
ಯಾವ ದಿನ, ಎಷ್ಟು ಹೊತ್ತಿಗೆ, ಎಲ್ಲಿ?
ಜುಲೈ 16ರ ಶನಿವಾರ, ಸಂಜೆ ಏಳು ಗಂಟೆಗೆ. ಬೆಂಗಳೂರಿನ (ಉತ್ತರಹಳ್ಳಿ) ಸಂಚಾರಿ ಥಿಯೇಟರ್ 'ಎಮ್ಟಿ ಸ್ಪೇಸ್'ನಲ್ಲಿ.
ಯಾವ ನಾಟಕ, ಯಾವ ತಂಡ?
ಲೇಖಕ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ 'ಪರಿಸರದ ಕತೆಗಳು' ಕೃತಿಯ ಎರಡು ಕತೆಗಳನ್ನು ಆಧರಿಸಿದ ನಾಟಕ 'ಎಂಗ್ಟನ ಪುಂಗಿಯೂ ಕೋಬ್ರಾ ಪೂಜೆಯೂ.' ಸಂಚಾರಿ ಥಿಯೇಟರ್ನ 2021-22ನೇ ಸಾಲಿನ ಆದಿರಂಗದ ಶಿಬಿರಾರ್ಥಿಗಳು ಅಭಿನಯಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೈಸೂರಿನಲ್ಲಿ ಮೂರು ದಿನ ನಡೆಯಲಿದೆ ವಿಜ್ಞಾನ ನಾಟಕೋತ್ಸವ
ಯಾರೆಲ್ಲ ಇರಲಿದ್ದಾರೆ?
ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ ಕಾರ್ಯಕ್ರಮದ ಮುಖ್ಯ ಅತಿಥಿ. ರಂಗಕರ್ಮಿ ಮಂಗಳಾ ಎನ್ ಮತ್ತಿತರರ ಉಪಸ್ಥಿತಿ.
ಆಯೋಜಕರು ಯಾರು?
ಸಂಚಾರಿ ಥಿಯೇಟರ್, ಬೆಂಗಳೂರು.
ನಾಟಕದ ವಿಶೇಷವೇನು?
ರಂಗ ತರಬೇತಿ ಸಂಸ್ಥೆಯೊಂದರ ಶಿಬಿರಾರ್ಥಿಗಳೇ ಅಭಿನಯಿಸಲಿರುವ ನಾಟಕ. ಪೂರ್ಣಚಂದ್ರ ತೇಜಸ್ವಿ ಅವರ ಎರಡು ಕತೆಗಳನ್ನು ಸಮೀಕರಿಸಿ ರೂಪಿಸಿರುವ ವಿಶಿಷ್ಟ ಕಥಾಹಂದರ.