ಒಂದು ನಿಮಿಷದ ಓದು | ಯುನೆಸ್ಕೋ ಕಾರ್ಯಾಗಾರದಲ್ಲಿ ಒಡಿಶಾದ ಜಾಜ್ಪುರ ಮಣ್ಣಿನ ಕಲಾಕೃತಿ ಪ್ರದರ್ಶನ

Jaipur

ಪ್ರಪಂಚಾದ್ಯಂತ ಕರಕುಶಲ ಕರ್ಮಿಗಳಿಗೆ ಒಡಿಶಾದ ಜಾಜ್ಪುರದ ಮಣ್ಣಿನ ಕಲಾಕೃತಿಗಳನ್ನು (ಟೆರಾಕೋಟಾ ಕಲೆ) ಪರಿಚಯಿಸಲು ಯುನೆಸ್ಕೋ ಕಾರ್ಯಾಗಾರಕ್ಕೆ ಆಹ್ವಾನ ನೀಡಲಾಗಿತ್ತು.

ಥಾಯ್ಲೆಂಡಿನ ಚಿಯಾಂಗ್ ಮಾಯ್‌ನಲ್ಲಿ ಯುನೆಸ್ಕೋ ಮೂರು ದಿನದ ಕಾರ್ಯಾಗಾರ ಆಯೋಜಿಸಿತ್ತು. ʼಕ್ರಿಯೇಟಿವ್ ಸೆರಾಮಿಕ್, ಸ್ಕಲ್ಪ್ಟೆಡ್ ಸಿಟಿʼ ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ, ಪ್ರಪಂಚದ ನಾನಾ ಭಾಗಗಳಿಂದ ಆಗಮಿಸಿದ್ದ 500 ಕಲಾವಿದರು ತಮ್ಮ ಕಲಾಕೃತಿಗಳನ್ನು ಪರಿಚಯಿಸಿ ಮೆಚ್ಚುಗೆ ಪಡೆದರು.

ಭಾರತದ ಕುಶಲಕರ್ಮಿಗಳ ತಂಡದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕುಶಲಕರ್ಮಿಗಳಾದ ಪರಶುರಾಮ್ ಬೆಹೆರಾ, ಮಹೇಶ್ವರ್ ಓಜಾ, ನರೇಂದ್ರ ರಾಣಾ, ಸ್ವಯಂಸೇವಾ ಸಂಸ್ತೆಯ ಸದಸ್ಯರಾದ ಜಯಂತಿ ಬೆಹೆರಾ, ರಂಗಲತಾ ಬೆಹೆರಾ, ಮಾಲತಿ ರಾಣಾ ಮತ್ತು ಪರ್ಬತಿ ಬೆಹೆರಾ ಎಂಬುವವರಿದ್ದರು.

ಕಾರ್ಯಾಗಾರದಲ್ಲಿ ಭಾಗಿಯಾಗಲು ಆಹ್ವಾನ ಪಡೆದಿದ್ದ ದೇಶದ ಏಕೈಕ ನಗರ ಒಡಿಶಾದ ಜಾಜ್ಪುರ. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಇತರೆ ಪ್ರಮುಖ ನಗರಗಳೆಂದರೆ, ಜಪಾನ್‌ನ ತಂಬಾ ಸಸಯಾಮಾ, ಫಿಲಿಪ್ಪೀನ್ಸ್‌ನ ಬಾಗುಯೊ, ಟರ್ಕಿಯ ಕುತಾಹ್ಯ, ಚೀನಾದ ಜಿಂಗ್‌ಡೆಜೆನ್ ಮತ್ತು ವೈಫಾಂಗ್ ಹಾಗೂ ಸ್ಪೇನ್ ಮನಿಸೆಸ್.

ಒಡಿಶಾದ ಜಾಜ್ಪುರ ನಗರವು ಕರಕುಶಲ ಕಲೆಗೆ ಹೆಸರಾಗಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ 3,500 ನೇಕಾರರು, ಕುಶಲಕರ್ಮಿಗಳು ಹಾಗೂ ಕಲಾವಿದರಿದ್ದಾರೆ. ಟಸ್ಸಾರ್ ಕೈಮಗ್ಗ, ಟೆರಾಕೋಟಾ, ಗೋಲ್ಡನ್ ಹುಲ್ಲು ಹಾಗೂ ಕಲ್ಲಿನ ಶಿಲ್ಪಕಲೆಗಳಂತಹ ಕಲಾ ಪ್ರಕಾರಗಳನ್ನು ಇಲ್ಲಿ ಕಾಣಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್