
- ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಮೀರ್ ಖಾನ್
- 2022 ಡಿಸೆಂಬರ್ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ
ಬಾಲಿವುಡ್ನ ಖ್ಯಾತ ನಟಿ ಕಾಜೋಲ್ ಮತ್ತು ವಿಶಾಲ್ ಜೇತ್ವಾ ಅವರು ಅಭಿನಯಸಿರುವ ‘ಸಲಾಮ್ ವೆಂಕಿ’ ಚಿತ್ರದ ಟ್ರೇಲರ್ ಇಂದು (ನ. 14) ಬಿಡುಗಡೆಯಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತೆ ಮತ್ತು ನಟಿ- ನಿರ್ಮಾಪಕಿಯೂ ಆಗಿರುವ ರೇವತಿ ಅವರು 'ಸಲಾಮ್ ವೆಂಕಿ' ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
‘ಸಲಾಮ್ ವೆಂಕಿ’ ಟ್ರೈಲರ್ನಲ್ಲಿ ಕಾಯಿಲೆಗೆ ತುತ್ತಾಗಿರುವ ಮಗನನ್ನು ನೋಡಿಕೊಳ್ಳುತ್ತಿರುವ ತಾಯಿಯಾಗಿ ಕಾಜೋಲ್ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಮೀರ್ ಖಾನ್ ಅವರನ್ನು ಟ್ರೈಲರ್ನಲ್ಲಿ ನೋಡಬಹುದಾಗಿದೆ.
ಚಿತ್ರದಲ್ಲಿ ವಿಶಾಲ್ ಜೇತ್ವಾ, ರಾಹುಲ್ ಬೋಸ್, ರಾಜೀವ್ ಖಂಡೇಲ್ವಾಲ್, ಅಹಾನಾ ಕುಮ್ರಾ ಪ್ರಿಯಮಣಿ ಹಾಗೂ ಪ್ರಕಾಶ್ ರಾಜ್ ಅವರು ನಟಿಸಿದ್ದಾರೆ.
ಸುಜಾತಾ ಪಾತ್ರದಲ್ಲಿ ನಟಿಸಿದ ಕಾಜೋಲ್ ಮತ್ತು ಮಗ ವೆಂಕಿ ಪಾತ್ರದಲ್ಲಿ ನಟಿಸಿದ ವಿಶಾಲ್ ಜೇತ್ವಾ ನಡುವಿನ ಭಾವನಾತ್ಮಕ ಟ್ರೈಲರ್ ತುಂಬಾ ಸುಂದರವಾಗಿ ಮೂಡಿಬಂದಿದೆ. ಅನಾರೋಗ್ಯಕ್ಕೆ ತುತ್ತಾಗಿರುವ ಮಗನನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಹೋರಾಡುತ್ತಿರುವ ಕಾಜೋಲ್ ಬಗ್ಗೆ ಟ್ರೈಲರ್ನಲ್ಲಿ ವಿವರವಿದೆ. ಸಾಯುತ್ತಿರುವ ವೆಂಕಿಯ ಬಯಕೆಯನ್ನು ಈಡೇರಿಸಲು ಅನೇಕರು ಜೊತೆಯಾಗಿ ನಿಲ್ಲುವುದನ್ನು ಇಲ್ಲಿ ನೋಡಬಹುದು. ಸಿನಿಮಾವು ಮಹಿಳೆಯೊಬ್ಬರ ನೈಜ ಕಥೆಯನ್ನು ಆಧರಿಸಿದ್ದು, ಜೀವನದಲ್ಲಿ ಆಕೆ ಎದುರಿಸುವ ಸವಾಲುಗಳ ಬಗ್ಗೆ ಕಥೆ ಹೆಣೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಡಿ. 30ಕ್ಕೆ ಕನ್ನಡ- ತೆಲುಗಿನಲ್ಲಿ ಡಾಲಿ ಧನಂಜಯ್ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'
ಸದ್ಯ ಟ್ರೈಲರ್ಗೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, 'ಸಲಾಮ್ ವೆಂಕಿ ಬ್ಲೈವ್ ಪ್ರೊಡಕ್ಷನ್ಸ್' ಮತ್ತು 'ಆರ್ಟೇಕ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ಸೂರಜ್ ಸಿಂಗ್ ಮತ್ತು ಶ್ರದ್ಧಾ ಅಗರವಾಲ್ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರಕ್ಕೆ ಈ ಹಿಂದೆ ‘ದಿ ಲಾಸ್ಟ್ ಹುರ್ರಾ’ ಎಂದು ಹೆಸರಿಡಲಾಗಿತ್ತು. ನಂತರ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಚಿತ್ರವು 2022 ಡಿಸೆಂಬರ್ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕಾಜೋಲ್ ಅವರು ಈ ಹಿಂದೆ ನಟಿಸಿದ 'ತನ್ಹಾಜಿ' ಚಿತ್ರವು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಇದೀಗ ‘ಸಲಾಮ್ ವೆಂಕಿ’ ಜೊತೆಗೆ ಅವರು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.