ತೆಲುಗಿನ ಖ್ಯಾತ ಸಂಕಲನಕಾರ ಗೌತಮ್ ರಾಜು ನಿಧನ

gautham raju
  • ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ಸಂಕಲನಕಾರ
  • 850ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನ ಮಾಡಿದ್ದ ಗೌತಮ್‌ ರಾಜು

ತೆಲುಗಿನ ಖ್ಯಾತ ಸಂಕಲನಕಾರ ಗೌತಮ್‌ ರಾಜು ಮಂಗಳವಾರ ನಿಧನರಾಗಿದ್ದಾರೆ.

ತೆಲುಗು, ತಮಿಳು, ಹಿಂದಿ ಮತ್ತು ಕನ್ನಡದ 850ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದ, ತೆಲುಗು ಚಿತ್ರರಂಗದ ಹಿರಿಯ ಸಂಕಲನಕಾರ ಗೌತಮ್ ರಾಜು ಮಂಗಳವಾರ ತಡರಾತ್ರಿ ನಿಧನರಾಗಿದ್ದು, ವಿವರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗೌತಮ್‌ ರಾಜು ಮಂಗಳವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ₹150 ಕೋಟಿ ಗಳಿಸಿದ 777 ಚಾರ್ಲಿ; ದೇಶಿಯ ನಾಯಿಗಳ ಪೋಷಣೆಗೆ ಹಣ ಮೀಸಲಿಟ್ಟ ಚಿತ್ರತಂಡ

ಪವನ್‌ ಕಲ್ಯಾಣ್‌ ನಟನೆಯ ʼಗಬ್ಬರ್ ಸಿಂಗ್ʼ, ಅಲ್ಲು ಅರ್ಜುನ್‌ ಅಭಿನಯದ ʼರೇಸ್ ಗುರ್ರಂʼ, ʼಬದ್ರಿನಾಥ್ʼ ಮತ್ತು ರವಿತೇಜ ಮುಖ್ಯಭೂಮಿಕೆಯ 'ಬಲುಪುʼ ಸೇರಿದಂತೆ ವಿವಿಧ ಭಾಷೆಗಳ 850ಕ್ಕೂ ಹೆಚ್ಚು ಚಿತ್ರಗಳಿಗೆ ಗೌತಮ್ ರಾಜು ಸಂಕಲನ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್