
ಕಾರ್ಯಕ್ರಮ ಎಲ್ಲಿ ಮತ್ತು ಯಾವಾಗ?
ನವೆಂಬರ್ 13ರ ಭಾನುವಾರ ಬೆಳಗ್ಗೆ 10 ಗಂಟೆಗೆ. ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ 'ಸುಚಿತ್ರ' ಸಭಾಂಗಣದಲ್ಲಿ.
ಯಾರ್ಯಾರು ಭಾಗವಹಿಸಲಿದ್ದಾರೆ?
ನೂತನ ವಿನ್ಯಾಸದ ಲಿಪಿ ಬಿಡುಗಡೆ ಮಾಡಲಿದ್ದಾರೆ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್. ಫರ್ಡಿನಾಂಡ್ ಕಿಟೆಲ್ ವಂಶಸ್ಥರು ಉಪಸ್ಥಿತರಿರಲಿದ್ದಾರೆ. ಸಂಚಯ ಮತ್ತು ಸಂಚಿ ಫೌಂಡೇಶನ್ ಈ ಕಾರ್ಯಕ್ರಮದ ಆಯೋಜಕರು.
ಕಾರ್ಯಕ್ರಮದ ವಿಶೇಷತೆ ಏನು?
1860-70ರ ದಶಕದಲ್ಲಿ ಫರ್ಡಿನಾಂಡ್ ಕಿಟೆಲ್ ಅವರು ಪ್ರಕಟಿಸಿದ್ದ ಪುಸ್ತಕಗಳನ್ನು ಈಗ ಡಿಜಿಟಲ್ ಪುಸ್ತಕ ರೂಪದಲ್ಲಿ ತರಬೇಕೆಂದರೆ, ಮುಖ್ಯ ಅಡ್ಡಿ ಆಗುವುದು ಆ ಪುಸ್ತಕಗಳಲ್ಲಿ ಬಳಸಲಾಗಿರುವ ಕನ್ನಡ ಲಿಪಿ. ಡಿಜಿಟಲ್ ರೂಪಕ್ಕೆ ಒಗ್ಗದ ಅದೇ ಹಳೆಯ ಲಿಪಿಗೆ ಹೊಸ ವಿನ್ಯಾಸದ ಸ್ಪರ್ಶ ಕೊಟ್ಟು, ಹಳೆಯ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತರುವ ದಾರಿ ಸುಗಮಗೊಳಿಸಲಾಗಿದೆ. ಜೊತೆಗೆ, 'ಓಪನ್ ಲೈಸೆನ್ಸ್' ಮೂಲಕ ಲಿಪಿಯನ್ನು ಬಳಕೆಗೆ ಮುಕ್ತ ಮಾಡಲಾಗಿದೆ. ಈ ಹಳೆ ಲಿಪಿಯ ಹೊಸ ವಿನ್ಯಾಸಕ್ಕೆ 'ಕಿಟೆಲ್' ಎಂದೇ ಹೆಸರಿಡಲಾಗಿದ್ದು, ಪ್ರಶಾಂತ್ ಪಂಡಿತ್ ಮತ್ತು ತಂಡ ಇಂಥದ್ದೊಂದು ಸಾಹಸ ಮಾಡಿದೆ.