿಸಿದೆ.