ಬದುಕು | ಊರ್ನಲ್ಲಿ ಒಲೆ ಮುಂದುಕ್ ಹೋಗ್ದವ್ಳು, ಮೂವತ್ತೋಳ್ ವರ್‍ಸ ಕ್ಯಾಂಟೀನ್ ನೆಡ್ಸೀನಿ

BADUKU Chikkamma BNG

ನಾನು ಓದ್ಲೇ ಇಲ್ಲ... ಸ್ಕೂಲಿಗ್ ಕಳ್ಸೋರು. ನಾವೇನ್ ಮಾಡದು – ಹೋಗಿ ಮನೆ ಮೇಲತ್ತಿ ಕೂತ್ಕಬಿಡದು. ಸ್ಕೂಲು ಊಟಕ್ ಬಿಟ್ಟಾಗ ಇಳ್ದೋಗಿ, ಊಟ ಮಾಡ್ಕಂಡ್ ಮತ್ತೆ ಮನೆ ಮೇಲತ್ತಿ ಕೂರದು. ಇಂಗೇ ಮಾಡ್ತಿದ್ದೊ. ನಮ್ ಮೇಸ್ಟ್ರು ಮನೆಗೆ ಊಟುಕ್ ಬರರು ವಾರುಕ್ಕೊಂದ್ಸಾರಿ. ನಮ್ಮನೇಲಿ ಊಟುಕ್ ಕರೆಯಕ್ ಹೋಗವ್ರೆ. ಮೇಷ್ಟ್ರು ಇಂಗಿಂಗೆ ಅಂತ ಹೇಳ್ಬುಟ್ಟವ್ರೆ!

ನನ್ನೆಸ್ರು ಚಿಕ್ಕಮ್ಮ. ಗೌಡಗೆರೆ ನಮ್ಮೂರು – ಕುಣ್ಗಲ್ ತಾಲೂಕು. ಅಪ್ಪ ನಿಂಗಯ್ಯ, ತಿಮ್ಮಮ್ಮ ಅಮ್ಮ. ನಾವ್ ಒಟ್ಟಿಗೇ ಯೋಳ್ ಜನ ಇದ್ದು. ಐದ್ ಜನ ಹೆಣ್ಮಕ್ಳು, ಇಬ್ರು ಗಂಡ್ಮಕ್ಳು. ಅಪ್ಪ-ಅಮ್ಮ ಎಲ್ಲಾ ಹೊಲ ಉಳದು, ಗದ್ದೆ ಉಳದು ಮಾಡ್ತಿದ್ರು. ಚೂರ್ ಹೊಲ ಇತ್ತು ಅವಾಗ.

Eedina App

ನಾನು ಓದ್ಲೇ ಇಲ್ಲ... ಸ್ಕೂಲಿಗ್ ಕಳ್ಸೋರು. ನಾವೇನ್ ಮಾಡದು – ಹೋಗಿ ಮನೆ ಮೇಲತ್ತಿ ಕೂತ್ಕಬಿಡದು. ಸ್ಕೂಲು ಊಟಕ್ ಬಿಟ್ಟಾಗ ಇಳ್ದೋಗಿ ಊಟ ಮಾಡ್ಕಂಡ್ ಮತ್ತೆ ಮನೆ ಮೇಲತ್ತಿ ಕೂರದು. ಇಂಗೇ ಮಾಡ್ತಿದ್ದೊ.

ನಮ್ ಮೇಸ್ಟ್ರು ಮನೆಗೆ ಊಟುಕ್ ಬರರು ವಾರುಕ್ಕೊಂದ್ಸಾರಿ. ಅವತ್ತೊಂದಿನ ಇವ್ರು ನಮ್ಮನೇಲಿ ಊಟುಕ್ ಕರೆಯಕ್ ಹೋಗವ್ರೆ. ಅದುಕ್ ಅವ್ರು, “ನಿಮ್ ಚಿಕ್ಕಮ್ಮ, ದೇವೀರಮ್ಮ ಯಾರೂ ಕ್ಲಾಸಿಗ್ ಬತ್ತಿಲ್ಲ. ಹಂಗಾಗಿ ನಾವ್ ಊಟುಕ್ ಬರಲ್ಲ,” ಅಂದ್ಬುಟ್ರಂತೆ.

AV Eye Hospital ad

ನಾವ್ ಸ್ಕೂಲಿಗೋತಿಲ್ಲ ಅನ್ನಾ ವಿಷ್ಯ ನಮ್ಮನೇಲಿ ಗೊತ್ತಾಗೋತು. “ಇನ್ನೇನ್ ಮಾಡಕ್ಕಾಯ್ತದೆ? ಹೋಗ್ರಿ, ಗದ್ದೇಲಿ ಹಕ್ಕಿ ಕಾಯೋಗ್ರಿ,” ಅಂತ ಗದರಿ, ಗದ್ದೇಗ್ ಕಳ್ಸಿದ್ರು. ನಾವ್ ಆಮೇಲೆ ಹಕ್ಕಿಯೆಲ್ಲ ಕಾಯ್ಕಂಡು, ಅದ್ರು ಜೊತೆಗೆ ದನ-ಮೇಕೆಗಳ್ನೆಲ್ಲ ಮೇಯಿಸ್ಕಂಡು ಮನೇಗ್ ಬರೋ ಕೆಲ್ಸ ಸುರುವಾತು.

ಈ ಲೇಖನ ಓದಿದ್ದೀರಾ?: ಬದುಕು | ಕಟಿಂಗ್ ಸರಿಯಾಗ್ಲಿಲ್ಲಾಂತ ಗುಂಡು ಹೊಡೆಸ್ಕೊಂಡೋರೇನೂ ಕಡ್ಮೆ ಇಲ್ಲ!

ಸ್ಕೂಲ್ಗಂದ್ರೇನೇ ಹೋಗ್ಬೇಕು ಅನ್ನುಸ್ತಿರ್ಲಿಲ್ಲ. ಮೇಷ್ಟ್ರು ಹೊಡೀತಾರೇಂತ ಬಯ ಬ್ಯಾರೆ; ನಾನೂ ನನ್ ತಂಗೀನೂ ಹೋಗ್ಲೇ ಇಲ್ಲ. ಈಗ ಅನ್ನುಸ್ತದೆ – ಮಣ್ ತಿನ್ನ ಕೆಲ್ಸ ಮಾಡ್ದು ಅಂತ. ದೊಡ್-ದೊಡ್ಡರಿಗೆ ಓದ್ಸೋರಲ್ಲ, ಸಾಂಕ್ಯಾಲದ್ ಟೇಮು, ಆವಾಗ ಸ್ವಲ್ಪು ದಿನ ಓದ್ವು. ಆಮೇಲೆ ತಿರುಗ ಬಿಟ್ಬಿಟ್ಟು. ಇಲ್ಲಿಗ್ ಮದ್ವೆ ಮಾಡ್ಕಬೇಕಾರೆ ಗಂಡಿನ್ ಕಡೇವ್ರು ಹಂಗೇ ಹೇಳಿದ್ರು, "ನಾವ್ ಓದುಸ್ಕತೀವಿ," ಅಂತ. ನಾನೇ ಓದ್ಲಿಲ್ಲ – “ಯ್ಯೋ… ಏನ್, ಮದ್ವೆ ಆದ್ಮೇಲೇಂತ...”

ಹ್ಞಾಂ... ಇಂದ್ರಾಗಾಂಧಿ ಸತ್ತಿದ್ ತಿಂಗ್ಳು ಬೆಂಗ್ಳೂರಿಗ್ ಬಂದಿದ್ದು ಮದ್ವೆ ಆಗಿ. ಅಲ್ಲಿಗ್ ಎಸ್ಟ್ ವರ್ಷ ಆತು… ಹಮ್… 38 ವರ್ಷಾತು. ಆವಾಗ, ಆವಾಗ್ಲೇ ಬೆಂಗ್ಳೂರಿಗ್ ಬಂದಿದ್ದು. ಹಿಂಗೇ ಯಾರೋ ಗಂಡ್ ತೋರ್ಸಿದ್ರು. ಎಲ್ಲ ಒಪ್ಕಂಡು ಮದ್ವೆ ಆತು. ಬೆಂಗ್ಳೂರು ಹೆಂಗೈತೆ ಅಂತ ನೋಡಿದ್ದು ಅದೇ ಮೊದ್ಲು. ಅದ್ಕೂ ಮುಂಚೆ ದಾರೀನೇ ಗೊತ್ತಿರ್ಲಿಲ್ಲ ನಮ್ಗೆ ಬೆಂಗ್ಳೂರು ಎಲ್ಲದೆ ಅಂತ.

ಬೆಂಗ್ಳೂರಿಗ್ ಬಂದ್ ಆರ್ಯೋಳ್ ತಿಂಗಳಿಗೆ ಸಣ್ದಾಗಿ ಕ್ಯಾಂಟೀನ್ ಮಾಡಿದ್ದು. ಎಲ್ಲೂ ಕೆಲ್ಸ ಸರ್ಯಾಗ್ ಸಿಗ್ತಿರ್ಲಿಲ್ಲ ಯಜಮಾನ್ರಿಗೆ, ಅದ್ಕೇ ಕ್ಯಾಂಟೀನ್ ಮಾಡಿದ್ದೋ. ಈಗ್ಲೂ ಕ್ಯಾಂಟೀನೇ ನಡೀತಾ ಐತಿ. ಮೊದ್ಲು ಕ್ಯಾಂಟೀನ್ ಇದ್ಕಡೆ ಈ ಕಾರ್ಪೊರೇಷನ್ ಗಲಾಟೆ ಆಗ್ಬುಟ್ಟು ಈ ಕಡೀಕ್ (ಮೈಸೂರು ರಸ್ತೆಯ ಬಿಎಚ್‌ಇಎಲ್ ಬಳಿ) ಬಂದೋ. ಆಮೇಲ್ ಮಕ್ಳೆಲ್ಲ ಆದೋ. ಇಬ್ರು ಹೆಣ್ಮಕ್ಳು, ಒಬ್ ಗಂಡ್ ಮಗ. ಈಗ ಅಡ್ಗೆಯೆಲ್ಲ ನಮ್ ಹುಡ್ಗ ಗೋವಿಂದರಾಜಾನೇ ಮಾಡ್ತಾನೆ. ಈಗ ಇಲ್ಲೇ ಇದೀವಿ, ಹತ್ತತ್ರ ಮೂವತ್ತೋಳ್ ವರ್ಸಾತು.

ಈ ಲೇಖನ ಓದಿದ್ದೀರಾ?: ಬದುಕು | ರಾಗಿ ಮುದ್ದೆ, ಮಟನ್ ಸಾರು ಉಂಡ್ರೆ ಯಾವ್ ಕಬ್ಣಾನಾದ್ರೂ ಬಗ್ಗುಸ್ಬೋದು

ತಮಾಷಿ ಅಂದ್ರೆ, ಮನೇಲಿದ್ದಾಗ ಒಂದಿವ್ಸಾನೂ ಅಡ್ಗೆ ಮಾಡಿಲ್ಲ. ಒಲೆ ಮುಂದುಕ್ಕೂ ಹೋಗಿಲ್ಲ. ಮನೆ ತಾವೇ ಇರ್ತಿರ್ಲಿಲ್ಲಲ ಒಂದಿವ್ಸಾನೂವೇ. ಹೊಲ್ತಕ್ ಹೊಂಟೋಗವು. ಹೊಲ್ತಾವ್ ಕೆಲ್ಸ ಇರಾದಲ್ಲ; ಕಳೆ ಕೀಳದು, ಹುಲ್ ಕೀಳದು, ಸೊಪ್ ಕೀಳದು… ಇಂತಾವೆಲ್ಲ ಮಾಡ್ತಿದ್ದೋ. ತಿರುಗ ಒಂದ್ ಗಂಟೇಗ್ ಬಂದಿ, ಮೇಕೆಗಳು-ದನಗಳು ಬಿಟ್ಕಂಡ್ ಮೇಯ್ಸಕ್ ಹೊಂಟೋಗೆವು. ಸಾಯಂಕಾಲ ಆರ್ ಗಂಟೀಗ್ ಬರವು. ಕಾಪಿ-ಗೀಪಿ ಕುಡ್ಕಂಡ್, ರಾಗಿ ಬೀಸದು, ಭತ್ತ ಕುಟ್ಟಿಕ್ಕದು… ಹಿಂಗೇ ಸಣ್ಣಪಣ್ಣ ಕೆಲ್ಸ ಇರ್ತಿದ್ದು.

ಈಗ ಹೊಲುದ್ ಕೆಲ್ಸ ಎಲ್ಲ ಮಾಡಕ್ಕೆ ಇಷ್ಟಾನೇ ಹೋಗ್ಬುಡ್ತು. ಇಲ್ಲಾಂದ್ರೆ ಜಮೀನ್ ಮಾಡ್ಬೋದಿತ್ತು. ಊರಲ್ಲಿ ಜನ ಅವ್ರೆ. ವರ್ಸಾ, ಆರ್ ತಿಂಗ್ಳಿಗೊಂದ್ಸಾರಿ ಹೋಗ್ಬರದು. "ಉಳ್ಕ, ಉಳ್ಕ..." ಅಂತರೆ; ಆದ್‌ರೆ ನಾನೇ ಉಳ್ಯಲ್ಲ. ಹೋದ್ರೆ ಒಂದೆರಡ್ ದಿನ ಆಟೆ.

ಕ್ಯಾಂಟೀನ್ ದೊಡ್ದು ಮಾಡ್ಬೇಕು ಅಂತೈತೆ ಮನ್ಸಲ್ಲಿ. ಆದ್ರೆ ಬಂಡ್ವಾಳ ಇಲ್ಲ. ಇದು ಎಲ್ಲೀವರ್ಗೆ ನಡೀತದೆ ಅಲ್ಲೀವರ್ಗೆ ಮಾಡದು. ಆಮೇಲೆ ಅದುನ್ನ ನೋಡದು. "ಏನೂ ಮಾಡ್ಬ್ಯಾಡಿ, ಆರಾಮಾಗಿರಿ," ಅಂತರೆ ಮಕ್ಳೆಲ್ಲ. ನಂಗಾಗಲ್ಲ ಅದೆಲ್ಲ. “ಕೈಲಾಗವರ್ಗು ನಾ ಮಾಡ್ತೀನಿ. ಆಮೇಲ್ ನೀವ್ ಏನಾರ ಮಾಡ್ಕಳಿ,” ಅಂತೀನಿ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app