ಬಾಲಿವುಡ್‌ ಹಿರಿಯ ನಟ ಮಿಥಿಲೇಶ್‌ ಚತುರ್ವೇದಿ ಇನ್ನಿಲ್ಲ

mitilesh chaturvedi
  • ಹೃದಯಾಘಾತದಿಂದ ಕೊನೆಯುಸಿರೆಳೆದ ಹಿರಿಯ ನಟ
  • ಹಿಂದಿ ಕಿರುತೆರೆಯಲ್ಲೂ ಹೆಸರು ಮಾಡಿದ್ದ ಮಿಥಿಲೇಶ್‌ ಚತುರ್ವೇದಿ

ಬಾಲಿವುಡ್‌ನ ಹಿರಿಯ ನಟ ಮಿಥಿಲೇಶ್‌ ಚತುರ್ವೇದಿ ಬುಧವಾರ ಉತ್ತರ ಪ್ರದೇಶದ ಲಕ್ನೋನಲ್ಲಿ ನಿಧನರಾಗಿದ್ದಾರೆ. ಹಿರಿಯ ನಟನ ಸಾವಿನ ಸುದ್ದಿಯನ್ನು ಅವರ ಅಳಿಯ ಆಶಿಶ್‌ ಚತುರ್ವೇದಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 68 ವರ್ಷದ ಮಿಥಿಲೇಶ್‌ ಅವರಿಗೆ ಇತ್ತೀಚೆಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಅವರ ಇಚ್ಛೆಯಂತೆ ಮುಂಬೈನಿಂದ ಮೂಲ ಸ್ಥಳವಾದ ಲಕ್ನೋಗೆ ಸ್ಥಳಾಂತರಿಸಿ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸಂಜೆ ಹೃದಯಾಘಾತದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  

ಮಿಥಿಲೇಶ್‌  ಅವರ ಫೋಟೋಗಳನ್ನು ಹಂಚಿಕೊಂಡು ಸಾವಿನ ಸುದ್ದಿ ತಿಳಿಸಿರುವ ಆಶಿಶ್‌, "ನೀವು ಜಗತ್ತಿನ ಅತ್ಯುತ್ತಮ ತಂದೆಯಾಗಿದ್ದರಿ. ಎಂದಿಗೂ ನನ್ನನ್ನು ಅಳಿಯನಂತೆ ಕಾಣಲಿಲ್ಲ. ಬದಲಿಗೆ ಮಗನಂತೆ ಪ್ರೀತಿಸಿದಿರಿ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಬರೆದುಕೊಂಡಿದ್ದಾರೆ. 

 

ಮಿಥಿಲೇಶ್‌  ಸಿನಿಮಾ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ಜನಪ್ರಿಯತೆ ಗಳಿಸಿದ್ದರು. ʼಕೋಯಿ ಮಿಲ್‌ ಗಯಾʼ ʼಗದರ್‌ ಏಕ್‌ ಪ್ರೇಮ್‌ ಕಥಾʼ, ʼಸತ್ಯʼ, ʼಬಂಟಿ ಔರ್‌ ಬಬ್ಲಿʼ, ʼಕ್ರಿಶ್‌ʼ, ʼತಾಲ್ʼ, ʼರೆಡಿʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಅಮಿತಾಬ್‌ ಬಚ್ಚನ್‌ ಮತ್ತು ಆಯುಷ್ಮಾನ್‌‌ ಖುರಾನ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಗುಲಾಬೊ ಸಿತಾಬೊʼ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್