75ನೇ ಸಿನಿಮಾ ಘೋಷಿಸಿದ ವಿಕ್ಟರಿ ವೆಂಕಟೇಶ್‌

victory venkatesh
  • ಜನವರಿ 25ಕ್ಕೆ ಘೋಷಣೆಯಾಗಲಿದೆ ಚಿತ್ರದ ಟೈಟಲ್‌
  • ಹಿಟ್‌ ಸಿನಿಮಾ ಖ್ಯಾತಿ ಶೈಲೇಶ್‌ ಕೋಲನು ನಿರ್ದೇಶನದ ಚಿತ್ರ

‘ಎಫ್ 3’ ಸಿನಿಮಾದ ಯಶಸ್ಸಿನ ಬಳಿಕ ನಟನೆಯಿಂದ ಕೆಲಕಾಲ ಅಂತರ ಕಾಯ್ದುಕೊಂಡಿದ್ದ ತೆಲುಗಿನ ಸ್ಟಾರ್‌ ನಟ ವಿಕ್ಟರಿ ವೆಂಕಟೇಶ್ ಇದೀಗ ತಮ್ಮ 75ನೇ ಚಿತ್ರವನ್ನು ಘೋಷಣೆ ಮಾಡಿದ್ದಾರೆ.

ಸೋಮವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿತ್ರದ ʼಪ್ರಿಲುಕ್‌ ಪೋಸ್ಟರ್‌ʼ ಹಂಚಿಕೊಂಡಿರುವ ವೆಂಕಟೇಶ್‌, ಹೊಸ ಸಿನಿಮಾ ಕುರಿತು ಮಾಹಿತಿ ತಿಳಿಸಿದ್ದಾರೆ. ʼಹಿಟ್‌ʼ ಎಂಬ ಕ್ರೈಂ, ಥ್ರಿಲ್ಲರ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುವ ಮೂಲಕ ಚೊಚ್ಚಲ ಚಿತ್ರದಲ್ಲೇ ಯಶಸ್ವಿ ನಿರ್ದೇಶಕನಾಗಿ ಗುರುತಿಸಿಕೊಂಡ ಶೈಲೇಶ್‌ ಕೋಲನು ವೆಂಕಟೇಶ್‌ ಅವರ 75ನೇ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿರುವುದು ವಿಶೇಷ.

ಪ್ರಿಲುಕ್‌ ಪೋಸ್ಟರ್‌ನಲ್ಲಿ ವೆಂಕಟೇಶ್‌ ಗನ್‌ ಹಿಡಿದು ರಗಡ್‌ ಲುಕ್‌ನಲ್ಲಿ ಮಿಂಚಿದ್ದು, ಜನವರಿ 25ರಂದು ಚಿತ್ರದ ಟೈಟಲ್‌ ಘೋಷಣೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಹಿಂದೆ ನಾನಿ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ಶ್ಯಾಮ್‌ ಸಿಂಗಾ ರಾಯ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದ ʼನಿಹಾರಿಕ ಎಂಟರ್‌ಟೈನ್‌ಮೆಂಟ್‌ʼ, ಆಕ್ಷನ್‌ ಕಥಾಹಂದರವುಳ್ಳ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.  

ಜನವರಿ 25ರಂದು ಚಿತ್ರದ ಟೈಟಲ್‌ ಘೋಷಣೆಯಾದ ಬಳಿಕ ನಾಯಕಿ, ಚಿತ್ರದ ಉಳಿದ ತಾರಾ ಬಳಗ ಮತ್ತು ತಂತ್ರಜ್ಞರ ಕುರಿತು ನಿರ್ದೇಶಕರು ಮಾಹಿತಿ ಹಂಚಿಕೊಳ್ಳಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app