ಹಿರಿಯ ಬಾಲಿವುಡ್‌ ನಟ ಅಶೋಕ್ ಕುಮಾರ್ ಪುತ್ರಿ, ನಟಿ ಭಾರತಿ ಜಾಫ್ರಿ ನಿಧನ

  • ನಟಿ ಭಾರತಿ ಜಾಫ್ರಿ ನಿಧನ ಸುದ್ದಿ ತಿಳಿಸಿದ ಅಳಿಯ ಕನ್ವಲ್‌ಜಿತ್ ಸಿಂಗ್
  • ಕಲ್ಪನಾ ಲಾಜ್ಮಿ ನಿರ್ದೇಶನದ 'ದಾಮನ್' ಚಿತ್ರದಲ್ಲಿ ನಟಿಸಿದ್ದ ಭಾರತಿ ಜಾಫ್ರಿ

ಖ್ಯಾತ ಹಿರಿಯ ಬಾಲಿವುಡ್ ನಟ ಅಶೋಕ್ ಕುಮಾರ್ ಅವರ ಪುತ್ರಿ ಭಾರತಿ ಜಾಫ್ರಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ (ಸೆಪ್ಟೆಂಬರ್ 20) ನಿಧನರಾಗಿದ್ದಾರೆ.

ನಟಿ ಭಾರತಿ ಜಾಫ್ರಿ ಅವರ ಅಳಿಯ ಮತ್ತು ನಟ ಕನ್ವಲ್‌ಜಿತ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾವಿನ ಸುದ್ದಿ ಬಗ್ಗೆ ಮಾಹಿತಿ ನೀಡಿದ್ದಾರೆ. 

ಕನ್ವಲ್‌ಜಿತ್ ಅವರು “ಮಗಳು, ಸಹೋದರಿ, ಹೆಂಡತಿ, ತಾಯಿ, ಅಜ್ಜಿ, ಚಿಕ್ಕಮ್ಮ, ಸ್ನೇಹಿತೆ ಹಾಗೂ ಸ್ಫೂರ್ತಿಯೂ ಆಗಿದ್ದ ನಮ್ಮ ಪ್ರೀತಿಯ ಭಾರತಿ ಜಾಫ್ರಿ ಅವರು ಇಂದು ನಮ್ಮನ್ನು ಅಗಲಿದ್ದಾರೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

ಭಾರತಿ ಜಾಫ್ರಿ ಅವರು 'ಹಜಾರ್ ಚೌರಾಸಿ ಕಿ ಮಾ', 'ಸಾನ್ಸ್' ಹಾಗೂ 2001ರ ಕಲ್ಪನಾ ಲಜ್ಮಿ ನಿರ್ದೇಶನದ 'ದಾಮನ್' ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸಯೀದ್ ಜಾಫ್ರಿ ಅವರ ಸಹೋದರ ಹಮೀದ್ ಜಾಫ್ರಿ ಅವರನ್ನು ಭಾರತಿ ವಿವಾಹವಾಗಿದ್ದರು.

ಮುಂಬೈನ ಚೆಂಬೂರ್ ಕ್ಯಾಂಪ್‌ನ ಚೆರೈ ಸ್ಮಶಾನದಲ್ಲಿ ಭಾರತಿ ಜಾಫ್ರಿ ಅವರು ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಸಿಂಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್