ವಿಕ್ರಾಂತ್ ರೋಣ | ಅಂಕುಡೊಂಕು ದಾರಿಯಲ್ಲಿ ಫಕೀರನಾಗಿ ಬಂದ ನಿರೂಪ್‌ ಭಂಡಾರಿ

vikrant rona
  • ಮೋಡಿ ಮಾಡುತ್ತಿದೆ ಹೇಯ್‌ ಫಕೀರ ಹಾಡು
  • ಜುಲೈ 28ಕ್ಕೆ ತೆರೆಗೆ ಬರಲಿದೆ ವಿಕ್ರಾಂತ್‌ ರೋಣ

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ʼಹೇಯ್ ಫಕೀರ..ʼ ಲಿರಿಕಲ್ ಹಾಡು ಜುಲೈ 12ರಂದು ಬಿಡುಗಡೆಯಾಗಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಹಾಡು ಯುಟ್ಯೂಬ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿಕ್ರಾಂತ್‌ ರೋಣ ಚಿತ್ರದಲ್ಲಿ ನಿರೂಪ್ ಭಂಡಾರಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರವನ್ನು ಪರಿಚಯಿಸುವ ಸಲುವಾಗಿ ಚಿತ್ರತಂಡ ʼಹೇಯ್‌ ಫಕೀರ...ʼ ಹಾಡುನ್ನು ಬಿಡುಗಡೆ ಮಾಡಿದೆ. ಊರು ಬಿಟ್ಟ ಹಳ್ಳಿಹೈದ ಹಲವು ವರ್ಷಗಳ ಬಳಿಕ ಮರಳಿ ತನ್ನ ಗೂಡು ಸೇರುವ ಕತೆಯ ಎಳೆ ಹಾಡಿನಲ್ಲಿದೆ. 

ನಿರ್ದೇಶಕ ಅನುಪ್ ಭಂಡಾರಿ ಅವರೇ ಹೇಯ್ ಫಕೀರ ಹಾಡಿಗೆ ಸಾಹಿತ್ಯ ಬರೆದಿದ್ದು ಮೆಲೋಡಿ ಹಾಡುಗಳಿಂದಲೇ ಹೆಸರು ಮಾಡಿರುವ ಯುವಗಾಯಕ ಸಂಜಿತ್ ಹೆಗ್ಡೆ ಮತ್ತು ಚಿನ್ಮಯಿ ಶ್ರೀಪಾದ್ ಫಕೀರನಿಗೆ ಧ್ವನಿಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿರಿಯ ನಟ ಶಿವರಂಜನ್‌ ಮೇಲೆ ಗುಂಡಿನ ದಾಳಿ

ಈ ಹಿಂದೆ ಬಿಡುಗಡೆಯಾಗಿದ್ದ 'ಗಡಾಂಗ್‌ ರಕ್ಕಮ್ಮ' ಮತ್ತು 'ತಣ್ಣನೇ ಬೀಸೋ ಗಾಳಿ' ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ʼಟ್ರೆಂಡ್‌ʼ ಸೃಷ್ಟಿಸಿದ್ದವು. ಸುದೀಪ್‌ ಮುಖ್ಯಭೂಮಿಕೆಯ ಪತ್ತೆದಾರಿ ಕಥಾಹಂದರವುಳ್ಳ ವಿಕ್ರಾಂತ್‌ ರೋಣ ಸಿನಿಮಾ ಕನ್ನಡ, ತಮಿಳು, ತೆಲುಗು ಸೇರಿದಂತೆ 5 ಭಾಷೆಗಳಲ್ಲಿ ಸಿದ್ಧಗೊಂಡಿದ್ದು, ಜುಲೈ 28ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್