ಈ ಮಾವಿನ ಹಣ್ಣು ಕೆಜಿಗೆ 2.7 ಲಕ್ಷ ರೂಪಾಯಿಗಳು! | 10 ಮುಖ್ಯ ಅಂಶಗಳು

ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣು ಮಿಯಾಜಕಿ ಮಾವಿನ ಹಣ್ಣು. ಜಪಾನಿನ ಮಿಯಾಜಕಿನಲ್ಲಿ ಮೊದಲು ಬೆಳೆಯಲಾಗಿತ್ತು. ಈ ತಳಿಯ ಎರಡು ಹಣ್ಣಿನ ಮರಗಳು ಮಧ್ಯಪ್ರದೇಶದಲ್ಲಿದ್ದು, ಅವುಗಳಿಗೆ ಭಾರಿ ಭದ್ರತೆ ನೀಡಲಾಗಿದೆ
Miyazaki
  • ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಜಪಾನ್​ನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ಹೆಸರು ಮಿಯಾಜಾಕಿ ಮಾವಿನ ಹಣ್ಣು.
  • ಭಾರತದ ಮಧ್ಯಪ್ರದೇಶದಲ್ಲಿ ಈ ಹಣ್ಣಿನ ಎರಡು ಮರಗಳಿವೆ. ಈ ಬಗ್ಗೆ ಉದ್ಯಮಿ ಹರ್ಷ್ ಗೊಯೆಂಕಾ ಎಂಬುವವರು ಟ್ವೀಟ್ ಮಾಡಿದ್ದಾರೆ.
  • ಮಧ್ಯಪ್ರದೇಶದ ರೈತ ಸಂಕಲ್ಪ್ ಸಿಂಗ್ ಪರಿಹಾರ್ ಎಂಬುವವರು ಐದು ವರ್ಷಗಳ ಹಿಂದೆ ಚೆನ್ನೈ ರೈಲಿನಲ್ಲಿ ಅಪರಿಚಿತರಿಂದ ಮಿಯಾಜಾಕಿ ಸಸಿಯನ್ನು 2,500 ರೂಪಾಯಿಗಳಿಗೆ ಕೊಂಡಿದ್ದರು.
  • ರೈತ ಸಂಕಲ್ಪ್ ಸಿಂಗ್ ಜಬಲ್‌ಪುರಕ್ಕೆ ಮರಳಿದ ನಂತರ ಈ ಸಸಿಗಳನ್ನು ನೆಟ್ಟರು, ಆರಂಭದಲ್ಲಿ ಸಾಮಾನ್ಯ ಮಾವಿನ ಮರಗಳಂತಿದ್ದ ಮರಗಳು ಬರು ಬರುತ್ತಾ ಕೆಂಪು ಬಣ್ಣಕ್ಕೆ ತಿರುಗಿದ್ದವು.
  • ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಹಳದಿ ಪಿಲಿಕಾನ್ ಮಾವಿನ ಹಣ್ಣಿನಂತೆ ಮಿಯಾಜಾಕ್ ಹಣ್ಣು ಇರುವುದಿಲ್ಲ.
  • ಈ ಮಾವಿನ ಹಣ್ಣುಗಳನ್ನು ಸೂರ್ಯನ ಮೊಟ್ಟೆ ಎಂದು ಸಹ ಕರೆಯಲಾಗುತ್ತದೆ. ಇವು ಡೈನೋಸಾರ್‌ನ ಮೊಟ್ಟೆಗಳನ್ನು ಹೋಲುತ್ತವೆ. 
  •  ಈ ಹಣ್ಣನ್ನು ಮೊದಲು ಬೆಳೆದ ಜಪಾನಿನ ನಗರ ಮಿಯಾಜಾಕಿಯ ಹೆಸರನ್ನು ಮಾವಿನ ಹಣ್ಣಿನ ಈ ತಳಿಗೆ ಇಡಲಾಗಿದೆ.
  • ಏಪ್ರಿಲ್‌ನಿಂದ ಆಗಸ್ಟ್ ನಡುವೆ ಈ ಹಣ್ಣಿನ ಸುಗ್ಗಿ ಇರುತ್ತದೆ. ಈ ವೇಳೆ ಹಣ್ಣುಗಳನ್ನು ಕೊಯ್ಲು ಮಾಡಲಾಗುತ್ತದೆ.  
  • ಈ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಒಂದು ಹಣ್ಣು 350 ಗ್ರಾಂ ನಿಂದ 900 ಗ್ರಾಂ ವರೆಗೆ ತೂಗುತ್ತವೆ.
  • ಮಿಯಾಜಾಕಿ ತಳಿಯ ಮಾವಿನ ಹಣ್ಣಿ ಬೆಲೆ ಕೆಜಿಗೆ ಬರೊಬ್ಬರಿ 2.7 ಲಕ್ಷ ರೂಪಾಯಿಗಳು. ಈ ತಳಿಯ ಎರಡು ಮಾವಿನ ಮರಗಳನ್ನು ಹೊಂದಿದ್ದು, ಮರಗಳ ಭದ್ರತೆಗೆ ಮೂವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳಿವೆ.

ಈ ಸುದ್ದಿ ಓದಿದ್ದೀರಾ?: ಸುತ್ತಾಟ | ಅಸ್ಸಾಂ ಚಹಾ ತೋಟಗಳಲ್ಲಿ ಕುಳಿತು ಅದ್ಭುತ ಟೀ ಹೀರಲು ತಯಾರಿದ್ದೀರಾ?

ನಿಮಗೆ ಏನು ಅನ್ನಿಸ್ತು?
0 ವೋಟ್