ಈ ವಾರ ನಿಮ್ಮ ಕಣ್ತಪ್ಪಿರಬಹುದಾದ ಓದಲೇಬೇಕಾದ 3 ಅಂಕಣ ಬರಹ | ನವೆಂಬರ್ 14-20

ಎಚ್ ಕೆ ಶರತ್ ಅವರ 'ವರ್ತಮಾನ' ಅಂಕಣ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಹಾಸನಾಂಬೆ ಮತ್ತು ಭಕ್ತರ ನಡುವೆ ಜಿಲ್ಲಾಡಳಿತ ಮಧ್ಯವರ್ತಿಯಂತೆ ವರ್ತಿಸುವುದು ಸರಿಯೇ?

Image

ಪ್ರತೀ ವರ್ಷ ಹಾಸನಾಂಬ ದೇಗುಲ ತೆರೆದಾಗಲೂ ಜಿಲ್ಲಾಡಳಿತವು, "ಈ ಬಾರಿ ಕೂಡ ದೀಪ ಹಾಗೆಯೇ ಉರಿಯುತ್ತಿತ್ತು, ಅನ್ನ ಹಳಸಿರಲಿಲ್ಲ, ಹೂವು ಬಾಡಿರಲಿಲ್ಲ," ಎಂದು ಬಣ್ಣ ಕಟ್ಟುವುದು ಸಹಜವಾಗಿಬಿಟ್ಟಿದೆ. 2018ರಲ್ಲಿ ಸ್ವತಃ ದೇಗುಲದ ಅರ್ಚಕರೇ ಇದನ್ನು ಅಲ್ಲಗಳೆದು, ವಾಸ್ತವಾಂಶ ಏನೆಂದು ತಿಳಿಸಿದ್ದರು. ಈ ವಿಷಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಯಾರದು?


ಸತ್ಯನಾರಾಯಣ ಜಿ ಟಿ ಕರೂರು ಅವರ 'ಈಚೆ ದಡದಿಂದ' ಅಂಕಣ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಆಗಿನ ಸಿಎಂ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ ಮಾಡಿದ ನಿರ್ಣಾಯಕ ಕೆಲಸ ಮಣ್ಣುಪಾಲು?

Image

ನಾಲ್ಕು ತಿಂಗಳ ಹಿಂದೆ ಅವಿವೇಕಿ ಅರಣ್ಯಾಧಿಕಾರಿಯೊಬ್ಬರು ರೈತರ ಕೈಗೆ ಸ್ಲೇಟು ಹಿಡಿಸಿದ್ದು ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು. ಕಣಿವೆ ಜನರು 22 ಕಿಮೀ ಪಾದಯಾತ್ರೆ ನಡೆಸಿದಾಗ, ಮಧು ಬಂಗಾರಪ್ಪ ಕಾಣಿಸಿಕೊಂಡಿರಲೇ ಇಲ್ಲ. ಆದರೆ, ಕಾಂಗ್ರೆಸ್ ಸೇರಿದ ನಂತರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಯ ನಂತರವೂ ಪರಿಸ್ಥಿತಿ ಹೀಗೆಯೇ ಇರಲಿದೆಯೇ?


ಅರುಣ್ ಜೋಳದಕೂಡ್ಲಿಗಿ ಅವರ 'ಜನಪಠ್ಯ' ಅಂಕಣ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಬಡ್ಡಿ ವ್ಯವಹಾರದ ಧನದಾಹಿ ಬಸವಲಿಂಗಯ್ಯನನ್ನು ಕೊಲೆ ಮಾಡಿದ ಸಂಗ್ಯನ ಲಾವಣಿ

Image

ಬೆಳಗಾವಿ ಮತ್ತು ಬೈಲಹೊಂಗಲ ಭಾಗದ ರೈತರು ಈ ಪದವನ್ನು ಹೆಚ್ಚು ಹಾಡುತ್ತಿದ್ದರಂತೆ. ಈ ಕೊಲೆಯ ಪದವನ್ನು ರೈತರು ಯಾಕೆ ಹಾಡುತ್ತಿದ್ದರು ಎಂಬುದು ಸ್ವಾರಸ್ಯ. ಬಹುಶಃ ಲೇವಾದೇವಿಗಾರರನ್ನು ಹೆದರಿಸುವ ತಂತ್ರವೂ ಇದ್ದಿರಬಹುದು ಅಥವಾ ಬಡ್ಡಿ ವ್ಯವಹಾರದ ಧಣಿಗಳ ವಿರುದ್ಧ ತಮ್ಮೊಳಗಿರುವ ಸಿಟ್ಟು ತೀರಿಸಿಕೊಳ್ಳುವ ದಾರಿಯೂ ಆಗಿರಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180