ಅಪ್ಪು ಸಮಾಧಿಯ ದರ್ಶನ ಪಡೆದ ವಿಜಯ್ ದೇವರಕೊಂಡ

vijay devarakonda
  • ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿರುವ ವಿಜಯ್‌ ದೇವರಕೊಂಡ
  • ಪುನೀತ್‌ ಸಮಾಧಿಗೆ ʼಅಪ್ಪುʼ ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ ನಮನ  

'ಲೈಗರ್' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಝಿಯಾಗಿರುವ ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಬಂದಿಳಿದ ವಿಜಯ್ ನೇರವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ನಟನ ಸಮಾಧಿಯ ದರ್ಶನ ಪಡೆದಿದ್ದಾರೆ.

Image
vijay devarakond

ಪುನೀತ್‌ ರಾಜ್‌ಕುಮಾರ್‌ ಬದುಕಿದ್ದಾಗ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ವಿಜಯ್‌ ಪುನೀತ್‌ ಸಾವಿನ ಸುದ್ದಿ ಕೇಳಿ ಭಾವುಕರಾಗಿದ್ದರು. ಪುನೀತ್‌ ಸಾವನ್ನಪ್ಪಿದ ಮಾರನೇ ದಿನ ಹೈದರಾಬಾದ್‌ನ ವೇದಿಕೆಯೊಂದರಲ್ಲಿ ಪುನೀತ್‌ ಜೊತೆಗಿನ ಒಡನಾಟ ಮತ್ತು ಅವರ ಮನೆಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ವಿಜಯ್‌ ಮಾತನಾಡಿದ್ದರು.

"ಪುನೀತ್‌ ಅಣ್ಣ ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರು. ಆ ದಿನ ಅವರ ಜೊತೆ ಮೂರ್ನಾಲ್ಕು ಗಂಟೆಗಳ ಕಾಲ ಕಳೆದಿದ್ದೆ. ಈಗ ಅವರೇ ಇಲ್ಲ. ಅಣ್ಣನ ಸಾವಿನಿಂದ ನಾನು ತುಂಬಾ ವಿಚಲಿತನಾಗಿದ್ದೇನೆ" ಎಂದು ಭಾವುಕರಾಗಿ ನುಡಿದಿದ್ದರು. ಆದರೆ, ಲೈಗರ್‌ ಸಿನಿಮಾ ಚಿತ್ರೀಕರಣದ ನಡುವೆ ವಿಜಯ್‌ ಬಿಡುವು ಮಾಡಿಕೊಂಡು ಪುನೀತ್‌ ಸಮಾಧಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಸದ್ಯ ಲೈಗರ್‌ ಪ್ರಚಾರಕ್ಕಾಗಿ ಚಿತ್ರತಂಡದೊಂದಿಗೆ ಬೆಂಗಳೂರಿಗೆ ಆಗಮಿಸಿರುವ ವಿಜಯ್‌ ತಮ್ಮ ನೆಚ್ಚಿನ ನಟನ ಸಮಾಧಿಯ ದರ್ಶನ ಪಡೆದಿದ್ದಾರೆ.  

ಈ ಸುದ್ದಿ ಓದಿದ್ದೀರಾ? ಹಾಸ್ಯನಟ ರಾಜು ಶ್ರೀವಾಸ್ತವ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಈ ವೇಳೆ ವಿಜಯ್ ಅವರ ಜೊತೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಚಿತ್ರತಂಡದ ಹಲವರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್