ತಮಿಳಿನ ಸ್ಟಾರ್ ನಟ ಜಯಂ ರವಿಗೆ ಕೋವಿಡ್ ಸೋಂಕು ದೃಢ; ಪೊನ್ನಿಯಿನ್‌ ಸೆಲ್ವನ್‌ ಬಳಗಕ್ಕೆ ಆತಂಕ

jayam ravi
  • ʼಪೊನ್ನಿಯಿನ್‌ ಸೆಲ್ವನ್‌ʼ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಜಯಂ ರವಿ
  • ಆಪ್ತರಿಗೆ ಸುರಕ್ಷಿತವಾಗಿರುವಂತೆ ಮನವಿ ಮಾಡಿದ ಸ್ಟಾರ್‌ ನಟ

ತಮಿಳಿನ ಖ್ಯಾತ ನಟ ಜಯಂ ರವಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅಕ್ಟೋಬರ್ 21ರಂದು ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರವಿ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ತಪಾಸಣಾ ವರದಿಯಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದೆ.  

ತಮಗೆ ಸೋಂಕು ತಗಲಿರುವ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರವಿ, “ಇಂದು ಬೆಳಗ್ಗೆ ತಪಾಸಣೆಗೆ ಒಳಗಾದಾಗ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿಗೆ ಸಂಬಂಧಿಸಿ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದು, ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಅಗತ್ಯವಿದ್ದರೆ ತಪಾಸಣೆಗೆ ಒಳಗಾಗಿ ಮತ್ತು ಸುರಕ್ಷಿತವಾಗಿರಿ" ಎಂದು ಮನವಿ ಮಾಡಿದ್ದಾರೆ.

Eedina App

ಇತ್ತೀಚೆಗೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಮಣಿರತ್ನಂ ನಿರ್ದೇಶನದ ʼಪೊನ್ನಿಯಿನ್ ಸೆಲ್ವನ್ʼ ಚಿತ್ರದಲ್ಲಿ ಜಯಂ ರವಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದ ಜೊತೆಗೆ ಬೆಂಗಳೂರು, ಹೈದರಾಬಾದ್‌‌, ಮುಂಬೈ ಸೇರಿದಂತೆ ಹಲವು ನಗರಗಳಿಗೆ ಭೇಟಿ ನೀಡಿದ್ದ ರವಿ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರಯಾಣದಲ್ಲಿ ತೊಡಗಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

AV Eye Hospital ad

'ಪೊನ್ನಿಯಿನ್‌ ಸೆಲ್ವನ್‌' ಚಿತ್ರದ ಪ್ರಚಾರ ಮತ್ತು ಯಶಸ್ಸಿನ ಸಂಭ್ರಮಾಚರಣೆಯಲ್ಲಿ ರವಿ ಅವರ ಜೊತೆಗೆ ಚಿಯಾನ್‌ ವಿಕ್ರಮ್‌, ಕಾರ್ತಿ, ತ್ರಿಷಾ ಕೃಷ್ಣನ್‌, ಐಶ್ವರ್ಯಾ ರೈ, ಮಣಿರತ್ನಂ ಮುಂತಾದವರು ಕಾಣಿಸಿಕೊಂಡಿದ್ದರು. ಸದ್ಯ ಈ ಸ್ಟಾರ್‌ ನಟ, ನಟಿಯರಿಗೂ ಕೊರೊನಾ ಆತಂಕ ಶುರುವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app