ನಿಮಗಿದು ಗೊತ್ತೇ? 400 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಚೇಳಿನ ಪಳೆಯುಳಿಕೆ ಪತ್ತೆ

Do you know? Fossil of a scorpion that lived 400 million years ago was discovered
  • ಚೀನಾದ ನಂಜಿಂಗ್ ಭೂವಿಜ್ಞಾನ ಮತ್ತು ಪುರಾತನ ಪರಿಸರ ಸಂಸ್ಥೆ ವಿಜ್ಞಾನಿಗಳು
  • ಚೀನಾ ಸಮುದ್ರ ತಳದಲ್ಲಿ ಇತ್ತೀಚೆಗೆ ಚೇಳಿನ ಪಳೆಯುಳಿಕೆಯೊಂದನ್ನು ಹೊರತೆಗೆದಿದ್ದಾರೆ

ನಮಗೆ ಸಾಮಾನ್ಯವಾಗಿ ಕಾಣಿಸುವ ಚೇಳುಗಳು ಸರಾಸರಿ ಏಳು ಇಂಚು ದೊಡ್ಡದಿರುತ್ತವೆ. ಹಿಟೆರೋಮೆಟ್ರಸ್ ಸ್ವಾಮೆರ್ಡಮಿ ಎಂಬ ಪ್ರಭೇದದ ಚೇಳುಗಳು 9 ಇಂಚುಗಳಷ್ಟು ದೊಡ್ಡದಾಗಿರುತ್ತವೆ. ಇವುಗಳನ್ನು ಜಗತ್ತಿನ ಅತಿ ದೊಡ್ಡ ಚೇಳಿನ ತಳಿ ಎಂದು ಗುರುತಿಸಲಾಗಿದೆ.

ಚೀನಾದ ನಂಜಿಂಗ್ ಭೂವಿಜ್ಞಾನ ಮತ್ತು ಪುರಾತನ ಪರಿಸರ ಸಂಸ್ಥೆ ವಿಜ್ಞಾನಿಗಳು ದಕ್ಷಿಣ ಚೀನಾ ಸಮುದ್ರ ತಳದಲ್ಲಿ ಇತ್ತೀಚೆಗೆ ಈ ಚೇಳಿನ ಪಳೆಯುಳಿಕೆಯೊಂದನ್ನು ಹೊರತೆಗೆದಿದ್ದಾರೆ. ಅದರ ಗಾತ್ರ 3.3 ಅಡಿ ಉದ್ದ ಅಥವಾ ಸುಮಾರು ಒಂದು ಮೀಟರ್. ಈಗ ಪತ್ತೆಯಾಗುತ್ತಿರುವ ಸಾಮಾನ್ಯ ಚೇಳುಗಳ ಸರಾಸರಿ ಗಾತ್ರಕ್ಕಿಂತ 16 ಪಟ್ಟು ದೊಡ್ಡವು ಎಂದು ಹೇಳಲಾಗಿದೆ. ಈ ಚೇಳುಗಳು ಜೀವಿಸಿದ್ದು ಕನಿಷ್ಠ 400 ಮಿಲಿಯನ್ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ?  ನಿಮಗಿದು ಗೊತ್ತೇ? ಮೇಘಾಲಯ ಜಗತ್ತಿನ ಅತ್ಯಂತ ತೇವಭರಿತ ಪ್ರದೇಶ

ಈ ಚೇಳುಗಳಿಗೆ ಅರಾಕ್ನಿಡ್‌ಗೆ ಟೆರ್ರೊಪ್ಟೆರಸ್ ಕ್ಸಿಯುಶನೆಸಿಸ್ ಎಂದು ಹೆಸರಿಡಲಾಗಿದೆ. ಇವು ಈಗಿನ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಹಾರ್ಸ್‌ಶೂ ಏಡಿ ಮತ್ತು ವಿಪ್ ಸ್ಪೈಡರ್‌ನ ಸಂಬಂಧಿ ಎಂದು ವಿಜ್ಞಾನಿಗಳ ವಾದ ಆಗಿದೆ. ಈ ಚೇಳುಗಳು ಮುಳ್ಳುಮುಳ್ಳಾದ  ಮುಂಗಾಲುಗಳನ್ನು ಹೊಂದಿದ್ದವು. ಯುರಿಪ್ಟೆರಿಡ್ಸ್ (ಸಮುದ್ರ ಚೇಳು) ಸಮೂಹದ ಮಿಕ್ಸೊಪ್ಟೆರಿಡ್ಸ್‌ಗೆ ಸೇರಿವೆ. ತನ್ನ ಬೇಟೆಯನ್ನು ಹಿಡಿದುಕೊಳ್ಳಲು ಇವುಗಳಿಗೆ ವಿಶೇಷವಾದ ಕೊಂಡಿಗಳಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಭಯಾನಕ ಸಮುದ್ರ ಚೇಳು ಸಿಲುರಿಯನ್ ಯುಗದಲ್ಲಿ, 443.8-419.2 ಮಿಲಿಯನ್ ವರ್ಷಗಳ ಹಿಂದೆ ಎಲ್ಲೋ ಜೀವಿಸಿರಬಹುದು ಎಂದು ಊಹಿಸಲಾಗಿದೆ. ಇವು ಸಮುದ್ರ ಅಡಿಯಲ್ಲಿ ವಾಸಿಸುವ ಮಾಂಸಾಹಾರಿ ಪ್ರಾಣಿಯಾಗಿದ್ದು, ಮೀನು ಮತ್ತು ಮೃದ್ವಂಗಿಗಳನ್ನು ಬೇಟೆಯಾಡಲು ಪೂರಕವಾದ ಉಗುರುಗಳಂತಹ ಮುಳ್ಳಿನ ಬೃಹತ್ ಕೊಂಡಿಗಳನ್ನು ಹೊಂದಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180