ಜೀವ ಬೆದರಿಕೆ: ಮುಂಬೈ ಪೊಲೀಸರಿಗೆ ದೂರು ನೀಡಿದ ನಟಿ ಸ್ವರ ಭಾಸ್ಕರ್‌

  • ನಟಿಗೆ ಜೀವ ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳು
  • ತನಿಖೆ ಆರಂಭಿಸಿರುವ ಮುಂಬೈ ಪೊಲೀಸರು

'ಆರ್‌ಎಸ್‌ಎಸ್‌ ನಾಯಕ ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆ' ಎಂಬ ಕಾರಣಕ್ಕೆ ಬಾಲಿವುಡ್ ನಟಿ ಸ್ವರ ಭಾಸ್ಕರ್ ಅವರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾರೆ. 

ಸ್ವರ ಭಾಸ್ಕರ್ ಅವರು ತಮಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಗಂಭೀರವಲ್ಲದ (ನಾನ್-ಕಾಗ್ನಿಜಬಲ್) ಅಪರಾಧ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಪತ್ರವನ್ನು ಮುಂಬೈನ ವರ್ಸೋವಾದಲ್ಲಿರುವ ನಟರೊಬ್ಬರ ನಿವಾಸಕ್ಕೆ ಕಳುಹಿಸಲಾಗಿದೆ. ನಂತರ ಅವರು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ರವನ್ನು ಹಿಂದಿಯಲ್ಲಿ ಬರೆಯಲಾಗಿದೆ ಮತ್ತು ಸ್ವರ ಅವರ ಬಗ್ಗೆ ನಿಂದನೆ ಮತ್ತು ಬೆದರಿಕೆ ಇರುವಂತಹ ಸಾಲುಗಳನ್ನು ಒಳಗೊಂಡಿದೆ. ಜೊತೆಗೆ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೊನೆಯಲ್ಲಿ ʼಇಸ್ ದೇಶ್ ಕೆ ನೌಜವಾನ್’ (ಈ ದೇಶದ ಯುವಕರು)ʼ ಎಂದು ಸಹಿ ಹಾಕಲಾಗಿದೆ.

 
 
 
 
 
 
 
 
 
 
 
 
 
 
 

A post shared by Swara Bhasker (@reallyswara)

ಕಳೆದ ತಿಂಗಳು ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೂ ಬೆದರಿಕೆ ಪತ್ರ ಬಂದಿತ್ತು. ಪೊಲೀಸರ ಪ್ರಕಾರ ಮುಂಬೈನ ‘ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ʼ ವಾಯುವಿಹಾರ ಸ್ಥಳದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಬೆದರಿಕೆಯೊಡ್ಡಿ ಬರೆದ ಸಹಿ ಇಲ್ಲದ ಪತ್ರವೊಂದು ಪತ್ತೆಯಾಗಿತ್ತು.

ಬೆದರಿಕೆ ಪತ್ರದಲ್ಲಿ ಸಲೀಂ ಖಾನ್ ಮತ್ತು ಅವರ ಮಗ ಇಬ್ಬರೂ ಹತ್ಯೆಗೀಡಾದ ಗಾಯಕ ಸಿದ್ದು ಮೂಸೆವಾಲಾ (ಇತ್ತೀಚೆಗೆ ಅವರನ್ನು ಹತ್ಯೆ ಮಾಡಲಾಗಿದೆ) ಅವರಂತೆಯೇ ಶೀಘ್ರದಲ್ಲೇ ಅಂತ್ಯ ಪಡೆಯಲಿದ್ದಾರೆ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್