ಬಂಗಾಳಿ ಹಿರಿಯ ನಿರ್ದೇಶಕ ತರುಣ್‌ ಮಜುಂದಾರ್‌ ಇನ್ನಿಲ್ಲ

Tarun-Majumdar
  • ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ತರುಣ್‌ ಮಜುಂದಾರ್‌
  • ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಸೋಮವಾರ ನಿಧನ

ಪದ್ಮಶ್ರೀ ಪುರಸ್ಕೃತ ಹಿರಿಯ ಬಂಗಾಳಿ ನಿರ್ದೇಶಕ ತರುಣ್‌ ಮಜುಂದಾರ್‌ ಸೋಮವಾರ ನಿಧನರಾಗಿದ್ದಾರೆ. 

ತರುಣ್‌ ಮಜುಂದಾರ್‌ಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಕೊಲ್ಕತ್ತಾದ ʼಎಸ್‌ಎಸ್‌ಕೆಎಂʼ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಿರ್ದೇಶಕ ಇಂದು ನಿಧನರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾಯಿ ಪಲ್ಲವಿ ಚಿತ್ರಕ್ಕೆ ಹೆಗಲಾದ ರಕ್ಷಿತ್‌ ಶೆಟ್ಟಿ

ಬಂಗಾಳಿಯ ಖ್ಯಾತ, ನಟ ಮತ್ತು ನಿರ್ದೇಶಕರಾದ ದಿಲಿಪ್‌ ಮುಖರ್ಜಿ ಮತ್ತು ಸಚಿನ್‌ ಮುಖರ್ಜಿ ಅವರ ಜೊತೆಗೂಡಿ 1959ರಲ್ಲಿ ಚೋವಾ ಪಾವಾ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ತರುಣ್‌ ಮಜುಂದಾರ್‌, ಐದೂವರೆ ದಶಕಗಳಿಗೂ ಅಧಿಕ ಕಾಲ ಬಂಗಾಳಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 

35ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿರುವ ತರುಣ್‌ ಮಜುಂದಾರ್‌, 'ಕಾಂಚೇರ್‌ ಸ್ವರ್ಗೋ', 'ನಿಮಂತ್ರಣ್‌', 'ಗಣದೇವತಾ', 'ಅರಣ್ಯ ಅಮರ್‌' ಚಿತ್ರಗಳಿಗಾಗಿ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

1971ರಲ್ಲಿ ತೆರೆಕಂಡ 'ಕುಹೇಲಿ', 1976ರಲ್ಲಿ 'ಬಾಲಿಕಾ ವಧು', 'ಗಣದೇವತಾ', 'ಪಾಲಾತಕ್‌', 'ಸ್ಮೃತಿ ತುಕು ತಾಕ್‌' ಸೇರಿದಂತೆ ಹಲವು ಯಶಸ್ವಿ ಚಿತ್ರಗಳು ತರುಣ್‌ ಮಜುಂದಾರ್‌ ನಿರ್ದೇಶನದಲ್ಲಿ ಮೂಡಿ ಬಂದಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್