ವಿಕ್ರಾಂತ ರೋಣಗೆ ಪೈರಸಿ ಪೆಟ್ಟು; ತಮಿಲ್‌ರಾಕರ್ಸ್‌, ಮೂವಿರೂಲ್ಜ್‌, ಫಿಲ್ಮ್‌ ಜಿಲ್ಲಾದಲ್ಲಿ ಲೀಕ್‌ ಆಯ್ತು ಸಿನಿಮಾ

Sudep in vikrant Rona
  • ಕಿಚ್ಚ ಸುದೀಪ್‌ ಅಭಿನಯದ  ವಿಕ್ರಾಂತ ರೋಣ ಗುರುವಾರ ತೆರೆಗೆ
  • ಬಹುಭಾಷೆಗಳಲ್ಲಿ 3000 ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾ

ಅನೂಪ್‌ ಭಂಡಾರಿ ಅವರ ಚೊಚ್ಚಲ ನಿರ್ದೇಶನದ, ಸುದೀಪ್‌ ಅಭಿನಯದ ಚಿತ್ರ ಗುರುವಾರ ತೆರೆಕಂಡಿರುವಾಗಲೇ ನಾಲ್ಕು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ. ತಮಿಲ್‌ ರಾಕರ್ಸ್‌, ಮೂವಿರೂಲ್ಝ್‌, ಫಿಲ್ಮಿಜಿಲ್ಲಾ ಮತ್ತು ತಮಿಳ್‌ಎಂವಿ ಎಂಬ ತಾಣಗಳಲ್ಲಿ ಚಿತ್ರ ಗುರುವಾರ ಬೆಳಗ್ಗೆಯೇ ಸೋರಿಕೆಯಾಗಿದ್ದು, ಚಿತ್ರ ತಂಡಕ್ಕೆ ಆಘಾತ ಉಂಟು ಮಾಡಿದೆ.

ಬಹುನಿರೀಕ್ಷಿತ, ಭಾರತಾದ್ಯಂತ ತೆರೆ ಕಾಣುವ ಚಿತ್ರವಾಗಿ ಪ್ರಚಾರ ಪಡೆದಿದ್ದ 'ವಿಕ್ರಾಂತ ರೋಣ', ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆ ಕಂಡಿದೆ.

ಇತ್ತೀಚೆಗೆ 'ಕೆಜಿಎಫ್‌ 2' ನಂತರ ಮತ್ತೊಂದು ಚಿತ್ರ ಭಾರತಾದ್ಯಂತ ಸದ್ದುಮಾಡುತ್ತಿರುವ ಹೊತ್ತಲ್ಲಿ ₹95 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರವಾಗಿದ್ದು, ಶಾಲಿನಿ ಜ್ಯಾಕ್‌ ಮಂಜು ಮತ್ತು ಅಲಂಕಾರ್‌ ಪಾಂಡಿಯನ್‌ ಹಣ ಹೂಡಿದ್ದಾರೆ.

2 ಗಂಟೆ 27 ನಿಮಿಷ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ನಿಗೂಢ ಸಾವು ಮತ್ತು ಅದರ ಹಿಂದೆ ಬ್ರಹ್ಮರಾಕ್ಷಸ ಇರುವ ಪುಕಾರುಗಳ ಸುತ್ತಲ ಕಥಾಹಂದರ ಇರುವ ಈ ಚಿತ್ರ ಫ್ಯಾಂಟಸಿ, ಅಡ್ವೆಂಚರ್‌ ಸಿನಿಮಾ. ಸುದೀಪ್‌ ಅವರ ಸ್ಟಾರ್‌ ವರ್ಚಸ್ಸಿಗೆ ಹೊಸ ಗರಿ ಎಂಬಂತೆ ಬಿಂಬಿಸಲಾಗಿದ್ದ ಈ ಚಿತ್ರ ಬಿಡುಗಡೆಯ ದಿನವೇ ಹೀಗೆ ಪೈರಸಿ ಪೆಟ್ಟು ಎದುರಿಸಬೇಕಾಗಿದ್ದು ಕನ್ನಡ ಚಿತ್ರಾಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್