ನಿಮಗಿದು ಗೊತ್ತೇ | ಕಪ್ಪುಕುಳಿಗಳು ಸೌರವ್ಯೂಹದಿಂದ ದೂರವಿದ್ದಷ್ಟು ಭೂಮಿ ಸುರಕ್ಷಿತ

 Do you know? Black holes pose a threat to the solar system
  • ಬಾಹ್ಯಾಕಾಶದಲ್ಲಿ ಕಪ್ಪುಕುಳಿಗಳು ದೂರದಲ್ಲಿದ್ದಷ್ಟು ಭೂಮಿ ಸುರಕ್ಷಿತ
  • ಸೌರವ್ಯೂಹದ ಗ್ರಹಗಳನ್ನು ಕೇಂದ್ರಕ್ಕೆ ಸೆಳೆದುಕೊಳ್ಳುವ ಕುಳಿಗಳು

ಬಾಹ್ಯಾಕಾಶದಲ್ಲಿ ಆಯಸ್ಕಾಂತದಂತೆ ಸಮೀಪಕ್ಕೆ ಬಂದ ಎಲ್ಲಾ ಗ್ರಹಗಳು, ಉಲ್ಕೆಗಳು ಮತ್ತು ಅವಶೇಷಗಳನ್ನು ತನ್ನೊಳಗೆ ಸೆಳೆದುಕೊಳ್ಳುವ ಕಪ್ಪು ರಂಧ್ರವನ್ನು ಕಪ್ಪುಕುಳಿ ಎಂದು ಕರೆಯಲಾಗುತ್ತದೆ. ಕಪ್ಪು ರಂಧ್ರಗಳು ನಿಖರವಾಗಿ ರಂಧ್ರಗಳಲ್ಲ. ಇವು ಬಾಹ್ಯಾಕಾಶದೊಳಗಿನ ಒಂದು ಸ್ಥಳ. ಕಪ್ಪು ರಂಧ್ರಗಳಲ್ಲಿ ಗುರುತ್ವಾಕರ್ಷಣೆ ಹೆಚ್ಚಾಗಿದ್ದು, ಸೌರವ್ಯೂಹದ ಇತರ ಕಾಯಗಳನ್ನು ತನ್ನ ಕೇಂದ್ರಕ್ಕೆ ಸೆಳೆದುಕೊಳ್ಳುತ್ತದೆ.  ಬೆಳಕು ಹೊರಬರದ ಕಾರಣ ಇದನ್ನು ಕಪ್ಪುಕುಳಿ ಅಥವಾ ಕಪ್ಪುರಂಧ್ರ ಎನ್ನುತ್ತಾರೆ.

ಕಪ್ಪು ರಂದ್ರಗಳೊಳಗೆ ಸಂಪೂರ್ಣ ಕತ್ತಲು ಆವರಿಸಿ, ಬೆಳಕು ಹೊರಬರುವುದೇ ಇಲ್ಲ. ಸಂಪೂರ್ಣ ಕತ್ತಲು ಆವರಿಸಿರುತ್ತದೆ. ನಕ್ಷತ್ರಗಳು ನಾಶವಾಗುವಾಗ ಕಪ್ಪು ಕುಳಿಗಳಾಗಿ ಪರಿವರ್ತನೆ ಹೊಂದುತ್ತವೆ ಎನ್ನುವ ವಾದವೂ ಇದೆ.

Eedina App

ಇಂತಹ ಅಗಾಧ ಶಕ್ತಿಯ ಕಪ್ಪುಕುಳಿಗಳು ನಮ್ಮ ಸೌರವ್ಯೂಹವನ್ನು ಸಮೀಪಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಈವರೆಗೂ ಯಾವುದೇ ಉತ್ತರ ದೊರೆತಿಲ್ಲ.

ನಾಸಾದ ವಿಜ್ಞಾನಿಗಳ ಪ್ರಕಾರ ಕಪ್ಪುಕುಳಿಯ ಗಾತ್ರ ಮತ್ತು ಸೌರವ್ಯೂಹದಿಂದ ಎಷ್ಟು ದೂರದಲ್ಲಿ ಅದು ಹಾದುಹೋಗುತ್ತದೆ ಎಂಬುದನ್ನು ಅವಲಂಬಿಸಿದೆ. ದೊಡ್ಡ ಗಾತ್ರದ ಕಪ್ಪುಕುಳಿ ಸೌರವ್ಯೂಹಕ್ಕೆ ಬಡಿದರೆ ನಾವು ಬದುಕಿ ಉಳಿಯುವ ಅವಕಾಶಗಳು ತೀರಾ ಕಡಿಮೆ. 

AV Eye Hospital ad

ಈ ಸುದ್ದಿ ಓದಿದ್ದೀರಾ? ವಿಶ್ವ ವಿಸ್ಮಯ | ಈಜಿಪ್ಟ್‌ ಇತಿಹಾಸ ಸಾರುವ ಗೀಜಾದ ಪಿರಮಿಡ್‌

ಕಪ್ಪುಕುಳಿಗಳು ಭೂಮಿಯ ಸಮೀಪ ಅಪ್ಪಳಿಸಿದರೂ, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಕ್ಷತ್ರಗಳು, ಗ್ರಹಗಳು, ಕ್ಷುದ್ರಗ್ರಹಗಳು ಹಾಗೂ ಧೂಮಕೇತುಗಳು ಕಪ್ಪುಕುಳಿಗಳನ್ನು ಸುತ್ತುತ್ತಿರುತ್ತವೆ. ಇವೆಲ್ಲವನ್ನೂ ಒಂದೇ ಬಡಿತಕ್ಕೆ ನಾಶ ಮಾಡುವಷ್ಟು ಗುರುತ್ವಾಕರ್ಷಣ ಶಕ್ತಿ ಈ ಕಪ್ಪುಕುಳಿಯಲ್ಲಿರುತ್ತದೆ. ಹೀಗಾಗಿ, ಕಪ್ಪುಕುಳಿಗಳು ದೂರದಲ್ಲಿದ್ದಷ್ಟು ಭೂಮಿ ಸುರಕ್ಷಿತ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app