ಅಭಿಮಾನಿಗಳ ಒತ್ತಡಕ್ಕೆ ಮಣಿದ ಟ್ವಿಟರ್; ಪುನೀತ್ ಖಾತೆಯಲ್ಲಿ ʻಬ್ಲ್ಯೂಟಿಕ್ʼ ವಾಪಸ್

puneeth-rajkumar
  • ʼಬ್ಲ್ಯೂಟಿಕ್‌ʼ ಮರುಸ್ಥಾಪನೆಗೆ ಅಭಿಯಾನ ನಡೆಸಿದ್ದ ಅಪ್ಪು ಅಭಿಮಾನಿಗಳು
  • ಅಪ್ಪು ಅಭಿಮಾನಿಗಳು ʼಪವರ್‌ ಫುಲ್‌ʼ ಎಂದ ಸಂತೋಷ್‌ ಆನಂದ್‌ ರಾಮ್‌

ಅಭಿಮಾನಿಗಳ ಒತ್ತಾಯದ ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ತೆಗೆಯಲಾಗಿದ್ದ ʼಬ್ಲ್ಯೂಟಿಕ್ʼ ಅನ್ನು ಟ್ವಿಟರ್ ಸಂಸ್ಥೆ ಮರು ಸ್ಥಾಪಿಸಿದೆ.

ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ 8 ತಿಂಗಳುಗಳು ಕಳೆದಿವೆ. ಅವರು ಬದುಕಿದ್ದಾಗ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದರು. ಟ್ವಿಟರ್‌ನಲ್ಲಿ 3 ಲಕ್ಷ 80 ಸಾವಿರ ಫಾಲೋವರ್‌ಗಳನ್ನು ಹೊಂದಿದ್ದ ಪುನೀತ್‌, ತಮ್ಮ ಸಿನಿಮಾಗಳ ಕುರಿತ ಮಾಹಿತಿಗಳನ್ನು ಇದೇ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳುತ್ತಿದ್ದರು. ಟ್ವಿಟರ್‌ ಮೂಲಕವೇ ಸಹನಟರ ಚಿತ್ರಗಳಿಗೆ ಶುಭ ಹಾರೈಕೆ ತಿಳಿಸುತ್ತಿದ್ದರು. ಪುನೀತ್‌ ಅವರ ಖಾತೆ ದೃಢೀಕರಿಸಿದ್ದ ಟ್ವಿಟರ್‌ ʼಬ್ಲ್ಯೂಟಿಕ್‌ʼ ಅನ್ನು ನೀಡಿತ್ತು. (ʼಬ್ಲ್ಯೂಟಿಕ್ʼ ಎಂದರೆ ಗಣ್ಯರ ಸಾಲಿನಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಗಳ ಅಧಿಕೃತ ಖಾತೆಗಳಿಗೆ ಟ್ವಿಟರ್‌ ದೃಢೀಕರಣ ಚಿಹ್ನೆ) ನೀಡಿತ್ತು.

ಈ ಸುದ್ದಿ ಓದಿದ್ದೀರಾ? 40ನೇ ವಸಂತಕ್ಕೆ ಕಾಲಿಟ್ಟ ಭಾರತೀಯ ಮೂಲದ ಏಕೈಕ ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ

ಆದರೆ, ಇತ್ತೀಚೆಗೆ ಪುನೀತ್ ಅವರ ಟ್ವಿಟರ್ ಖಾತೆಯಿಂದ ʼಬ್ಲ್ಯೂಟಿಕ್ʼ ಮಾಯವಾಗಿತ್ತು. ಇದನ್ನು ಗಮನಿಸಿದ ಪುನೀತ್ ಅಭಿಮಾನಿಗಳು, "ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ, ನಮ್ಮ ಹೃದಯಗಳಲ್ಲಿ ಎಂದಿಗೂ ಜೀವಂತವಾಗಿರುತ್ತಾರೆ. ʼಬ್ಲ್ಯೂಟಿಕ್ʼ ತೆಗೆದು ಹಾಕಿ ನಮ್ಮ ನೆಚ್ಚಿನ ನಟನಿಗೆ ಅವಮಾನ ಮಾಡಬೇಡಿ" ಎಂದು ಟ್ವಿಟರ್ ವಿರುದ್ಧ ಕಿಡಿಕಾರಿದ್ದರು. ʼಬ್ಲ್ಯೂಟಿಕ್ʼ ಮರುಸ್ಥಾಪನೆಗೆ ಟ್ವಿಟರ್ ಅಭಿಯಾನ ಕೂಡ ನಡೆಸಿದ್ದರು.

ಈ ಅಭಿಯಾನಕ್ಕೆ ಪುನೀತ್ ಅವರ ಆಪ್ತ, ʼರಾಜಕುಮಾರʼ ಮತ್ತು ʼಯುವರತ್ನʼ ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್ ರಾಮ್ ಕೂಡ ಧ್ವನಿಗೂಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಎಚ್ಚೆತ್ತುಕೊಂಡಿರುವ ಟ್ವಿಟರ್ ಸಂಸ್ಥೆ ಪುನೀತ್ ಅವರ ಟ್ವಿಟರ್ ಖಾತೆಯನ್ನು ಮರಳಿ ದೃಢಿಕರಿಸಿದ್ದು, ʼಬ್ಲ್ಯೂಟಿಕ್ʼ ಅನ್ನು ಮರು ಸ್ಥಾಪಿಸಿದೆ. ಪುನೀತ್‌ ಟ್ವಿಟರ್‌ ಖಾತೆಯಲ್ಲಿ ಬ್ಲ್ಯೂಟಿಕ್‌ ಮರು ಸ್ಥಾಪನೆಯಾದ ಚಿತ್ರವನ್ನು ಹಂಚಿಕೊಂಡು ಟ್ವೀಟ್‌ ಮಾಡಿರುವ ಸಂತೋಶ್‌ ಆನಂದ್‌ರಾಮ್‌ ಟ್ವಿಟರ್‌ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ. 

 

ನಿಮಗೆ ಏನು ಅನ್ನಿಸ್ತು?
0 ವೋಟ್