ಪುಸ್ತಕ ಬಿಡುಗಡೆ | ಗೀತಾ ವಸಂತ ಅವರ 'ಅವಳ ಅರಿವು'

Geetha Vasantha Book

ಯಾವ ದಿನ, ಎಷ್ಟು ಹೊತ್ತಿಗೆ, ಎಲ್ಲಿ?

ಜುಲೈ 16ರ ಶನಿವಾರ, ಬೆಳಗ್ಗೆ 11 ಗಂಟೆಗೆ. ಬೆಂಗಳೂರು (ಬಸವನಗುಡಿ) ನ್ಯಾಷನಲ್ ಕಾಲೇಜಿನ ಎಚ್ ಎನ್ ಮಲ್ಟಿಮೀಡಿಯಾ ಹಾಲ್‌.

ಯಾರೆಲ್ಲ ಇರಲಿದ್ದಾರೆ?

ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ. ಪ್ರೊ.ಎಸ್ ಎನ್ ನಾಗರಾಜ ರೆಡ್ಡಿ ಅಧ್ಯಕ್ಷತೆ. ಅತಿಥಿಗಳಾಗಿ ಬರಲಿದ್ದಾರೆ ಎಚ್ ಎಲ್ ಪುಷ್ಪ ಮತ್ತು ಎಚ್ ಎನ್ ಆರತಿ. ಸತೀಶ್ ಎಂ ಕಾರಂತ್, ಬಿ ರಾಜಶೇಖರಮೂರ್ತಿ ಉಪಸ್ಥಿತಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಮಳಿಗಾಲ್ದಲ್ಲಿ ಜೀವ ಕಳಕಂಡರ್ ಮನಿಯವ್ರ ಕಣ್ಣೀರ್ ಈ ಮಳಿಗಿಂತ ಚೂರ್ ಹೆಚ್ಚೇ

ಪುಸ್ತಕದ ವಿಶೇಷವೇನು?

"ಬಾಲ್ಯದಿಂದಲೂ ಮೌನದ ಚಿಪ್ಪಿನಲ್ಲಿ ಹುದುಗಿಕೊಂಡಿದ್ದವಳು ನಾನು. ಮೌನದಲ್ಲೇ ಜಗತ್ತನ್ನು ಕಾಣುವ ನೋಟವೊಂದು ಬೆಳೆಯುತ್ತ ಬೆಳೆಸುತ್ತ ಹೋಯಿತು. ಚಿಪ್ಪೊಡೆಯದೇ ಉಳಿಗಾಲವಿಲ್ಲ... ಇದೋ, ಈ ಮಾತುಗಳಿಗೆ ಹೃದಯ ತೆರೆಯುವ ನಿಮ್ಮ ಮುಂದೆ 'ಅವಳ ಅರಿವು' ತೆರೆದುಕೊಳ್ಳುತ್ತಿದೆ," ಎನ್ನುತ್ತಾರೆ ಪುಸ್ತಕದ ಲೇಖಕಿ ಗೀತಾ ವಸಂತ.

ಗೀತಾ ವಸಂತ ಯಾರು?

ಕತೆಗಾರ್ತಿ, ಕವಯತ್ರಿ, ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಕಾಟೀಮನೆಯಲ್ಲಿ. 'ಚೌಕಟ್ಟಿನಾಚೆಯವರು' ಗಮನಿಸಬೇಕಾದ ಕಥಾ ಸಂಕಲನ. 'ಪರಿಮಳದ ಬೀಜ’ ಮತ್ತು 'ಹೊಸಿಲಾಚೆ ಹೊಸ ಬದುಕು' ಕವನ ಸಂಕಲನಗಳು. 'ಹೊಸ ದಿಗಂತದ ಹೊಸದಾರಿ,' 'ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ' ಪ್ರಮುಖ ವಿಮರ್ಶಾ ಕೃತಿಗಳು. ಸದ್ಯ, ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ.

ನಿಮಗೆ ಏನು ಅನ್ನಿಸ್ತು?
2 ವೋಟ್