ಜೊತೆಯಲ್ಲೇ ಪರೀಕ್ಷೆ ಬರೆದ ಸಯಾಮಿ ವಿದ್ಯಾರ್ಥಿನಿಯರು

  • 12 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರು
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿರುವ ಮಕ್ಕಳು

ವೀಣಾ ಮತ್ತು ವಾಣಿ ಎಂಬ ಸಯಾಮಿ 19 ವರ್ಷದ ವಿದ್ಯಾರ್ಥಿನಿಯರು ತೆಲಂಗಾಣದಲ್ಲಿ ಮಧ್ಯಂತರ ಪಬ್ಲಿಕ್ ಪರೀಕ್ಷೆಯನ್ನು ಜೊತೆಯಲ್ಲೇ ಬರೆದಿದ್ದಾರೆ. ಪರೀಕ್ಷೆ ಫಲಿತಾಂಶವನ್ನು ಜೂನ್ 28ರಂದು ಪ್ರಕಟಿಸಿದ್ದು, ವೀಣಾ ಮತ್ತು ವಾಣಿ ಅವರು ಕ್ರಮವಾಗಿ 1,000ಕ್ಕೆ 712 ಮತ್ತು 707 ಅಂಕಗಳನ್ನು ಗಳಿಸಿದ್ದಾರೆ.

ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ಸೇರಿದಂತೆ ಕೆಲವು ವಿಶೇಷ ಸವಲತ್ತುಗಳಿಗೆ ಅರ್ಹರಾಗಿದ್ದ, ಈ ಅವಳಿ ಮಕ್ಕಳು ಆ ಸೌಲಭ್ಯವನ್ನು ನಿರಾಕರಿಸಿದ್ದರು. ವಿಶೇಷವೆಂದರೆ, ಈ ಮಕ್ಕಳು ನಿಗದಿತ ಸಮಯಕ್ಕಿಂತ ಐದು ನಿಮಿಷಗಳ ಮೊದಲೇ ಪರೀಕ್ಷೆಯನ್ನು ಬರೆದು ಮುಗಿಸಿದ್ದರು ಎಂದು ಪರೀಕ್ಷಾ ಪರೀಕ್ಷಾ ಮೇಲ್ವಿಚಾರಕರು ಸುದ್ದಿಗಾರರಿಗೆ ತಿಳಿಸಿದರು.

ಒಟ್ಟಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ರಾಜ್ಯ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿನಿಯರು ಸುದ್ದಿಗಾರರೊಂದಿಗೆ ಮಾತನಾಡಿ, ಕೃತಜ್ಞತೆ ತಿಳಿಸಿದ್ದಾರೆ.

ಈ ಇಬ್ಬರು ವಿದ್ಯಾರ್ಥಿನಿಯರು ಚಿಕ್ಕಂದಿನಿಂದಲೂ ತೆಲಂಗಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರೈಕೆಯಲ್ಲಿದ್ದಾರೆ. 2020ರಲ್ಲಿ ವೀಣಾ ಮತ್ತು ವಾಣಿ ಅವರು ಒಂಭತ್ತನೇ ತರಗತತಿಯ ಪರೀಕ್ಷೆಯಲ್ಲಿ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್‌ನಲ್ಲಿ (ಸಿಜಿಪಿಎ) ಶೇ. 9.3 ಮತ್ತು ಶೇ. 9.2 ಅಂಕ ಗಳಿಸಿದ್ದರು.

ಈ ಮಕ್ಕಳ ತಂದೆ ತಾಯಿಗೆ ಮಕ್ಕಳ ವೈದ್ಯಕೀಯ ಖರ್ಚನ್ನು ಭರಿಸಲಾಗದ ಕಾರಣ, ಇವರನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇರಿಸಿದ್ದರು. ಮಕ್ಕಳು 13 ವರ್ಷ ವಯಸ್ಸಿನವರೆಗೆ ರಾಜ್ಯದ ನಿಲೋಫರ್ ಆಸ್ಪತ್ರೆಯ ಆರೈಕೆಯಲ್ಲಿದ್ದರು. ಈ ಮಕ್ಕಳ ತಂದೆ ನಾಗ ಮುರಳಿ ಅವರು ಮಕ್ಕಳು ಹುಟ್ಟಿದ ಕೂಡಲೇ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲ. ಅವರಿಗೆ ನಿರಂತರವಾಗಿ ವೈದ್ಯಕೀಯ ಆರೈಕೆ ಮತ್ತು ಸಹಾಯದ ಅಗತ್ಯವಿರುತ್ತದೆ ಕುಟುಂಬವು ಮಕ್ಕಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ಇರಿಸಿದ್ದರು.

ಈ ಸುದ್ದಿ ಓದಿದ್ದೀರಾ? ಕೇಂದ್ರ ಶಿಕ್ಷಣ ಇಲಾಖೆ ಸಮೀಕ್ಷೆ| ಚಿತ್ರದುರ್ಗ, ಬೆಳಗಾವಿ, ಧಾರವಾಡ ಅತಿ ಉತ್ತಮ ಶೈಕ್ಷಣಿಕ ಜಿಲ್ಲೆಗಳು

ನಿಲೋಫರ್ ಆಸ್ಪತ್ರೆಯಲ್ಲಿದ್ದ ವೀಣಾ ಮತ್ತು ವಾಣಿ ಅವರು ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನಿಲೋಫರ್ ಆಸ್ಪತ್ರೆಯಲ್ಲಿ ಇದ್ದಾಗಿನಿಂದ ಅವಳಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಜೊತೆಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಎಂಬ ನವದೆಹಲಿಯ ವೈದ್ಯಕೀಯ ತಂಡ ಸೇರಿದಂತೆ ಹಲವಾರು ಶಸ್ತ್ರಚಿಕಿತ್ಸಕ ತಂಡಗಳು ಪ್ರತ್ಯೇಕ ಪಡಿಸುವುದು ಅಪಾಯಕಾರಿ ಎಂದು ಹೇಳಿವೆ.
ಮಕ್ಕಳನ್ನು ಬೇರ್ಪಡಿಸುವುದರಿಂದ ಒಬ್ಬರು ಅಥವಾ ಇಬ್ಬರ ಸಾವಿಗೂ ಕಾರಣವಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ವೀಣಾ ಮತ್ತು ವಾಣಿ ಅವರು ಈಗಾಗಲೇ ಆ ಪರಿಸ್ಥಿತಿಗೆ ಹೊಂದಿಕೊಂಡಿದ್ದು, ಪ್ರತ್ಯೇಕತೆಯ ಭರವಸೆಯನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ಮಕ್ಕಳ ಆರೈಕೆಗೆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಅವರ ತಂದೆ ಮುರಳಿ ರಾಜ್ಯ ಸರ್ಕಾರವನ್ನು ಕೇಳುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್