ಅಪ್ಪನ ಹೆಸರಲ್ಲಿ ʻಟೈಗರ್‌ ಟಾಕೀಸ್‌ʼ ಪ್ರಾರಂಭಿಸಿದ ವಿನೋದ್‌ ಪ್ರಭಾಕರ್‌

ನಟ ವಿನೋದ್‌ ಪ್ರಭಾಕರ್‌ ತಮ್ಮ ತಂದೆ, ದಿವಂಗತ ನಟ ಟೈಗರ್‌ ಪ್ರಭಾಕರ್‌ ಹೆಸರಿನಲ್ಲಿ ಚಿತ್ರನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
tiger talkies

ಟೈಸನ್‌, ಮರಿ ಟೈಗರ್‌, ಕ್ರ್ಯಾಕ್‌ ಮುಂತಾದ ಚಿತ್ರಗಳ ಮೂಲಕ ಕನ್ನಡದ ಸಿನಿ ರಸಿಕರಿಗೆ ಹತ್ತಿರವಾಗಿದ್ದ ನಟ ವಿನೋದ್‌ ಪ್ರಭಾಕರ್‌ ಇದೀಗ ಲಂಕಾಸುರನ ಅವತಾರ ತಾಳಿದ್ದಾರೆ. ವಿನೋದ್‌ ನಟನೆಯ ಲಂಕಾಸುರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಷ್ಟು ದಿನ ನಟನಾಗಿ ಹೆಸರು ಮಾಡಿದ್ದ ವಿನೋದ್‌, ಈ ಚಿತ್ರದ ಮೂಲಕ ನಿರ್ಮಾಪಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ತಮ್ಮ ತಂದೆ, ದಿವಂಗತ ನಟ ಟೈಗರ್‌ ಪ್ರಭಾಕರ್‌ ಅವರ ಹೆಸರಿನಲ್ಲಿ ವಿನೋದ್‌ ಹೊಸ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ತಂದೆಯ ಹೆಸರಿನಲ್ಲಿ ಪ್ರಾರಂಭಿಸಿರುವ ನೂತನ ಸಂಸ್ಥೆಗೆ ʼಟೈಗರ್‌ ಟಾಕೀಸ್‌' ಎಂದು ಹೆಸರಿಟ್ಟಿದ್ದಾರೆ. ಈ ಸಂಸ್ಥೆಯ ಮೂಲಕವೇ ವಿನೋದ್‌ ಲಂಕಾಸುರ ಚಿತ್ರವನ್ನು ನಿರ್ಮಿಸಿದ್ದಾರೆ.

ಕನ್ನಡದ ಸ್ಟಾರ್‌ ನಟ ದರ್ಶನ್‌ ಜುಲೈ 2ರಂದು 'ಟೈಗರ್‌ ಟಾಕೀಸ್‌' ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ವಿನೋದ್‌ ಪ್ರಭಾಕರ್‌ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದರು. ಟೈಗರ್‌ ಪ್ರಭಾಕರ್‌ ಮತ್ತು ವಿನೋದ್‌ ಅವರ ಅಭಿಮಾನಿಗಳು ಈ ಚಿತ್ರ ನಿರ್ಮಾಣ ಸಂಸ್ಥೆಯನ್ನು ಬೆಂಬಲಿಸಿ, ಬೆಳೆಸಬೇಕು ಎಂದು ಕೇಳಿಕೊಂಡಿದ್ದರು. 

 

ಟೈಗರ್‌ ಟಾಕೀಸ್‌ ನಿರ್ಮಾಣದ ಚೊಚ್ಚಲ ಸಿನಿಮಾ ಲಂಕಾಸುರ ಟೀಸರ್‌ ಅನ್ನು ಬುಧವಾರ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಹಿರಿಯ ನಟ ರವಿಚಂದ್ರನ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಮತ್ತು ಟೈಗರ್‌ ಟಾಕೀಸ್‌ಗೆ ಶುಭಕೋರಿದ್ದಾರೆ. ಇದೇ ವೇಳೆ ತಮ್ಮ ಮತ್ತು ಪ್ರಭಾಕರ್‌ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ನನ್ನ ದೇವರು, ನನ್ನ ಭಕ್ತಿ, ನನ್ನ ಹಕ್ಕು: ವೈರಲ್‌ ಆದ ನಟ ಕಿಶೋರ್ ಪೋಸ್ಟ್‌

ಲಂಕಾಸುರ ಟೀಸರ್‌ ಬಿಡುಗಡೆಯಾದ 24 ಗಂಟೆಗಳಲ್ಲಿ 31 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ನಿಮಿಷಗಳ ಟೀಸರ್‌ ಸೂಚಿಸುವಂತೆ ಲಂಕಾಸುವ ರೌಡಿಸಂ ಹಿನ್ನೆಲೆಯ ಕಥಾಹಂಧರವನ್ನು ಹೊಂದಿದ್ದು, ಚಿತ್ರದಲ್ಲಿ ವಿನೋದ್‌ ಡಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ದೇವರಾಜ್‌, ಆರುಮುಗಂ ಖ್ಯಾತಿಯ ನಟ ರವಿಶಂಕರ್‌ ಮತ್ತು ಲೂಸ್‌ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಪ್ರಮೋದ್‌ ಕುಮಾರ್‌ ನಿರ್ದೇಶನವಿದೆ.

 

ನಿಮಗೆ ಏನು ಅನ್ನಿಸ್ತು?
0 ವೋಟ್