ಮಾತೇ ಮಾತು | ವಾರದ 10 ಸ್ವಾರಸ್ಯಕರ ಹೇಳಿಕೆಗಳು (ನವೆಂಬರ್ 14-20)

ಕೋಲಾರ, ನವೆಂಬರ್ 13

Image

ವರುಣಾದಿಂದ ಗೆದ್ದು ಸಿಎಂ ಆದೆ. ಬಾದಾಮಿಯಿಂದ ಗೆದ್ದು ಪ್ರತಿಪಕ್ಷ ನಾಯಕನಾದೆ. ಕೋಲಾರದಿಂದ ಗೆದ್ದವರು ಸಿಎಂ ಆಗಬಾರದಾ?

- ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ

ಗದಗ, ನವೆಂಬರ್ 13

Image

ಒಂದಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲಿ ಕೇಸರಿ ಇದೆ, ಅದನ್ನು ಏಕೆ ಬಿಟ್ಟುಕೊಂಡಿದ್ದಾರೆ? ಅದನ್ನು ಪೂರ್ತಿ ಹಸಿರು ಮಾಡಿಕೊಂಡುಬಿಡಲಿ.

- ಬಿ ಸಿ ನಾಗೇಶ
ಶಿಕ್ಷಣ ಸಚಿವ
(‘ವಿವೇಕ’ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವ ಕುರಿತ ಪ್ರಶ್ನೆಗೆ ಉತ್ತರಿಸುತ್ತ)


ನವದೆಹಲಿ, ನವೆಂಬರ್ 14

Image

ಒಡೆದು ಆಳುವುದು ಬಿಜೆಪಿಯವರ ಕೆಲಸ. ಹಾಗಾಗಿಯೇ ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’ ಶುರುಮಾಡಬೇಕಾಯಿತು.

- ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ


ಕೋಯಿಕ್ಕೋಡ್, ಕೇರಳ, ನವೆಂಬರ್ 14

Image

ನೆಹರೂ ಅವರಿಗೆ ಪ್ರಜಾಪ್ರಭುತ್ವ ಕಾಪಾಡುವುದು ಎಷ್ಟೊಂದು ಆದ್ಯತೆಯ ಕೆಲಸ ಆಗಿತ್ತೆಂದರೆ, ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲು ಒಲವು ತೋರಿದ್ದರು. ಕೋಮುವಾದದೊಂದಿಗೆ ರಾಜಿ ಮಾಡಿಕೊಳ್ಳುವಷ್ಟು ವಿಶಾಲ ಮನಸ್ಸು ಅವರಿಗಿತ್ತು.

- ಕೆ ಸುಧಾಕರನ್
ಕೇರಳ ಕಾಂಗ್ರೆಸ್ ಅಧ್ಯಕ್ಷ


ಅಹಮದಾಬಾದ್, ನವೆಂಬರ್ 15

Image

ನಿಮ್ಮ ಒಪ್ಪಂದ ಪತ್ರ ಒಂದೂಕಾಲು ಪುಟ ಇದೆ. ಒಪ್ಪಂದದಲ್ಲಿ ಒಂದೇ ಒಂದು ಷರತ್ತನ್ನೂ ವಿಧಿಸಿಲ್ಲ. ಟೆಂಡರ್ ಪ್ರಕ್ರಿಯೆ ಪಾಲಿಸಿಲ್ಲ. ಆಸಕ್ತಿ ವ್ಯಕ್ತಪಡಿಸುವ ಪತ್ರವನ್ನೂ ಕೇಳಿಲ್ಲ. ಇಬ್ಬರ ನಡುವೆ ಇನಾಮು ನೀಡುವ ಅಥವಾ ಪಡೆಯುವ ಹೊಂದಾಣಿಕೆ ನಡೆದಿತ್ತೇ?

-ನ್ಯಾ. ಅರವಿಂದ್ ಕುಮಾರ್
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
(ಮೊರ್ಬಿ ಸೇತುವೆ ದುರಂತ ಕುರಿತ ವಿಚಾರಣೆ ಸಂದರ್ಭ)


ಬೆಂಗಳೂರು, ನವೆಂಬರ್ 16

Image

ಮುಂದಿನ ಬಾರಿ ಜೆಡಿಎಸ್ ಸಿಎಂ ಬಗ್ಗೆ ಜ್ಯೋತಿಷಿಗಳಷ್ಟೇ ಅಲ್ಲ, ಹಲವೆಡೆ ಜನರಿಂದಲೂ ಅದೇ ಮಾತು ಕೇಳಿಬರುತ್ತಿದೆ. ನಮ್ಮ ಕುಟುಂಬ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. ಮುಂದಿನ ಬಾರಿ ಜೆಡಿಎಸ್ ಬಿಟ್ಟು ಬೇರೆ ಯಾರೂ ಸಿಎಂ ಆಗುವುದಿಲ್ಲ.

- ಎಚ್ ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ


ಬೆಳಗಾವಿ, ನವೆಂಬರ್ 16

Image

‘ಹಿಂದೂಯಿಸಂ’ ಅನ್ನು ಧರ್ಮ ಎಂದು ಪರಿಗಣಿಸಿದ ಮಾತ್ರಕ್ಕೆ ಲಿಂಗಾಯತರೆಲ್ಲ ಹಿಂದೂಗಳೆನಿಸಿಕೊಳ್ಳಲು ಸಾಧ್ಯವಿಲ್ಲ. ಲಿಂಗಾಯತ ಎಂಬುದು ಅವೈದಿಕ ಧರ್ಮ. ಆಚರಣೆ ಮತ್ತು ಸಂಪ್ರದಾಯದಲ್ಲಿ ಲಿಂಗಾಯತರಿಗೂ ವೈದಿಕರಿಗೂ ವೈರುಧ್ಯವಿದೆ. ಲಿಂಗಾಯತ ಧರ್ಮದ ಚಳವಳಿ ಇನ್ನೂ ಜೀವಂತ.

- ತೋಂಟದ ಸಿದ್ದಲಿಂಗ ಸಿದ್ದರಾಮ ಸ್ವಾಮಿ


 ಮದ್ದೂರು, ಮಂಡ್ಯ ಜಿಲ್ಲೆ, ನವೆಂಬರ್ 16

Image

ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ, ಶಾಸಕ ಸುರೇಶ್ ಗೌಡ ಹಾಗೂ ನಾನು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಅಖಾಡಕ್ಕಿಳಿದರೆ, ಹೆಚ್ಚಿನ ಮತಗಳಿಂದ ನಾನು ಗೆಲ್ಲದಿದ್ದಲ್ಲಿ ಶಿರಚ್ಛೇದನ ಮಾಡಿಕೊಳ್ಳುತ್ತೇನೆ.

- ಎಲ್ ಆರ್ ಶಿವರಾಮೇಗೌಡ
ಮಾಜಿ ಸಚಿವ


ಹೈದರಾಬಾದ್, ನವೆಂಬರ್ 17

Image

ನಾನು ವಿಧಾನಸಭೆಗೆ ಮತ್ತೆ ಹೋಗಬೇಕು ಅಂತ ನಿಮಗನ್ನಿಸಿದರೆ, ನಾನು ರಾಜಕೀಯದಲ್ಲಿ ಉಳಿಯಬೇಕು ಅಂತ ನಿಮಗೆ ಅನ್ನಿಸಿದರೆ, ನನ್ನಿಂದ ಈ ರಾಜ್ಯಕ್ಕೆ ನ್ಯಾಯ ಸಿಗಬೇಕೆಂದು ನೀವು ಬಯಸಿದರೆ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಮತ ನೀಡಿ. ಈಗಲೇ ಹೇಳುತ್ತಿರುವೆ, ಇದು ನನ್ನ ಕೊನೆಯ ಚುನಾವಣೆ.

- ಚಂದ್ರಬಾಬು ನಾಯ್ಡು
ಟಿಡಿಪಿ ನಾಯಕ


ಹುಬ್ಬಳ್ಳಿ, ನವೆಂಬರ್ 18

Image

ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲಿ.

- ಸಂತೋಷ್ ಲಾಡ್
ಕಾಂಗ್ರೆಸ್ ಮುಖಂಡ

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180