
- ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದ ನಟಿಗೆ ಮಧ್ಯಂತರ ಜಾಮೀನು
- ವಂಚನೆಯ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲು ಪಾಲು
₹200 ಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಪೊಲೀಸರ ವಿಚಾರಣೆಯಿಂದ ಕೊಂಚ ಬಿಡುಗಡೆ ಸಿಕ್ಕಿದೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ದೆಹಲಿ ಪಟಿಯಾಲ ನ್ಯಾಯಾಲಯವು ₹50,000 ಬಾಂಡ್ ಜೊತೆಗೆ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ. ಅಲ್ಲದೆ, ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧ 37 ವರ್ಷದ ಜಾಕ್ವೆಲಿನ್ ಜಾಕ್ವೆಲಿನ್ ಅವರನ್ನು ದೆಹಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಎರಡು ಬಾರಿ ವಿಚಾರಣೆ ಒಳಪಡಿಸಿದ್ದರು. ಕಳೆದ ವಾರ, ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ತನಿಖೆಯ ವೇಳೆ, ಜೈಲು ಶಿಕ್ಷೆಗೊಳಗಾಗಿರುವ ಸುಕೇಶ್, ಫ್ಯಾಷನ್ ಡಿಸೈನರ್ ಲೀಪಾಕ್ಷಿಗೆ ವಿಶೇಷವಾದ ವೇಷಭೂಷಣಗಳನ್ನು ವಿನ್ಯಾಸಗೊಳಿಸಲು ಹಣ ನೀಡಿದ್ದಾಗಿ ಜಾಕ್ವೆಲಿನ್ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಗೌಪ್ಯವಾಗಿದ್ದ ಬಿಗ್ಬಾಸ್ ಸ್ಪರ್ಧಿಗಳ ಹೆಸರು ಬಹಿರಂಗ; ಹೊಸ ಸ್ಪರ್ಧಿಗಳ ಪಟ್ಟಿ ಇಲ್ಲಿದೆ
200 ಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗೆ ನಂಟು ಹೊಂದಿದ್ದ ಜಾಕ್ವೆಲಿನ್, ಆತ ಅಕ್ರಮ ಹಣ ಸಂಪಾದಿಸಿ, ಉಡುಗೊರೆ ನೀಡುತ್ತಿದ್ದಾನೆಂದು ತಿಳಿದ ಮೇಲೂ ಆರೋಪಿಯಿಂದ 7 ಕೋಟಿಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದರು.