ಒಂದು ನಿಮಿಷದ ಓದು | ಸೆಂಟ್ರಲ್ ವಿಸ್ತಾ ಮ್ಯೂಸಿಯಂನಲ್ಲಿ ಕಂಗೊಳಿಸಲಿವೆ ಹಂಪಿಯ 3ಡಿ ಚಿತ್ರಗಳು

ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ ʼಸೆಂಟ್ರಲ್ ವಿಸ್ತಾʼದ ವಸ್ತು ಸಂಗ್ರಹಾಲಯದಲ್ಲಿ ವಿಶ್ವ ಪರಂಪರೆಯ ತಾಣ ಹಂಪಿಯ ಸ್ಮಾರಕಗಳ 3ಡಿ ಚಿತ್ರಗಳು ಕಂಗೊಳಿಸಲಿವೆ.

'ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿ' ಯೋಜನೆಯಡಿ ತ್ರಿಕೋನಾಕಾರದ ನೂತನ ಸಂಸತ್ ಭವನ, ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ಮೂರು ಕಿಲೋಮೀಟರ್ ಉದ್ದದ ರಾಜಪಥ ಅಭಿವೃದ್ಧಿ, ಪ್ರಧಾನಿ ನಿವಾಸ, ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಜೊತೆಗೇ, ಇದೆಲ್ಲಕ್ಕೂ ಹೊಂದಿಕೊಂಡಂತೆ ಅತ್ಯಾಧುನಿಕ ವಸ್ತು ಸಂಗ್ರಹಾಲಯ ಅಭಿವೃದ್ಧಿಪಡಿಸಲಾಗುತ್ತಿದೆ. ಚರಿತ್ರೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ದೇಶದ ಪ್ರಮುಖ ಸ್ಮಾರಕಗಳ 3ಡಿ ಛಾಯಾಚಿತ್ರಗಳನ್ನು ಅಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಹಂಪಿಯೂ ಸೇರಿದೆ.

ಹಂಪಿಯ ಮಹಾನವಮಿ ದಿಬ್ಬ, ರಾಜ ಸಭಾಂಗಣ, ಗುಪ್ತ ಮಾರ್ಗ, ವಿಜಯನಗರ ಕಾಲದ ಕಮಲಾಪುರ ಕೆರೆ ಮತ್ತಿತರೆ ಸ್ಥಳಗಳ ಫೈಬರ್ ಪ್ರತಿಕೃತಿ ತಯಾರಿಸಿ, ಅವುಗಳ ಸಮಗ್ರ ಮಾಹಿತಿಯೊಂದಿಗೆ ವಸ್ತು ಸಂಗ್ರಹಾಲಯದಲ್ಲಿ ಇಡಲು ತೀರ್ಮಾನಿಸಲಾಗಿದೆ.

ಚಿತ್ರ ಕೃಪೆ: ಅಮೀನ್ ಅತ್ತಾರ್
ನಿಮಗೆ ಏನು ಅನ್ನಿಸ್ತು?
0 ವೋಟ್